JDS Candidates 2nd List: ಭವಾನಿ ರೇವಣ್ಣಗೆ ಮುಖಭಂಗ, ಸ್ವರೂಪ್‌ಗೆ ಹಾಸನ ಟಿಕೆಟ್‌

ಬೆಂಗಳೂರು, ಏಪ್ರಿಲ್‌ 14: ಕರ್ನಾಟಕ ವಿಧಾನಸಭಾ ಚುನವಾಣೆ ಹಿನ್ನೆಲೆ ಜೆಡಿಎಸ್‌ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಈಗಾಗಲೇ 93 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಕುತೂಹಲಕಾರಿ ಬೆಳವಣಿಗೆಯಲ್ಲಿ ಹಾಸನದಿಂದ ಭವಾನಿ ರೇವಣ್ಣ ಅವರಿಗೆ ಟಿಕೆಟ್‌ ಸಿಕ್ಕಿಲ್ಲ. ಸ್ವರೂಪ್‌ ಅವರಿಗೆ ಹಾಸನದಲ್ಲಿ ಜೆಡಿಎಸ್‌ ಟಿಕೆಟ್‌ ದೊರೆತಿದೆ. ಈ ಮೂಲಕ ಕುಮಾರಸ್ವಾಮಿ ಅವರ ಕೈ ಮೇಲಾಗಿದೆ.

ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ನೀಡಬೇಕೆಂಬುದು ಕುಮಾರಸ್ವಾಮಿ ಅವರ ಅಭಿಲಾಸೆ ಆಗಿತ್ತು. ಆದರೆ, ಎಚ್‌ಡಿ ರೇವಣ್ಣ ಅವರು ತಮ್ಮ ಪತ್ನಿ ಭವಾನಿಗೆ ಹಾಸನದಿಂದ ಟಿಕೆಟ್‌ ಕೊಡಬೇಕೆಂದು ಒತ್ತಾಯಿಸಿದ್ದರು. ಈ ವಿಚಾರ, ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡರನ್ನು ತಲುಪಿತ್ತು.

Karnataka Elections 2023: jds announces Second (Or Final) list of candidates

ದೇವೇಗೌಡರು ಸಂಧಾನ ಸಭೆಯನ್ನು ನಡೆಸಿದ್ದರು. ಆ ಸಭೆಯಲ್ಲಿ ಕುಮಾರಸ್ವಾಮಿ, ಎಚ್‌ ಡಿ ರೇವಣ್ಣ ಹಾಗೂ ಭವಾನಿ ರೇವಣ್ಣ ಅವರು ಭಾಗವಹಿಸಿದ್ದರು. ಈ ಸಂಧಾನ ಸಭೆ ವಿಫಲವಾಗಿದ್ದರ ಬಗ್ಗೆ ವರದಿಯಾಗಿತ್ತು.

ದೇವಗೌಡರ ಮಾತುಕತೆ ಬಳಿಕವೂ ರೇವಣ್ಣ ಕುಟುಂಬ ಟಿಕೆಟ್‌ಗಾಗಿ ಹಠ ಹಿಡಿದಿತ್ತು. ರೇವಣ್ಣ ಅವರ ಪುತ್ತರಾದ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಹಾಗೂ ಎಂಎಲ್‌ಸಿ ಸೂರಜ್‌ ರೇವಣ್ಣ ಅವರೂ ಸಹ ತಮ್ಮ ತಾಯಿಗೆ ಟಿಕೆಟ್‌ ನೀಡಲೇಬೇಕೆಂದು ಒತ್ತಾಯಿಸಿದ್ದಾರೆ.

ಆದರೆ, ಹಾಸನದ ಆಂತರಿಕ ಸಮೀಕ್ಷೆಯಲ್ಲಿ ಭವಾನಿ ರೇವಣ್ಣ ನಿಂತರೆ ಸೋಲು ಅನುಭವಿಸುತ್ತಾರೆ ಎಂದು ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ, ಕುಮಾರಸ್ವಾಮಿ ಸ್ವರೂಪ್‌ ಅವರಿಗೇ ಟಿಕೆಟ್‌ ನೀಡಲು ನಿಶ್ಚಯಿಸಿದ್ದರು.

