ಕರ್ನಾಟಕ ಚುನಾವಣೆ : ಬೀದರ್‌ನಲ್ಲಿ ಗೆದ್ದವರು, ಸೋತವರು

Posted By: Gururaj
Subscribe to Oneindia Kannada

ಬೀದರ್, ಮೇ 16 : ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಬೀದರ್ ಜಿಲ್ಲೆಯ 6 ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಿದೆ. ಬಿಜೆಪಿ ಮತ್ತು ಜೆಡಿಎಸ್ ತಲಾ ಒಂದು ಕ್ಷೇತ್ರವನ್ನು ಹಂಚಿಕೊಂಡಿವೆ.

ಹೈದರಾಬಾದ್-ಕರ್ನಾಟಕ ಭಾಗದ ಪ್ರಮುಖ ನಗರ ಬೀದರ್. ಕರ್ನಾಟಕ ರಾಜ್ಯದ ತುತ್ತ ತುದಿಯಲ್ಲಿರುವ ಜಿಲ್ಲೆ ಬೀದರ್. ಬೀದರ್‌ಗೆ ಹೋದರೆ ಕೋಟೆ ನೋಡದೇ ವಾಪಸ್ ಬರಬೇಡಿ ಎಂಬ ಮಾತಿದೆ.

ಬೀದರ್ ಕ್ಷೇತ್ರ ಪರಿಚಯ

ಬೀದರ್ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗುತ್ತಿದೆ. 2013ರ ಚುನಾವಣೆಯಲ್ಲಿ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ 4 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

Karnataka elections results 2018 : Bidar district winners and losers

ಔರಾದ್ ಕ್ಷೇತ್ರದಲ್ಲಿ ಬಿಜೆಪಿಯ ಪ್ರಭು ಚೌವ್ಹಾಣ್, ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಜೆಡಿಎಸ್‌ನ ಬಂಡೆಪ್ಪ ಖಾಶೆಂಪುರ ಅವರು ಜಯಗಳಿಸಿದ್ದಾರೆ. ಎರಡೂ ಕ್ಷೇತ್ರಗಳನ್ನು ಬಿಜೆಪಿ ಮತ್ತು ಜೆಡಿಎಸ್ ಹಂಚಿಕೊಂಡಿವೆ.

ಬೀದರ್ ದಕ್ಷಿಣ ಕ್ಷೇತ್ರದ ಚುನಾವಣೆ ಭಾರೀಕುತೂಹಲಕ್ಕೆ ಕಾರಣವಾಗಿತ್ತು. ಕರ್ನಾಟಕ ಮಕ್ಕಳ ಮುಖ್ಯಸ್ಥ, ನೈಸ್ ಸಂಸ್ಥೆಯ ಅಶೋಕ್ ಖೇಣಿ ಅವರು ಕಾಂಗ್ರೆಸ್‌ ಸೇರಿ ಚುನಾವಣಾ ಕಣಕ್ಕೆ ಇಳಿದಿದ್ದರು. ಆದರೆ, ಜೆಡಿಎಸ್‌ನ ಬಂಡೆಪ್ಪ ಕಾಶೆಂಪೂರ ಅವರು ಅಶೋಕ್ ಖೇಣಿ ಅವರನ್ನು ಸೋಲಿಸಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ

ಕ್ಷೇತ್ರ ಗೆದ್ದವರು ಗಳಿಸಿದ
ಮತಗಳು
ಪಕ್ಷ ಸೋತವರು ಗಳಿಸಿದ
ಮತಗಳು
ಪಕ್ಷ
ಬಸವಕಲ್ಯಾಣ ಬಿ.ನಾರಾಯಣ ರಾವ್ 61,425 ಕಾಂಗ್ರೆಸ್ ಮಲ್ಲಿಕಾರ್ಜುನ ಖೂಬಾ 44,153 ಬಿಜೆಪಿ
ಹುಮ್ನಾಬಾದ್ ರಾಜಶೇಖರ ಪಾಟೀಲ್ 74,945 ಕಾಂಗ್ರೆಸ್ ಸುಭಾಷ ಕಲ್ಲೂರ 43,131 ಬಿಜೆಪಿ
ಬೀದರ್ ದಕ್ಷಿಣ
ಬಂಡೆಪ್ಪ ಖಾಶೆಂಪೂರ 54,077 ಜೆಡಿಎಸ್ ಡಾ.ಶೈಲೇಂದ್ರ ಬೆಲ್ದಾಳೆ 41,611 ಬಿಜೆಪಿ
ಬೀದರ್
ರಹೀಮ್ ಖಾನ್ 73,270 ಕಾಂಗ್ರೆಸ್ ಸೂರ್ಯಕಾಂತ್ ನಾಗಮಾರಪಳ್ಳಿ 63,025 ಬಿಜೆಪಿ
ಭಾಲ್ಕಿ ಈಶ್ವರ್ ಖಂಡ್ರೆ 84,673 ಕಾಂಗ್ರೆಸ್ ಸಿ.ಕೆ ಸಿದ್ರಾಮ್ 63,235 ಬಿಜೆಪಿ
ಔರಾದ್
ಪ್ರಭು ಚವ್ಹಾಣ್ 75,061 ಬಿಜೆಪಿ ವಿಜಯ ಕುಮಾರ್ ಕೆ. 64,152 ಕಾಂಗ್ರೆಸ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Election Results 2018 Updates. Here is a list of candidates who won in Karnataka assembly elections 2018 in Bidar district.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X