ಬಿಜೆಪಿಗೆ ಏಕೆ ಮತಹಾಕಬಾರದು? ಸಿದ್ದು ನೀಡಿದ 5 ಕಾರಣ

Recommended Video

      ಬಿಜೆಪಿಗೆ ಮತ ಯಾಕೆ ಹಾಕಬಾರದು ಎಂಬ ಬಗ್ಗೆ 5 ಕಾರಣಗಳನ್ನ ಕೊಟ್ಟ ಸಿದ್ದು | Oneindia Kannada

      ಬೆಂಗಳೂರು, ಮೇ 07: ಚುನಾವಣೆ ದಿನ ಹತ್ತಿರ ಬರುತ್ತಿದ್ದಂತೆಯೇ ರಾಜಕಾರಣಿಗಳ ಟ್ವಿಟ್ಟರ್ ವಾರ್ ಸಹ ತಾರಕಕ್ಕೇರಿದೆ. ಕಳೆದ ಚುನಾವಣೆಗಳಲ್ಲಿ ಸಾಮಾಜಿಕ ಮಾಧ್ಯಮಗಳು ಇಷ್ಟೊಂದು ಜನಪ್ರಿಯವಾಗಿರಲಿಲ್ಲ, ಕೈಗೆಟಕುತ್ತಲೂ ಇರಲಿಲ್ಲ. ಆದರೆ ಈಗ ಚುನಾವಣಾ ಪ್ರಚಾರಕ್ಕೆ, ಕಾಳೆಯುವುದಕ್ಕೆ, ತೇಜೋವಧೆಗೆ ಎಲ್ಲಕ್ಕೂ ಸುಲಲಿತವಾಗಿ ಬಳಕೆಯಾಗುತ್ತಿರುವುದು ಸಾಮಾಜಿಕ ಮಾಧ್ಯಮ.

      ಟ್ವಿಟ್ಟರ್ ಅನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿರುವ ರಾಜಕೀಯ ನಾಯಕರು ರಾಜಕೀಯ ವಿರೋಧಿಗಳನ್ನು ಬಗ್ಗುಬಡಿಯುತ್ತಿದ್ದಾರೆ. ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಹೊರತಾಗಿಲ್ಲ. ದಿನೇ ದಿನೇ ಪಂಚಪ್ರಶ್ನೆ, ದಶಪ್ರಶ್ನೆ ಎನ್ನುತ್ತ ಬಿಜೆಪಿಗರ ಕಾಲೆಳೆಯುತ್ತಿರುವ ಸಿದ್ದರಾಮಯ್ಯ ಇದೀಗ ಜನರು ಬಿಜೆಪಿಗೆ ಏಕೆ ಮತಹಾಕಬಾರದು ಎಂದು ಐದು ಕಾರಣಗಳನ್ನು ನೀಡಿದ್ದಾರೆ.

      ಇದಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಜನರು ಬಿಜೆಪಿಗೆ ಏಕೆ ಮತಹಾಕಬೇಕು ಎಂಬುದನ್ನು ಕೆಲವು ಕಾರಣ ನೀಡಿದ್ದರು. ಅದಕ್ಕೆ ಸಿದ್ದರಾಮಯ್ಯ ಅವರ ಕೌಂಟರ್ ಇಲ್ಲಿದೆ.

      ಭ್ರಷ್ಟ ಸರ್ಕಾರ

      'ಬಿಜೆಪಿಗೆ ಜನರು ಏಕೆ ಮತ ಹಾಕಬೇಕು ಎಂದು ಬಿ ಎಸ್ ಯಡಿಯೂರಪ್ಪನವರು ಐದು ಕಾರಣಗಳನ್ನು ನೀಡಿದ್ದಾರೆ. ಆದರೆ ಜನರು ಬಿಜೆಪಿಗೆ ಏಕೆ ಮತಹಾಕಬಾರದು ಎಂದು ನಾನು 5 ಕಾರಣಗಳನ್ನು ನೀಡುತ್ತೇನೆ.'

      "1. 2008 ರಿಂದ 2013 ರವರೆಗೆ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ಭ್ರಷ್ಟ ಸರ್ಕಾರವನ್ನು ಬಿಜೆಪಿ ನಡೆಸಿದೆ. ಒಬ್ಬ ಮುಖ್ಯಮಂತ್ರಿ ಐವರು ಸಚಿವರು ಜೈಲಿಗೆ ಹೋಗಿದ್ದರು"
      -ಸಿದ್ದರಾಮಯ್ಯ

