Kichcha Sudeep: ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರ್ಪಡೆ: ಕಿಚ್ಚ ಸುದೀಪ್ ಹೇಳಿದ್ದೇನು?
ಹುಬ್ಬಳ್ಳಿ,ಏಪ್ರಿಲ್28: ರಾಜ್ಯ ವಿಧಾನಸಭಾ ಚುನಾವಣೆ ಅಖಾಡ ಸಜ್ಜಾಗಿದ್ದು, ಹಲವು ತಂತ್ರಗಾರಿಕೆಯ ಮೂಲಕ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರವನ್ನ ನಡೆಸುತ್ತಿದ್ದು, ಸಿನಿಮಾ ಸ್ಟಾರ್ ಗಳ ಮೂಲಕ ಪ್ರಚಾರದ ಭರಾಟೆಯನ್ನ ಹೆಚ್ಚಿಸಿದೆ.
ಈಗಾಗಲೇ ಬಿಜೆಪಿ ಪಕ್ಷದ ಪರವಾಗಿ ಸ್ಟಾರ್ ನಟರಾದ ದರ್ಶನ್ ಹಾಗೂ ಸುದೀಪ್ ಸೇರಿದಂತೆ ಹಲವು ನಾಯಕರು ಚುನಾವಣಾ ಅಖಾಡದಲ್ಲಿ ಪ್ರಚಾರವನ್ನ ನಡೆಸುತ್ತಿದ್ದು, ಇದೀಗ ದೊಡ್ಮನೆ ಕುಟುಂಬದ ಹಿರಿಯ ಸೊಸೆ, ನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದಾರೆ.

ಇನ್ನೂ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ನಟ ಕಿಚ್ಚ ಸುದೀಪ್, ಗೀತಾಕ್ಕರಿಗೆ ಆಲ್ ದಿ ಬೆಸ್ಟ್ ಹೇಳುತ್ತೇನೆ. ಗೀತಕ್ಕ ಕೈಗೊಂಡಿರುವ ನಿರ್ಧಾರದ ಹಿಂದೆ ಒಳ್ಳೆಯ ಆಲೋಚನೆ ಇರುತ್ತದೆ. ಗೀತಕ್ಕರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ.
‘ಸಿನಿಮಾ, ರಾಜಕೀಯ ಪ್ರಚಾರದ ನಡುವೆ ವ್ಯತ್ಯಾಸ ಇಲ್ಲ. ಹೊಸ ಬದಲಾವಣೆಯ ನಿರೀಕ್ಷೆಯಲ್ಲಿ ಇದ್ದೇವೆ.
— oneindiakannada (@OneindiaKannada) April 28, 2023
-ಕಿಚ್ಚ ಸುದೀಪ್#kichhasudeep #karnatakaelections2023 #Sudeep pic.twitter.com/gGjtnbNuBz
ಸಿನಿಮಾ ರಾಜಕೀಯ ಪ್ರಚಾರದ ನಡುವೆ ವ್ಯತ್ಯಾಸವಿಲ್ಲ. ಹೊಸ ಬದಲಾವಣೆಯ ನಿರೀಕ್ಷೆಯಲ್ಲಿ ಇದ್ದೇವೆ. ಜನರ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡುತ್ತೇವೆ. ಸದ್ಯ ರಾಜಕೀಯದ ಬಗ್ಗೆ ನಾನು ಮಾತಾನಾಡುವುದಿಲ್ಲ. ನನಗೆ ಸಿನಿಮಾದಲ್ಲಿ ಕೆಲಸ ಮಾಡಲು ಸಾಕಷ್ಟು ಕೆಲಸಗಳಿವೆ ಎಂದ ಸುದೀಪ್ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ನಡೆಸುತ್ತಿದ್ದಾರೆ. ಜನರ ಸೇವೆ ಮಾಡ್ತಿದ್ದಾರೆ ಎಂದರು.
ಹುಬ್ಬಳ್ಳಿಯಲ್ಲಿ ಸುದೀಪ್ ರೋಡ್ ಶೋ!
ಹು-ಧಾ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಪರ ಚಿತ್ರನಟ ಸುದೀಪ್ ರೋಡ್ ಶೋ ನಡೆಸಿ ಮತ ಯಾಚಿಸಿದರು.ಅವರು ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡುತ್ತಾರೆಂಬ ಭರವಸೆ ಇದ್ದು, ಅವರು ನಿಮ್ಮ ಜೊತೆಗೆ ಇರಲಿದ್ದಾರೆ. ಈ ನಿಟ್ಟಿನಲ್ಲಿ ನೀವು ಬೆಂಬಲಿಸಿ ಎಂದು ಚಿತ್ರ ನಟ ಕಿಚ್ಚ ಸುದೀಪ್ ಪ್ರಚಾರಾರ್ಥವಾಗಿ ಭಾಷಣ ಮಾಡಿದರು.
ಈ ವೇಳೆ ಕಿಚ್ಚ ಸುದೀಪ್ ನೋಡಲು ನೂರಾರು ಸಂಖ್ಯೆಯಲ್ಲಿ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳು ಪುಷ್ಪವೃಷ್ಠಿ ಹಾಕಿ ಕಿಚ್ಚಾ ಕಿಚ್ಚಾ ಎಂದು ಜೈ ಕಾರ ಹಾಕಿದರು. ಅಲ್ಲದೇ ಸುದೀಪ್ ನೋಡಲು ಮನೆ ಮಹಡಿಯ ಮೇಲೆ ಅಭಿಮಾನಿಗಳು ಹತ್ತಿ ಕಣ್ಣು ತುಂಬಿಕೊಂಡರು.
ಈ ಮೂಲಕ ರಾಜ್ಯಾದ್ಯಂತ ತನ್ನದೇ ಆದ ಅಭಿಮಾನಿ ಬಳಗ ಹೊಂದಿರುವ ಕಿಚ್ಚಾ ಬಿಜೆಪಿ ಪರ ಮತ ಸೆಳೆಯಲು ಪ್ರಯತ್ನಿಸಿದರು.
ಈ ಬಾರಿ ಒಬ್ಬ ಕಾರ್ಯಕರ್ತನಿಗೆ ಬಿಜೆಪಿಯವರು ಟಿಕೆಟ್ ನೀಡಿದ್ದಾರೆ, ನಿಮಗೇಲ್ಲಾ ಒಳ್ಳೆಯದಾಗುತ್ತೆ ಎಂಬ ಭರವಸೆಯಿಂದ ಟಿಕೆಟ್ ನೀಡಿದ್ದಾರೆ. ಹೀಗಾಗಿ ಟೆಂಗಿನಕಾಯಿ ಅವರನ್ನು ಬೆಂಬಲಿಸಿ ಎಂದು ಹೇಳಿದರು.
ನಿಮ್ಮನ್ನೆಲ್ಲಾ ನೋಡಿದಾಗ ನನಗೆ ಮತ್ತೆ ಮತ್ತೆ ಬರಬೇಕು ಅನಿಸುತ್ತದೆ. ಚಿತ್ರರಂಗದಲ್ಲಿ ನನ್ನನ್ನು ಉಳಿಸಿ ಬೆಳೆಸಿದ್ದೀರಿ, ನಾನು ಇನ್ನೂ ಒಳ್ಳೆಯ ಚಿತ್ರಗಳನ್ನು ಮಾಡುತ್ತೇನೆಂದರು.












Click it and Unblock the Notifications