Sa Ra Mahesh: ಸಿದ್ದರಾಮಯ್ಯ ರೈತರಲ್ಲ, ವ್ಯಾಪರಸ್ಥರಲ್ಲ ಅಷ್ಟೊಂದು ಆಸ್ತಿ ಎಲ್ಲಿಂದ ಬಂತು?: ಸಾ ರಾ ಮಹೇಶ್ ಪ್ರಶ್ನೆ
ಮೈಸೂರು,ಏಪ್ರಿಲ್25: ರಾಜ್ಯ ವಿಧಾನಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದ್ದು, ಚುನಾವಣಾ ಪ್ರಚಾರದ ವೇಳೆ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಲಿಂಗಾಯುತ ಮುಖ್ಯಮಂತ್ರಿ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಇನ್ನೂ ಈ ಕುರಿತು ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ದಾರೆ. ಕುರುಬ ಸಮಾಜದಿಂದ ಬಂದ ಸಿದ್ದರಾಮಯ್ಯ ಉದ್ಯೋಗ ಏನು ? ಪ್ರಶ್ನಿಸಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಅವರು ರೈತರು ಅಲ್ಲ, ವ್ಯಾಪರಸ್ಥರು ಅಲ್ಲ, ಉದ್ದಿಮೆದಾರರು ಅಲ್ಲ, ಅದರೆ ಇಷ್ಟೊಂದು ಆಸ್ತಿ ಸಂಪಾದನೆ ಮಾಡಲು ಭ್ರಷ್ಟಾಚಾರದಿಂದ ಅಲ್ಲದೇ ಬೇರೆ ಎಲ್ಲಿಂದ ಬಂತು ಎಂಬುದನ್ನು ಅವರೇ ಬಹಿರಂಗ ಪಡಿಸಲಿ ಸಾ.ರಾ ಮಹೇಶ್ ಪ್ರಶ್ನಿಸಿದ್ದಾರೆ.

ಇನ್ನೂ ಇಷ್ಟೊಂದು ಆಸ್ತಿ ಅವರಿಗೆ ಎಲ್ಲಿಂದ ಬಂತು ಎಂಬುದನ್ನು ಸಾಬೀತುಪಡಿಸಿ ನಂತರ ಬೇರೆಯವರ ವಿರುದ್ದ ಟೀಕೆ ಮಾಡಲಿ ಎಂದು ಶಾಸಕ ಸಾ.ರಾ. ಮಹೇಶ್ ಅಕ್ರೋಶ ವ್ಯಕ್ತಪಡಿಸಿದ್ದು, ವೀರಶೈವ- ಲಿಂಗಾಯುತ ಮುಖ್ಯಮಂತ್ರಿಗಳು ಭ್ರಷ್ಟರು ಎಂಬ ಹೇಳಿಕೆ ಅಕ್ಷಮ್ಯ ಅಪರಾದ ಎಂದು ಕಿಡಿಕಾರಿದ್ದಾರೆ.

ರಾಜಕೀಯವನ್ನೇ ಉದ್ಯೋಗ ಮಾಡಿಕೊಂಡಿರುವ ಸಿದ್ದರಾಮಯ್ಯ ಬೇರೆಯವರನ್ನು ಟೀಕೆ ಮಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ನಾವು ರಿಯಲ್ ಎಸ್ಟೆಟ್ ಉದ್ದಿಮೆಯಾಗಿದ್ದು ರಾಜಕಾರಣದಲ್ಲಿರುವವರು ಒಬ್ಬಬರು ಒಂದೊಂದು ಉದ್ಯೋಗದಲ್ಲಿ ತೊಡಗಿದ್ದು ಅವರ ಅಸ್ತಿ ವಿವರಗಳನ್ನು ಆದಾಯ ತೆರಿಗೆ ಮತ್ತು ಚುನಾವಣಾ ಆಯೋಗಕ್ಕೆ ಸಲ್ಲಿಸಿರುತ್ತಾರೆ. ಆದರೆ ಸಿದ್ದರಾಮಯ್ಯ ಅವರಿಗೆ ಇಷ್ಟೊಂದು ಆಸ್ತಿ ಎಲ್ಲಿಂದ ಬಂತು? ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications