ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಬೇಕಾದ 11 ಕ್ಷೇತ್ರಗಳು
ಬೆಂಗಳೂರು, ಏಪ್ರಿಲ್ 22 : ಕರ್ನಾಟಕ ಬಿಜೆಪಿ 2018ರ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ, 11 ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ.
ಏಪ್ರಿಲ್ 24ರ ಮಂಗಳವಾರ ನಾಮಪತ್ರಗಳನ್ನು ಸಲ್ಲಿಸಲು ಅಂತಿಮ ದಿನವಾಗಿದೆ. ಆದರೆ, ಇನ್ನೂ ಬಿಜೆಪಿ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಮುಖ್ಯವಾಗಿ ವರುಣಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಘೋಷಣೆಯಾಗಿಲ್ಲ.

ಯಶವಂತಪುರ, ಬಾದಾಮಿ, ಬಿಟಿಎಂ ಲೇಔಟ್, ವರುಣಾ ಸೇರಿದಂತೆ 11 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆಯಾಗಿಲ್ಲ. ವರುಣಾ ಕ್ಷೇತ್ರದಲ್ಲಿ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರು ಅಭ್ಯರ್ಥಿ ಎಂಬ ಸುದ್ದಿ ಹಬ್ಬಿದೆ. ಆದರೆ, ಇದುವರೆಗೂ ಅಧಿಕೃತ ಘೋಷಣೆಯಾಗಿಲ್ಲ.
ಯಶವಂತಪುರ ಕ್ಷೇತ್ರದಿಂದ ಸಂಸದೆ ಶೋಭಾ ಕರಂದ್ಲಾಜೆ ಅವರು ಸ್ಪರ್ಧಿಸುವ ಸಾಧ್ಯತೆ ಇದೆ. ಬಿಟಿಎಂ ಲೇಔಟ್ ಕ್ಷೇತ್ರದಲ್ಲಿ ವಿವೇಕ್ ರೆಡ್ಡಿ ಅವರ ಹೆಸರು ಕೇಳಿಬರುತ್ತಿದೆ.
ಅಭ್ಯರ್ಥಿ ಘೋಷಣೆಯಾಗಬೇಕಾದ ಕ್ಷೇತ್ರ
* ರಾಮನಗರ
* ಕನಕಪುರ
* ಭದ್ರಾವತಿ
* ಬೇಲೂರು
* ಹಾಸನ
* ಸಕಲೇಶಪುರ
* ಶಿಡ್ಲಘಟ್ಟ
* ಯಶವಂತಪುರ
* ವರುಣಾ
* ಬಾದಾಮಿ
* ಬಿ.ಟಿ.ಎಂ.ಲೇಔಟ್












Click it and Unblock the Notifications