CM Bommai: ಸಂಪೂರ್ಣವಾಗಿ ಬಿಜೆಪಿ ಬಹುಮತ ಸರ್ಕಾರ ಬರುತ್ತದೆ: ಬಸವರಾಜ ಬೊಮ್ಮಾಯಿ

ಹಾವೇರಿ, ಮೇ 10: ಪ್ರಜಾಪ್ರಭುತ್ವದ ಗೆಲುವಿಗಾಗಿ ಮತದಾನ ಮಾಡಬೇಕು. ಈ ಬಾರೀ ಸಂಪೂರ್ಣವಾಗಿ ಬಿಜೆಪಿ ಬಹುಮತ ಸರ್ಕಾರ ಬರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸವನ್ನ ವ್ಯಕ್ತಪಡಿಸಿದರು.

ಶಿಗ್ಗಾವಿಯಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಮತದಾನ ಮುಂದುವರಿದಿದ್ದು, ನಮ್ಮ ಪಕ್ಷದ ಪ್ರಚಾರದ ರೀತಿ ಮತ್ತು ಜನರು ಪ್ರತಿಕ್ರಿಯಿಸಿದ ರೀತಿಯಿಂದ ನನಗೆ ತುಂಬಾ ಸಂತೋಷವಾಗಿದೆ. ಕರ್ನಾಟಕದ ಅಭಿವೃದ್ಧಿಗೆ ಬಂದು ಮತ ಚಲಾಯಿಸುವಂತೆ ನಾನು ಜನರಲ್ಲಿ ಮನವಿ ಮಾಡುತ್ತೇನೆ ಎಂದು ಮನವಿ ಮಾಡಿದರು.

Basavaraj Bommai

ಚುನಾವಣೆಗೆ ಜನರಲ್ಲಿ ಮತ್ತೊಮ್ಮೆ ಕೇಳುತ್ತಾ ಇದ್ದೇನೆ, ಹೊರ ಬನ್ನಿ ಪ್ರಜಾಪ್ರಭುತ್ವ ಯಶಸ್ವಿಗೊಳಿಸಿ. ನಿಮ್ಮ ಮತ ಬಹಳ ದೊಡ್ಡದು. ಒಂದು ಕಡೆ ಅಭಿವೃದ್ಧಿ,ಇನ್ನೊಂದು ಕಡೆ ಸುಳ್ಳು,ಪೊಳ್ಳು ಇದ್ದು. ಅಪವಿತ್ರ ಸರ್ಕಾರದ ಮೈತ್ರಿ ಮಾಡಿಕೊಂಡು ಜವಾಬ್ದಾರಿ ಮಾಡೋಕೆ ಆಗಲಿಲ್ಲ. ಅದರ ಹೊಣೆ ಬಿಜೆಪಿ ಮೇಲೆ ನಮ್ಮ ಮೇಲೆ ಬಿತ್ತು. ಕೋವಿಡ್‌ ವೇಳೆ ಸಮರ್ಥವಾಗಿ ನಿಭಾಯಿಸಿದ್ದೇವೆ.
ಆರ್ಥಿಕವಾಗಿ ಉತ್ತೇಜನ ನೀಡಿ ಹಲವಾರು ಹೊಸ ಕಾರ್ಯಕ್ರಮಗಳನ್ನು ನೀಡಿದ್ದೇವೆ ಎಂದು ಹೇಳಿದರು.

ಸುಳ್ಳು ಆರೋಪಕ್ಕೆ,ಸುಳ್ಳು ಗ್ಯಾರಂಟಿ ಗೆ ಜನ ಬೆಂಬಲ ಕೊಡಲ್ಲ. ಕರ್ನಾಟಕದ ಕ್ಷೇಯೋಭಿವೃದ್ದಿಗೆ ಜನರ ಮತ ಇರುತ್ತದೆ. ಶಾಸಕನಾಗಿ, ಮುಖ್ಯಮಂತ್ರಿ ಆಗಿ ಮತದಾನ ಮಾಡೋದು ಬಹಳ ವ್ಯತ್ಯಾಸ ಇಲ್ಲ. ಒಬ್ಬ ನಾಗರೀಕನಾಗಿ ನಾನು ಓಟಿಂಗ್ ಮಾಡಿದ್ದೇನೆ. ಹನುಮಾನ್ ಚಾಲೀಸ್ ನಮ್ಮ ಸಂಪ್ರದಾಯ, ಅದರಂತೆ ನಾವು ಮಾಡಿದ್ದೇವೆ. ನಾನು ಯಾವುದೆ ಕೆಲಸಕ್ಕೆ ಹೋಗ ಬೇಕಾದರು.
ದೇವರ ಆಶಿರ್ವಾದ ಪಡೆಯುತ್ತೇನೆ, ಅದರಂತೆ ದೇವರ ಆಶಿರ್ವಾದ ಪಡೆದಿದ್ದೇನೆ‌ ಎಂದು ಹೇಳಿದರು.

karnataka Elections 2023: BJP Majority Government Will Come Says Basavaraj Bommai

ಕಾಂಗ್ರೆಸ್ ನವರು ಈಗ ಹನುಮಂತನ ದೇವಸ್ಥಾನಕ್ಕೆ ಹೋಗ್ತಾ ಇರೋದು ಗೊತ್ತಾಗ್ತಾ ಇದೆ. ಕಾಂಗ್ರೆಸ್ ನವರು ಯಾವಾಗಲು ಹಾಗೇ ಹೇಳಿದ್ದನ್ನು ಮಾಡಲ್ಲ. ಮಾಡುವುದನ್ನ ಹೇಳಲ್ಲ. ಯಾವಾಗಲೂ ಅವರು ಇರುವುದು ಹಾಗೇ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+