Karnataka Elections: ಚುನಾವಣಾ ರಾಜಕಾರಣದಿಂದ ಈಶ್ವರಪ್ಪ ನಿವೃತ್ತಿ: ಬಿಜೆಪಿ ಟಿಕೆಟ್‌ ನಿರಾಕರಣೆ ಕಾರಣವೇ? ಮಹತ್ವದ ಮಾಹಿತಿ

ಬೆಂಗಳೂರು, ಏಪ್ರಿಲ್‌ 11: ಕರ್ನಾಟಕ ವಿಧಾನಸಭೆ ಚುನಾವಣೆಗೆ ( Karnataka Assembly Elections 2023 ) ಕೆಲ ದಿನಗಳು ಬಾಕಿ ಇರುವಾಗಲೇ ರಾಜ್ಯದಲ್ಲಿ ಹಲವು ಮಹತ್ವದ ಬೆಳವಣಿಗೆಗಳು ಕಂಡುಬಂದಿವೆ. ಇಷ್ಟು ದಿನಗಳ ಕಾಲ ಶಿವಮೊಗ್ಗ ( Shivamogga ) ನಗರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಬಿಜೆಪಿ ( BJP ) ನಾಯಕ ಕೆಎಸ್‌ ಈಶ್ವರಪ್ಪ ( KS Eshwarappa ) ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಹಲವು ಸಂಶಯಗಳನ್ನು ಹುಟ್ಟುಹಾಕಿದೆ.

ಶಿವಮೊಗ್ಗ ನಗರ ಆಕಾಂಕ್ಷಿಯಾಗಿದ್ದ ಈಶ್ವರಪ್ಪ

ಬಿಜೆಪಿ ಹಿರಿಯ ನಾಯಕ ಕೆಎಸ್‌ ಈಶ್ವರಪ್ಪ ಅವರು ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ತಮಗೆ ಟಿಕೆಟ್‌ ನೀಡಲು ನಿರಾಕರಿಸಿದ ಸಂದರ್ಭದಲ್ಲಿ ತಮ್ಮ ಮಗನಿಗಾದರೂ ಟಿಕೆಟ್‌ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಅವರ ಪುತ್ರ ಕಾಂತೇಶ್‌ ಅವರು ಕ್ಷೇತ್ರದಾದ್ಯಂತ ಸಂಚರಿಸಿದ್ದರು. ಆದರೆ, ಚುನಾವಣೆಗೆ ಕೆಲ ದಿನಗಳು ಬಾಕಿ ಇರುವಾಗಲೇ ಈಶ್ವರಪ್ಪ ಚುನಾವಣಾ ರಾಜಕಾರಣದಿಂದ ದೂರ ಸರಿದಿರುವುದು ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ.

Karnataka Elections 2023 : Reasons Why KS Eshwarappa Announced Political Retirement

ಕರ್ನಾಟಕದಲ್ಲಿ ಗುಜರಾತ್‌ ಮಾಡೆಲ್‌

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಜೆಪಿ ನಾಯಕರು ಕರ್ನಾಟಕ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸುವಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಆದರೆ, ಟಿಕೆಟ್‌ ಗೊಂದಲವು ಬಗೆಹರಿದಿಲ್ಲ. ಹಳೆಯ ಮುಖಗಳಿಗೆ ಮಣೆ ಹಾಕಲು ಪಕ್ಷದ ಕೇಂದ್ರ ನಾಯಕತ್ವ ಒಪ್ಪಿಗೆ ನೀಡಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಈ ಹಿಂದೆ ಗುಜರಾತ್‌ನಲ್ಲಿ ನಡೆಸಿದ್ದ ಪ್ರಯೋಗವನ್ನು ಕರ್ನಾಟಕದಲ್ಲಿಯೂ ನಡೆಸುವ ಯತ್ನಕ್ಕೆ ಬಿಜೆಪಿ ಕೈಹಾಕಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ಮುಖಗಳಿಗೆ ಮಣೆ ಹಾಕುವ ಸಾಧ್ಯತೆಗಳು ದಟ್ಟವಾಗಿದೆ.

ಈಶ್ವರಪ್ಪಗೆ ಟಿಕೆಟ್‌ ನಿರಾಕರಣೆ?

