Siddaramaiah Song: ಕರ್ನಾಟಕಕ್ಕಾಗಿ 'ಸಿದ್ದಯೋಗಿ' ಸಿದ್ದರಾಮಯ್ಯ ಸಾಂಗ್ ವೈರಲ್‌: ಕನ್ನಡ ಕಾಯೋ ಸೈನಿಕನೆಂದು ಅಭಿಮಾನಿಗಳ ಬಣ್ಣನೆ

ಬೆಂಗಳೂರು, ಏಪ್ರಿಲ್ 19: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಮಾನಿಗಳು ' ಸಿದ್ಧಯೋಗಿ ' ಎನ್ನುವ ಶೀರ್ಷಿಕೆಯ ಹಾಡನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಕರ್ನಾಟಕ ರಾಜ್ಯಕ್ಕಾಗಿ ಮಾಡಿದ ಒಳ್ಳೆಯ ಕೆಲಸಗಳ ಮೂಲಕ ಅವರೇ ಮತ್ತೆ ಕರುನಾಡನ್ನು ಹಾಗೂ ಕನ್ನಡಿಗರನ್ನು ಕಾಯುವ ನಾಯಕ ಎಂದು ಈ ಹಾಡಿನಲ್ಲಿ ಬಣ್ಣಿಸಲಾಗಿದೆ. ಈ ಹಾಡು ವೈರಲ್‌ ಆಗುತ್ತಿದೆ.

' ಸಿದ್ದಯೋಗಿ ಸಿದ್ದರಾಮಯ್ಯ, ನಮ್ಮೆಲ್ಲರ ಕಾಯೋ ಸೈನಿಕನಯ್ಯ ' ಎಂದು ಆರಂಭವಾಗುವ ಈ ಹಾಡು ಕೇಳುಗರಿಗೆ ಮುದ ನೀಡುತ್ತದೆ. ಕರ್ನಾಟಕದ ಅಭಿವೃದ್ಧಿ ಮತ್ತು ಪ್ರಗತಿಗೆ ಸಿದ್ದರಾಮಯ್ಯನವರ ಕೊಡುಗೆಗಳು ಅನೇಕ. ಅನ್ನಭಾಗ್ಯ ಯೋಜನೆಯ ಯಶಸ್ವಿ ಅನುಷ್ಠಾನ, ಹಲವಾರು ಮೂಲಸೌಕರ್ಯ ಯೋಜನೆಗಳ ಪ್ರಾರಂಭ ಮತ್ತು ಸಾಮಾಜಿಕ ನ್ಯಾಯ ಮತ್ತು ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆಯತ್ತ ಸಿದ್ದರಾಮಯ್ಯ ಅವರು ಮಾಡಿದ ಪ್ರಯತ್ನಗಳು ಸಾಕಷ್ಟು. ಹೀಗಾಗಿಯೇ ಅವರು ಜನನಾಯಕನಾಗಿ ಮನ್ನಣೆ ಪಡೆದಿದ್ದಾರೆ ಎಂದು ಸಿದ್ದರಾಮಯ್ಯ ಅವರ ನಾಯಕತ್ವದ ಗುಣಗಳು, ದೂರದೃಷ್ಟಿ ಮತ್ತು ಜನರ ಕಲ್ಯಾಣಕ್ಕಾಗಿ ಅವರ ಬದ್ಧತೆಯ ಕುರಿತಂತೆ ಈ ಹಾಡಿನಲ್ಲಿ ವರ್ಣಿಸಲಾಗಿದೆ.

Karnataka Elections: song on siddaramaiah released during the day of nomination

2013ರಿಂದ 2018ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಸಿದ್ದರಾಮಯ್ಯ ಅವರು ದಶಕಗಳಿಂದ ಕರ್ನಾಟಕ ರಾಜಕೀಯದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ. ರಾಜ್ಯದ ಅಭಿವೃದ್ಧಿಗೆ, ವಿಶೇಷವಾಗಿ ಆರೋಗ್ಯ, ಶಿಕ್ಷಣ ಮತ್ತು ಕೃಷಿಯಂತಹ ಕ್ಷೇತ್ರಗಳಲ್ಲಿ ಅವರು ನೀಡಿದ ಕೊಡುಗೆಗಳು ಅವರಿಗೆ ವ್ಯಾಪಕವಾದ ಮೆಚ್ಚುಗೆ ಮತ್ತು ಗೌರವವನ್ನು ತಂದುಕೊಟ್ಟಿವೆ ಎಂದು ಹಾಡಿನಲ್ಲಿ ಬಣ್ಣಿಸಲಾಗಿದೆ.

'ಸಿದ್ಧಯೋಗಿ ಸಿದ್ದರಾಮಯ್ಯ' ಹಾಡನ್ನು ಬಿಡುಗಡೆ ಮಾಡುವ ಮೂಲಕ ತಮ್ಮ ನಾಯಕನ ಬಗ್ಗೆ ಜನರು ಹಾಗೂ ಅಭಿಮಾನಿಗಳು ಹೊಂದಿರುವ ಅಪಾರ ಪ್ರೀತಿ ಮತ್ತು ಗೌರವವನ್ನು ವ್ಯಕ್ತಪಡಿಸಲಾಗಿದೆ. ಈ ಹಾಡು ಇದೀಗ ವಿವಿಧ ಸೋಶಿಯಲ್ ಮಿಡಿಯಾಗಳಲ್ಲಿ ಶೇರ್ ಆಗುತ್ತಿದ್ದು, ಸಿದ್ದರಾಮಯ್ಯ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಈ ಹಾಡನ್ನು ಕುತೂಹಲದಿಂದ ಎಲ್ಲೆಡೆ ಹಂಚಿಕೊಳ್ಳುತ್ತಿದ್ದಾರೆ.

ಸಿದ್ದರಾಮಯ್ಯ ನಾಮಪತ್ರ

ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದಿಂದ ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ, ಮಾಜಿ ಸಚಿವ ಎಚ್‌ಸಿ ಮಹದೇವಪ್ಪ ಹಾಗೂ ಕಾಂಗ್ರೆಸ್‌ ಮುಖಂಡರು ಉಪಸ್ಥಿತರಿದ್ದರು.

ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ವರುಣಾದಿಂದ ಹಾಲಿ ಕಾಂಗ್ರೆಸ್ ಶಾಸಕರಾಗಿದ್ದಾರೆ. 75 ವರ್ಷ ವಯಸ್ಸಿನ ಸಿದ್ದರಾಮಯ್ಯ ಎಂಟು ಬಾರಿ ಶಾಸಕರಾಗಿದ್ದಾರೆ. ಈ ಹಿಂದೆ ವರುಣಾದಿಂದ ಎರಡು ಬಾರಿ ಗೆದ್ದಿದ್ದರು ಮತ್ತು 2008 ರಲ್ಲಿ ಇಲ್ಲಿಂದ ಗೆದ್ದು ನಂತರ ವಿರೋಧ ಪಕ್ಷದ ನಾಯಕರಾದರು. 2013ರ ವಿಧಾನಸಭೆ ಚುನಾವಣೆಯಲ್ಲಿ ವರುಣಾದಿಂದ ಜಯ ಗಳಿಸಿದ ನಂತರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+