ಸಿದ್ದರಾಮಯ್ಯ ಕೋಲಾರ ಬಿಟ್ಟು ವರುಣ ಕ್ಷೇತ್ರದಲ್ಲಿ ನಿಲ್ತಾರೆ: ವರ್ತೂರ್ ಪ್ರಕಾಶ್ ಭವಿಷ್ಯ
ಸಿದ್ದರಾಮಯ್ಯ ಕೋಲಾರ ಅಭ್ಯರ್ಥಿ ಅಲ್ಲ, ಅವರಿಗೆ ಯಾರು ತಲೆ ಕೆಡಿಸಿ ಕೋಲಾರಕ್ಕೆ ಕರೆದುಕೊಂಡು ಬಂದಿದ್ದಾರೆ ಎಂದು ವರ್ತೂರ್ ಪ್ರಕಾಶ್ ಹೇಳಿದ್ದಾರೆ.
ಕೋಲಾರ,ಫೆಬ್ರವರಿ24: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರ ಎಲ್ಲರ ಗಮನ ಸೆಳೆದಿರುವಂತಹ ಕ್ಷೇತ್ರವಾಗಿದ್ದು, ಈ ಬಾರಿ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಸಿದ್ದರಾಮಯ್ಯ ಅವರನ್ನ ಸೋಲಿಸಲು ಬಿಜೆಪಿ ಸಾಕಷ್ಟು ತಯಾರಿ ನಡೆಸಿದೆ.
ಇತ್ತ ಕೋಲಾರ ಕ್ಷೇತ್ರ ಬಿಜೆಪಿ ಅಭ್ಯರ್ಥಿಯಾಗಿರುವ ಸಿದ್ದರಾಮಯ್ಯ ಅವರ ಶಿಷ್ಯ ವರ್ತೂರ್ ಪ್ರಕಾಶ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಅವರ ಪಾಪದ ಕೊಡೆ ತುಂಬಿದೆ. ಅವರು ಎಲ್ಲೋ ಹೋಗಿ ಸೋಲುವುದಕ್ಕಿಂತ ಕೋಲಾರದಲ್ಲಿ ನಿಂತೂ ಸೋಲಲ್ಲಿ, ದಮ್ಮು ತಾಕತ್ತು ಇದ್ದರೆ ಬಾದಾಮಿಯಲ್ಲಿ ಹೋಗಿ ಸ್ಪರ್ಧೆ ಮಾಡಲಿ ಎಂದು ಸವಾಲ್ ಹಾಕಿದ್ದಾರೆ.

ನನ್ನ ಸೋಲಿಸಲು ಯಾರಿಂದಲೂ ಆಗಲ್ಲ. ನನ್ನ ಸೋಲಿಸಲು ಕೋಲಾರಕ್ಕೆ ಬಂದಿದ್ದಾರೆ, ಕೊನೆ ಕ್ಷಣದಲ್ಲಿ ಸಿದ್ದರಾಮಯ್ಯ ಯೂ ಟನ್ ಮಾಡುತ್ತಾರೆ. ಸಿದ್ದರಾಮಯ್ಯ ಅವರು ಕೋಲಾರ ಬಿಟ್ಟು ವರುಣ ಕ್ಷೇತ್ರದಲ್ಲಿ ನಿಲ್ಲುತ್ತಾರೆ ಎಂದು ವರ್ತೂರ್ ಪ್ರಕಾಶ್ ಹೇಳಿದರು.
ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ನಿಲ್ಲುವ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಮನೆಗೆ ಎರಡೆರಡು ಟಿಕೆಟ್ ಕೊಡುತ್ತಾರಾ? ಸಿದ್ದರಾಮಯ್ಯ ಏನು ಹೈಕಮಾಂಡ್ ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯ ಕೋಲಾರ ಅಭ್ಯರ್ಥಿ ಅಲ್ಲ, ಅವರಿಗೆ ಯಾರು ತಲೆ ಕೆಡಿಸಿ ಕೋಲಾರಕ್ಕೆ ಕರೆದುಕೊಂಡು ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಮುದಾಯದ ಸ್ವಾಮೀಜಿಗಳ ಸಂಧಾನ ಮಾತುಕತೆ ವಿಚಾರವಾಗಿ ಮಾತನಾಡಿದ ಅವರು,ನಾನು ಸಮುದಾಯದ ಸ್ವಾಮೀಜಿ ಜೊತೆ ಸಂಧಾನ ಮಾತುಕತೆ ಮಾಡಿಲ್ಲ,ಅಷ್ಟು ಕೇಳಮಟ್ಟದ ರಾಜಕಾರಣಿ ನಾನು ಅಲ್ಲ. ಸಿದ್ದರಾಮಯ್ಯ ಗಟ್ಟಿ ಮನುಷ್ಯ, ಕೋಲಾರದಲ್ಲಿ ತೊಡೆ ತಟ್ಟಿದ ಮೇಲೆ ಹಿಂದೆ ಹೋಗಲ್ಲ, ನಾನು ನೇರವಾಗಿ ಸಿದ್ದರಾಮಯ್ಯ ಮೇಲೆ ಸ್ಪರ್ಧೆ ಮಾಡುವೆ, ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ, ಜೆಡಿಎಸ್ ನಲ್ಲಿ ಸಿಎಂಆರ್ ಶ್ರೀನಾಥ್ ಮತ್ತು ಬಿಜೆಪಿಯಲ್ಲಿ ನಾನು ಕಣದಲ್ಲಿರುತ್ತವೆ ಎಂದರು.