ಈಶ್ವರಪ್ಪನವರಿಗೆ ವಯಸ್ಸಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಹೈಕಮಾಂಡ್‌ ಅವರಿಗೆ ಟಿಕೆಟ್‌ ನೀಡಲು ಒಪ್ಪುವುದಿಲ್ಲವೆಂದು ಹೇಳಲಾಗಿತ್ತು. ಅದರಂತೆಯೇ ಕೇಂದ್ರ ನಾಯಕತ್ವವು ಹೊಸಬರಿಗೆ ಮಣೆ ಹಾಕುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ. ಆ ಹಿನ್ನೆಲೆಯಲ್ಲಿ ಈಶ್ವರಪ್ಪಗೆ ಟಿಕೆಟ್‌ ನಿರಾಕರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಹಿರಿಯ ಶಾಸಕರಾದ ರವೀಂದ್ರ ನಾಥ್‌ ಹಾಗೂ ಹಾಲಾಡಿ ಶ್ರೀನಿವಾಸ ಶೆಟ್ಟಿ ಚುನಾವಣಾ ರಾಜಕೀಯದಿಂದ ಹೊರ ನಡೆದಿದ್ದಾರೆ. ಅವರಂತಯೇ ಈಶ್ವರಪ್ಪನವರೂ ಈ ನಿರ್ಧಾರಕ್ಕೆ ಬಂದಿರಬಹುದು ಎಂಬ ಮಾತುಗಳನ್ನು ರಾಜಕೀಯ ಪರಿಣಿತರು ಹೇಳುತ್ತಿದ್ದಾರೆ.

Karnataka Elections 2023 : Reasons Why KS Eshwarappa Announced Political Retirement

ಪುತ್ರನಿಗೆ ಟಿಕೆಟ್‌ ಕೇಳಿದ್ದ ಈಶ್ವರಪ್ಪ

ಕೆಎಸ್‌ ಈಶ್ವರಪ್ಪ ಅವರು ತಮ್ಮ ಪುತ್ರ ಕಾಂತೇಶ್‌ ಅವರಿಗೆ ಬಿಜೆಪಿ ಟಿಕೆಟ್‌ ಕೇಳಿದ್ದರು. ಆದರೆ, ಈಗಾಗಲೇ ಬಿಜೆಪಿಯಲ್ಲಿ ನಾಯಕರಾಗಿ ಅಧಿಕಾರ ಅನುವಿಸುವವರ ಮಕ್ಕಳಿಗೆ ಟಿಕೆಟ್‌ ನೀಡುವುದಕ್ಕೆ ಬಿಜೆಪಿ ಹೈಕಮಾಂಡ್‌ ಒಪ್ಪಿಲ್ಲವೆಂದು ಹೇಳಲಾಗುತ್ತಿದೆ. ಸ್ವತಃ ಪ್ರಧಾನಿ ಮೋದಿ ಅವರೇ, ಇದನ್ನು ನಿರಾಕರಿಸಿದ್ದಾರೆಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಈಶ್ವರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರಬಹುದು ಎಂಬ ಸಂಶಯಗಳು ಕಾಡುತ್ತಿವೆ.

ಶಿವಮೊಗ್ಗ ಟಿಕೆಟ್‌ಗೆ ಹಲವು ಆಕಾಂಕ್ಷಿಗಳು

ಶಿವಮೊಗ್ಗ ನಗರ ಟಿಕೆಟ್‌ಗಾಗಿ ಹಲವು ಆಕಾಂಕ್ಷಿಗಳಿರುವುದು ಈಶ್ವರಪ್ಪನವರ ನಿದ್ದೆ ಗೆಡಿಸಿತ್ತು ಎಂಬ ಮಾತುಗಳು ಕೇಳಿಬಂದಿವೆ. ಯಡಿಯೂರಪ್ಪ ನಿಷ್ಠರಾದ ಆಯನೂರು ಮಂಜುನಾಥ್‌ ಅವರು ಬಹಿರಂಗವಾಗಿ ಈಶ್ವರಪ್ಪ ವಿರುದ್ಧ ಯುದ್ಧ ಸಾರಿದ್ದರು.

Karnataka Elections 2023 : Reasons Why KS Eshwarappa Announced Political Retirement

ಒಂದು ವೇಳೆ, ಈಶ್ವರಪ್ಪ ಅಥವಾ ಅವರ ಪುತ್ರನಿಗೆ ಟಿಕೆಟ್‌ ನೀಡಿದರೆ, ತಾವು ಸ್ವತಂತ್ರವಾಗಿ ಅವರ ವಿರುದ್ಧ ನಿಲ್ಲುವುದಾಗಿಯೂ ಹೇಳಿದ್ದರು. ವಿಧಾನ ಪರಿಷತ್ ಸದಸ್ಯ ಎಸ್‍.ರುದ್ರೇಗೌಡ ಹಾಗೂ ಆರ್‌ಎಸ್‌ಎಸ್‌ ಬೆಂಬಲಿತ ಡಾ. ಧನಂಜಯ ಸರ್ಜಿ ಸೇರಿದಂತೆ ಹಲವರು ಶಿವಮೊಗ್ಗ ಟಿಕೆಟ್‌ಗಾಗಿ ಹರಸಾಹಸ ನಡೆಸುತ್ತಿದ್ದಾರೆ. ಇದು ಈಶ್ವರಪ್ಪನವರನ್ನು ನಿವೃತ್ತಿ ನಿರ್ಧಾರಕ್ಕೆ ಪ್ರೇರೇಪಿಸಿರಬಹುದು ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+