ಜೆಡಿಎಸ್‌ ಬಿಡುಗಡೆ ಮಾಡಿರುವ ಎರಡನೇ ಪಟ್ಟಿಯಲ್ಲಿ 49 ಅಭ್ಯರ್ಥಿಗಳ ಹೆಸರಿದೆ

ಕ್ರ,ಸಂಖ್ಯೆ ಕ್ಷೇತ್ರ ಅಭ್ಯರ್ಥಿ
1 ರಾಯಬಾಗ ಪ್ರದೀಪ್ ಮಾಳಗಿ
2 ಸವದತ್ತಿ ಸೌರಭ್ ಆನಂದ್ ಚೋಪ್ರಾ
3 ಅಥಣಿ ಶಶಿಕಾಂತ್ ಪಡಸಲಿಗಿ ಸ್ವಾಮೀಜಿ
4 ಹುಬ್ಬಳ್ಳಿ ಧಾರವಾಡ ಪೂರ್ವ ವೀರಭದ್ರಪ್ಪ ಹಾಲಹರವಿ
5 ಭಟ್ಕಳ ನಾಗೇಂದ್ರ ನಾಯಕ್
6 ಶಿರಸಿ-ಸಿದ್ದಾಪುರ ಉಪೇಂದ್ರ ಪೈ
7 ಯಲ್ಲಾಪುರ ಡಾ. ನಾಗೇಶ್ ನಾಯ್ಕ್
8 ಕುಮಟಾ ಸೂರಜ್ ನಾಯಕ್ ಸೋನಿ
9 ಹಳಿಯಾಳ ಎಸ್ಎಲ್ ಕೋಟ್ನೇಕರ್
10 ಚಿತ್ತಾಪುರ ಸುಭಾಷ್ ಚಂದ್ರ ರಾಠೋಡ್‌
11 ಕಲಬುರಗಿ ಉತ್ತರ ನಾಸಿರ್ ಹುಸೈನ್ ಉಸ್ತಾದ್
12 ಬಳ್ಳಾರಿ ಅಲ್ಲಾ ಭಕ್ಷ್ ಅಲಿಯಾಸ್
13 ಹಗರಿಬೊಮ್ಮನಳ್ಳಿ ಪರಮೇಶ್ವರಪ್ಪ
14 ಹರಪ್ಪನಹಳ್ಳಿ ನೂರ್ ಅಹಮ್ಮದ್
15 ಶಿರಗುಪ್ಪ ಪರಮೇಶ್ವರ ನಾಯಕ್
16 ಕಂಪ್ಲಿ ರಾಜ ನಾಯಕ್
17 ಕೊಳ್ಳೆಗಾಲ ಪುಟ್ಟಸ್ವಾಮಿ
18 ಗುಂಡ್ಲುಪೇಟೆ ಕಡಬೂರ್ ಮಂಜುನಾಥ್
19 ಕಾಪು ಸಬೀನಾ ಸಮದ್
20 ಕಾರ್ಕಳ ಶ್ರೀಕಾಂತ್ ಕೊಚ್ಚೂರ್
21 ಉಡುಪಿ ದಕ್ಷತ್ ಆರ್ ಶೆಟ್ಟಿ
22 ಬೈಂದೂರು ಮನ್ಸೂರ್ ಇಬ್ರಾಹಿಂ
23 ಕುಂದಾಪುರ ರಮೇಶ್ ಕುಂದಾಪುರ
24 ಮಂಗಳೂರು ದಕ್ಷಿಣ ಸುಮತಿ ಹೆಗ್ಡೆ
25 ಕನಪುರ ನಾಗರಾಜು
26 ಯಲಹಂಕ ಎಮ್ ಮುನೇಗೌಡ
27 ಸರ್ವಜ್ಞ ನಗರ ಮಹಮ್ಮದ್ ಮುಷ್ತಾಕ್
28 ಯಶವಂತಪುರ ಜವರಾಯೇಗೌಡ
29 ತಿಪಟೂರ ಶಾಂತಕುಮಾರ್
30 ಶಿರಾ ಆರ್ ಉಗ್ರೇಶ್
31 ಹಾನಗಲ್‌ ಮನಹೋರ್ ತಹಶೀಲ್ದಾರ್
32 ಸಿಂದಗಿ ವಿಶಾಲಾಕ್ಷಿ ಶಿವಾನಂದ್
33 ಗಂಗಾವತಿ ಹೆಚ್ ಆರ್ ಚನ್ನಕೇಶವ
34 ಜೇವರ್ಗಿ ದೊಡ್ಡಪ್ಪಗೌಡ
35 ಕಾರವಾರ ಚೈತ್ರಾ ಕೋಟೇಕಾರ್
36 ಪುತ್ತೂರ ದಿವ್ಯಾ ಪ್ರಭಾ
37 ಕಡೂರು ವೈ ಎಸ್‌ ವಿ ದತ್ತಾ
38 ಹೊಳೆನರಸೀಪುರ ರೇವಣ್ಣ
39 ಬೇಲೂರ ಲಿಂಗೇಶ್
40 ಸಕಲೇಶಪುರ ಹೆಚ್ ಕೆ ಕುಮಾರಸ್ವಾಮಿ
41 ಅರಕಲಗೂಡ ಎ ಮಂಜು
42 ಶ್ರವಣಬೆಳಗೊಳ ಎನ್ ಬಾಲಕೃಷ್ಣ
43 ಹಿರಿಯೂರ ರವೀಂದ್ರಪ್ಪ
44 ಮಾಯಕೊಂಡ ಆನಂದಪ್ಪ
45 ಮಹಾಲಕ್ಷ್ಮಿ ಲೇಔಟ್ ರಾಜಣ್ಣ
46 ಕಂಪ್ಲಿ ರಾಜು ನಾಯಕ್
47 ಕುಡುಚಿ(ಎಸ್‌.ಸಿ) ಆನಂದ ಮಾಳಗಿ
48 ಕುಂದಾಪುರ ರಮೇಶ್ ಕುಂದಾಪುರ
49 ಯಲಹಂಕ ಎಂ.ಮುನೇಗೌಡ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+