ಕೋಲಾರದಲ್ಲಿ ಸ್ಪರ್ಧೆ ಮಾಡಲು ಸಚಿವ ಮುನಿರತ್ನ,ವೈ.ಎನ್. ನಾರಾಯಣಸ್ವಾಮಿ ಬಂದರೂ ಸ್ವಾಗತ ಮಾಡುವೆ.ಬಿಜೆಪಿಯ ರಾಷ್ಟ್ರೀಯ ಪಕ್ಷ, ಯಾರೇ ನಿಂತರೂ ಅವರಿಗೆ ಕೆಲಸ ಮಾಡುತ್ತೇನೆ. ಕೋಲಾರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಮಾಡುತ್ತೆನೆ.ಕೆಲ ಗ್ರಾಮಗಳಲ್ಲಿ ಕಾಂಗ್ರೆಸ್ ಮುಖಂಡರ ಸೇರ್ಪಡೆಯಾಗಿದ್ದಾರೆ. ಕೃಷ್ಣಬೈರೇಗೌಡ ಊಟ ಹಾಕಿದ ಪ್ರಯತ್ನದಿಂದ ಕಾಂಗ್ರೆಸ್ ಪಕ್ಷ ತಲೆ ಎತ್ತಿದೆ,ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಠೇವಣಿ ಸಹ ಬರುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ನವರು ಶ್ರೀನಿವಾಸಗೌಡ ಅವರನ್ನು ಕರೆದುಕೊಂಡು ಹಳ್ಳಿಗಳಿಗೆ ಹೋದರೆ ಒಳ್ಳೆಯದು, ಅವರನ್ನು ಬಿಟ್ಟು ಹೋಗುತ್ತಿದ್ದಾರೆ. ಪ್ರತಿ ಗ್ರಾಮದಲ್ಲೂ ನನ್ನ ಪಡೆ ಇದೆ, ಹೊಸದಾಗಿ ಕಟ್ಟುವ ಅವಶ್ಯಕತೆ ಇಲ್ಲ, ಸಿದ್ದರಾಮಯ್ಯ ಬಂದು ಪಡೆ ಕಟ್ಟಬೇಕಾಗಿದೆ. ಜೆಡಿಎಸ್ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಿದ್ದಾರೆ, ಜೆಡಿಎಸ್ ಪಕ್ಷ ಅವರನ್ನು ಹಿಡಿದಿಟ್ಟು ಕೊಳ್ಳಬೇಕಾಗಿದೆ. ಇನ್ನೂ ನಾನು ಹಿಂದುತ್ವ ಮೇಲೆ ನಾನು ಚುನಾವಣೆ ಮಾಡುವೆ ಎಂದು ಹೇಳಿದರು.












Click it and Unblock the Notifications