      Array

      ಮೂವರು ಮುಖ್ಯಮಂತ್ರಿಗಳು

      2. "ಬಿಜೆಪಿ ಅತ್ಯಂತ ಅಸ್ಥಿರ ಸರ್ಕಾರವನ್ನು ರಚಿಸಿದೆ. ಐದು ವರ್ಷಗಳಲ್ಲಿ ಮೂರು ಮುಖ್ಯಮಂತ್ರಿಗಳನ್ನು ಬದಲಾಯಿಸಿದೆ. ಶಾಸಕರನ್ನು ಆಪರೇಶನ್ ಕಮಲದ ಮೂಲಕ ಮಾರಿದೆ, ಕೊಂಡುಕೊಂಡಿದೆ! ರೆಸಾರ್ಟ್ ನಿಂದ ರೆಸಾರ್ಟಿಗೆ ರಾಜಕೀಯ ಮಾಡಿದ್ದಾರೆ. ಬಿಜೆಪಿಯನ್ನು ಗೆಲ್ಲಿಸಿದ್ದೇ ಆದಲ್ಲಿ ಕರ್ನಾಟಕ ಮತ್ತೆ ಅದೇ ಪರಿಸ್ಥಿತಿ ಎದುರಿಸಬೇಕಾಗುತ್ತದೆ."
      -ಸಿದ್ದರಾಮಯ್ಯ

      ಸ್ವಾತಂತ್ರ್ಯಕ್ಕೆ ಬೆಲೆ ಇಲ್ಲ

      3. "ಬಿಜೆಪಿ ಎಂದಿಗೂ ಸ್ವಾತಂತ್ರ್ಯಕ್ಕೆ ಬೆಲೆ ನೀಡುವುದಿಲ್ಲ. ಜನರು ಬಯಸಿದಂತೆ ಬದುಕಲು ಬಿಜೆಪಿ ಎಂದಿಗೂ ಅವಕಾಶ ಮಾಡಿಕೊಡುವುದಿಲ್ಲ. ಅವರು ಅಕಸ್ಮಾತ್ ಅಧಿಕಾರಕ್ಕೆ ಬಂದರೆ ವಸ್ತ್ರ ಸಂಹಿತೆ, ಆಹಾರ ಸಂಹಿತೆ ಅಷ್ಟೇ ಅಲ್ಲ ನೀವು ಯಾರನ್ನು ಪ್ರೀತಿಸಬೇಕು ಎಂಬುದಕ್ಕೂ ಸಂಹಿತೆ ರೂಪಿಸುತ್ತಾರೆ. ಅಷ್ಟೇ ಅಲ್ಲ ಕನ್ನಡದ ಮೇಲೆ ಹಿಂದಿ ಹೇರುತ್ತಾರೆ"
      -ಸಿದ್ದರಾಮಯ್ಯ

      ಬಿಜೆಪಿಗೆ ಶಾಂತಿ ಬೇಕಿಲ್ಲ

      4. "ಬಿಜೆಪಿಗೆ ಎಂದಿಗೂ ಶಾಂತಿ ಬೇಕಿಲ್ಲ. ಅವರೇನಾದರೂ ಅಧಿಕಾರಕ್ಕೆ ಬಂದರೆ ರಸ್ತೆಯಲ್ಲೇ ಕೋಮುವಾದ ಆರಂಭವಾಗುತ್ತದೆ. ಚರ್ಚ್ ದಾಳಿ, ಪಬ್ ದಾಳಿ ಗಳು ಮತ್ತೆ ಆರಂಭವಾಗುತ್ತವೆ. ಗೋಹತ್ಯೆ ನಡೆಸುವವರು ಬೀದಿಗೆ ಬರುತ್ತಾರೆ. ಇವೆಲ್ಲ ಜೀವನಕ್ಕೂ ಒಳ್ಳೆಯದಲ್ಲ, ವ್ಯವಹಾರಕ್ಕೂ ಒಳ್ಳೆಯದಲ್ಲ. ಇದರಿಂದ ನಿರುದ್ಯೋಗ ತಲೆದೂರುತ್ತದೆ."

      ವಚನ ಭ್ರಷ್ಟ ಬಿಜೆಪಿ

      5. "ಬಿಜೆಪಿ ಎಂದಿಗೂ ತಾನು ನೀಡಿದ ವಚನವನ್ನು ಉಳಿಸಿಕೊಳ್ಳುವುದಿಲ್ಲ. ಕೇಂದ್ರದಲ್ಲಿ ಅವರು ಎಲ್ಲರಿಗೂ 15 ಲಕ್ಷ ರೂ, ಉದ್ಯೋಗ ನೀಡುತ್ತೇವೆ ಎಂದರು. ಆರ್ಥಿಕ ಪ್ರಗತಿಯಾಗುತ್ತದೆ ಎಂದರು. ಆದರೆ ವಾಸ್ತವದಲ್ಲಿ ಅವರು ನೋಟ್ ಬ್ಯಾನ್ ಮಾಡಿದರು, ಆರ್ಥಿಕ ಪ್ರಗತಿಯನ್ನು ಕೊಂದರು. ಅವರು ರೈತ ವಿರೋಧಿ, ಸ್ತ್ರೀ ವಿರೋಧಿ, ಯುವಕರ ವಿರೋಧಿ, ದಲಿತ ವಿರೋಧಿ, ಅಲ್ಪಸಂಖ್ಯಾತರ ವಿರೋಧಿ ಮತ್ತು ವ್ಯವಹಾರ ವಿರೋಧಿ"

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+