ಅತಂತ್ರ ಪ್ರಶ್ನೆಯೇ ಇಲ್ಲ,ಬಿಜೆಪಿಗೆ ಸ್ಪಷ್ಟ ಬಹುಮತ ಬರುತ್ತೆ ಬರೆದು ಇಟ್ಟುಕೊಳ್ಳಿ : ಬಿ ಸಿ ಪಾಟೀಲ್
ಹಾವೇರಿ, ಮೇ 12: ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಇತ್ತ ಎಕ್ಸಿಟ್ ಪೋಲ್ ಸಮೀಕ್ಷೆ ಸುಳ್ಳು, ಈ ಬಾರೀ ಅತಂತ್ರ ಫಲಿತಾಂಶ ಪ್ರಕಟವಾಗಲ್ಲ. ಬಿಜೆಪಿಗೆ ಸ್ಪಷ್ಟ ಬಹುಮತ ಬರುತ್ತದೆ ಬರೆದು ಇಟ್ಟುಕೊಳ್ಳಿ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದ್ದಾರೆ.
ಈ ಕುರಿತು ಹಾವೇರಿಯಲ್ಲಿ ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು. ಕಾಂಗ್ರೆಸ್‌ನವರು ರೇಸಾರ್ಟ್ ರಾಜಕೀಯದ ಬಗ್ಗೆ ಮಾತನಾಡಿರುವದು ಹಾಸ್ಯಾಸ್ಪದ. ಕಾಂಗ್ರೆಸ್ ನಲ್ಲಿ ಕೂಸು ಹುಟ್ಟುವ ಮುನ್ನವೇ ಕುಲಾಯಿ ಹೋಲಿಸಿದರು ಎನ್ನುವಂತೆ ಅವರು ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನಡೆಸುತ್ತಿದ್ದಾರೆ. ಈ ಬಾರೀ ರಾಜ್ಯದ ಜನ ನಮ್ಮ ಕೈ ಬಿಡಲ್ಲ, ನಮಗೆ ಬಹುಮತ ಬರಲಿದೆ. ನನಗೆ ವಿಶ್ವಾಸವಿದೆ ನನ್ನ ಅಭಿವೃದ್ದಿ ಕಾರ್ಯಗಳು ನನ್ನ ಕೈ ಹಿಡಿಯುತ್ತವೆ, ಜನರು ನನಗೆ ಆಶೀರ್ವಾದ ಮಾಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರೇಸಾರ್ಟ್ ರಾಜಕೀಯದ ಕುರಿತು ಮಾತನಾಡಿದ ಅವರು, ದಾಂಡೇಲಿಯಲ್ಲಿ ಮಾತ್ರ ರೇಸಾರ್ಟ್ ಇದೆಯಾ. ಈ ಬಾರಿನಲ್ಲಿ ಬಸ್‌ನಲ್ಲಿ ಹೋಗುತ್ತಾರೆ ಎಂಬ ಕೀಳು ಆರೋಪ ಯಾಕೆ ಹೋಗುವದಾದರೇ ಕಾರ್‌ನಲ್ಲಿ ವಿಮಾನದಲ್ಲಿ ಹೋಗುತ್ತಾರೆ. ಅಷ್ಟಕ್ಕೂ ಅಂತಹ ಪ್ರಶ್ನೆಗೆ ಉದ್ಭವವಾಗುವುದಿಲ್ಲ ಎಂದು ಹೇಳಿದರು.
ಕುಮಾರಸ್ವಾಮಿ ಮನೆಗೆ ಹೋಗುವ ಪ್ರಸಂಗ ಬರುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾದು ನೋಡಿ ಗೊತ್ತಾಗುತ್ತೆ, ಈ ಬಾರಿ ಜಯ ನನ್ನದೇ ಎಂದು ನಮಗೆ ನಂಬಿಕೆ ಇದೆ. ಎಕ್ಸಿಟ್ ಪೋಲ್ ನಿರ್ಧಾರ ಮಾಡುವವರು ಎಕ್ಸಿಟ್ ಪೋಲ್ ಮಾಡಿದವರಲ್ಲ. ಅದನ್ನು ಮಾಡುವವರು ಮತದಾರರು ಅಂತಿಮ ನಿರ್ಧಾರ ಎಂದು ಬಿ.ಸಿ.ಪಾಟೀಲ್ ತಿಳಿಸಿದರು.
ಮತದಾರರ ಆದೇಶ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ ಅದು ಇದೇ 13 ರಂದು ಬಹಿರಂಗವಾಗಲಿದ್ದು ಖಂಡಿತ ಬಿಜೆಪಿ ಈ ಬಾರಿ ಸರ್ಕಾರ ರಚಿಸಲಿದೆ. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ. ಅತಂತ್ರ ಎಂಬ ಪ್ರಶ್ನೆಯೇ ರಾಜ್ಯದಲ್ಲಿ ಉದ್ಭವಿಸಲ್ಲ.ಬಿಜೆಪಿಗೆ ಸ್ಪಷ್ಟ ಬಹುಮತವಿದೆ. ಗುಜರಾತ್‌ನಲ್ಲಿ ಈ ಹಿಂದೆ ಇದೇ ರೀತಿ ಎಕ್ಸಿಟ್ ಪೋಲ್ ಆಗಿದ್ದವು. ಆದರೆ ಅಲ್ಲಿ ಮತ ಏಣಿಕೆ ನಂತರ ಎಲ್ಲ ಅದಲುಬದಲಾಗಿತ್ತು ಎಂದು ಬಿ.ಸಿ.ಪಾಟೀಲ್ ತಿಳಿಸಿದರು.
ಜನರ ನಾಡಿಬಡಿತ ಬಿಜೆಪಿ ಕಡೆ ಇದೆ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಕಾಂಗ್ರೆಸ್‌ನವರು ಈಗ ಉತ್ಸಾಹದಲ್ಲಿದ್ದಾರೆ ಆದರೆ 13 ರ ನಂತರ ನಾವು ಉತ್ಸಾಹದಲ್ಲಿರುತ್ತೇವೆ ಎಂದು ಬಿ.ಸಿ.ಪಾಟೀಲ್ ತಿಳಿಸಿದರು. ಹಿರೇಕೆರೂರು ಕ್ಷೇತ್ರದ ಗ್ರಾಮಗಳಲ್ಲಿ ಪಟ್ಟಣಗಳಲ್ಲಿ ಹೆಚ್ಚು ಲೀಡ್ ಆಗಿದ್ದು ಈ ಬಾರಿ 25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂಬ ವಿಶ್ವಾಸವನ್ನ ಬಿ.ಸಿ.ಪಾಟೀಲ್ ವ್ಯಕ್ತಪಡಿಸಿದರು.
ಹಿರೇಕೆರೂರು ವಿಧಾನಸಭಾ ಕ್ಷೇತ್ರ ಪ್ರಜ್ಞಾವಂತ ಮತದಾರರು ಇರುವ ಕ್ಷೇತ್ರ ಇಲ್ಲಿ ಪ್ರತಿಶತ 85 ರಷ್ಟು ಮತದಾನವಾಗಿದೆ ಎಂದು ಬಿ.ಸಿ.ಪಾಟೀಲ್ ತಿಳಿಸಿದರು.












Click it and Unblock the Notifications