Bhavani Revanna: ಭವಾನಿ ರೇವಣ್ಣಗೆ ಟಿಕೆಟ್ ಮಿಸ್, ರೇವಣ್ಣ ಫಸ್ಟ್ ರಿಯಾಕ್ಷನ್!
ಬೆಂಗಳೂರು, ಏಪ್ರಿಲ್14: ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದ್ದ ದಳಪತಿಗಳು ಚುನಾವಣಾ ದಿನಾಂಕ ಘೋಷಣೆಗೂ ಮೊದಲೇ 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಎರಡನೇ ಪಟ್ಟಿ ಬಿಡುಗಡೆಗೆ ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ರು.
ಇನ್ನೂ ಯಾವುದೇ ಗೊಂದಲಗಳಿಲ್ಲದೆ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದ್ದ ದಳಪತಿಗಳಿಗೆ ಹಾಸನ ವಿಧಾನಸಭಾ ಕ್ಷೇತ್ರವೇ ದೊಡ್ಡ ಕಗ್ಗಂಟಾಗಿತ್ತು. ಕೊನೆಗೆ ಎರಡು ತಿಂಗಳ ಬಳಿಕೆ ಜೆಡಿಎಸ್ ಎರಡನೇ ಪಟ್ಟಿಯಲ್ಲಿ 49 ಕ್ಷೇತ್ರಗಳ ಅಭ್ಯರ್ಥಿಗಳನ್ನ ಘೋಷಣೆ ಮಾಡಿದ್ದು, ಜೆಡಿಎಸ್ನಲ್ಲಿ ಸಹೋದರರಿಗೆ ಸವಾಲು ಎನಿಸಿದ್ದ ಹಾಸನ ಕ್ಷೇತ್ರದ ಟಿಕೆಟ್ ಘೋಷಣೆ ಆಗಿದೆ. ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಎಂದಿದ್ದ ಕುಮಾರಸ್ವಾಮಿ ಕೊನೆಗೂ ಸ್ವರೂಪ್ ಪ್ರಕಾಶ್ಗೆ ಟಿಕೆಟ್ ಘೋಷಣೆ ಮಾಡಿದ್ದಾರೆ.

ಶುಕ್ರವಾರ ಜೆಡಿಎಸ್ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರನ್ನ ಪಕ್ಕದಲ್ಲೇ ಕೂರಿಸಿಕೊಂಡೇ ಟಿಕೆಟ್ ಬಿಡುಗಡೆ ಆಗಿದೆ. ರೇವಣ್ಣ ಅವರ ಮೂಲಕವೇ ಹಾಸನ ಟಿಕೆಟ್ಅನ್ನು ಕುಮಾರಸ್ವಾಮಿ ಘೋಷಣೆ ಮಾಡಿಸಿದ್ದಾರೆ.
ಇನ್ನೂ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಪತ್ನಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಮಿಸ್ ಆಗಿರುವ ಹಿನ್ನೆಲೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನನ್ನನ್ನು ಕುಮಾರಣ್ಣ ಅವರನ್ನು ಬೇರೆ ಮಾಡಲು ಆಗೋದಿಲ್ಲ. ಹಾಸನದಲ್ಲಿ ನಮ್ಮನ್ನೂ ದೂರ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸುವ ಮೂಲಕ ಕಿಡಿಕಾರಿದ್ದಾರೆ.

ಹಾಸನ ಜಿಲ್ಲೆಯ ಇಡೀ ಚಿತ್ರೀಕರಣ 60 ವರ್ಷಗಳ ಕಾಲ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಗೆ ತಿಳಿದಿದೆ. ನಾನು 6 ತಿಂಗಳಿನಿಂದ ಹಾಸನ ಟಿಕೆಟ್ ದೇವೇಗೌಡರು, ಕುಮಾರಣ್ಣ, ಸಿಎಂ ಇಬ್ರಾಹಿಂ ಅವರು ಫೈನಲ್ ಮಾಡುತ್ತಾರೆ ಅಂತ ಹೇಳಿದ್ದೆ. ಆದ್ದರಂತೆ ಸ್ವರೂಪ್ಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ನನ್ನನ್ನು ಕುಮಾರಣ್ಣ ಅವರನ್ನು ಬೇರೆ ಮಾಡಲು ಆಗೋದಿಲ್ಲ ಎಂದು ಎಚ್ಡಿ ರೇವಣ್ಣ ಟಿಕೆಟ್ ಘೋಷಣೆ ಕುರಿತು ಮಾಧ್ಯಮಗಳ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಇನ್ನೂ ಹಾಸನ ಕ್ಷೇತ್ರದಲ್ಲಿ ಸ್ವರೂಪ್ ಪರ 5 ವರ್ಷ ಕೆಲಸ ಮಾಡಿದ್ದೇನೆ. ಸ್ವರೂಪ್ ಅವರ ಅಪ್ಪನ ಪರ 30 ವರ್ಷ ರಾಜಕೀಯ ಮಾಡಿದ್ದೀನಿ. ಸ್ವರೂಪ್ ಸಹೋದರರನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಮಾಡಿದ್ದೀನಿ. ಆದರೆ ಹಾಸನ ಟಿಕೆಟ್ ಪಡೆದುಕೊಂಡ ಅಭ್ಯರ್ಥಿ ಎರಡು ತಿಂಗಳಿನಿಂದ ಎಷ್ಟು ನೋವು ಕೊಟ್ಟಿದ್ದಾರೆ ಅಂತ ನನಗೆ ಗೊತ್ತು ಎಂದು ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.
ನನಗೆ ಯಾವುದೇ ಬೇಸರ ಇಲ್ಲ. ಕುಮಾರಣ್ಣ ಅವರು ಹಾಸನ ವಿಧಾನಸಭಾ ಕ್ಷೇತ್ರದ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಆದ್ದರಿಂದ ಅವರೇ ನೋಡಿಕೊಳ್ಳುತ್ತಾರೆ. ಕಳೆದ ನಾಲ್ಕು ವರ್ಷದಿಂದ ಲೂಟಿ ಮಾಡಿದ್ದಾರೆ. ಹಾಸನದಲ್ಲಿ 7ಕ್ಕೆ ಏಳು ಸ್ಥಾನ ಗೆಲ್ಲುತ್ತೇವೆ ಎಂದು ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ನಮಗೆ ದೇವೇಗೌಡರ ಆರೋಗ್ಯ ಮುಖ್ಯ. ನನಗೆ ಮಾವನ ಆರೋಗ್ಯ ಮುಖ್ಯ ಎಂದು ಭವಾನಿ ರೇವಣ್ಣ ಅವರು ಕೂಡ ಎರಡು ತಿಂಗಳ ಹಿಂದೆಯೇ ಹೇಳಿದ್ದಾರೆ. 50 ಸಾವಿರ ವೋಟ್ನಲ್ಲಿ ಒಂದು ಮತ ಕಡಿಮೆಯಾದರೂ ರಾಜೀನಾಮೆ ನೀಡುತ್ತೇನೆ ಎಂದು ಎದುರಾಳಿ ಹೇಳಿದ್ದ ಎಂದು ಪ್ರೀತಂ ಗೌಡ ಹೆಸರು ಹೇಳದೆ ವಾಗ್ದಾಳಿ ನಡೆಸಿದ ಅವರು, ಹಾಸನ ಕ್ಷೇತ್ರದ ಕಾರ್ಯಕರ್ತರು ನನ್ನನ್ನು ಚುನಾವಣೆಗೆ ಕರೆದಿದ್ದರು ಎಂದು ಹೇಳಿದರು.












Click it and Unblock the Notifications