Karnataka BJP Candidates 1st List: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಇರುವ 52 ಹೊಸ ಮುಖಗಳ ವಿವರ ಇಲ್ಲಿದೆ
ಬೆಂಗಳೂರು, ಏಪ್ರಿಲ್. 12: ಮುಂದಿನ ತಿಂಗಳು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಪಕ್ಷವು ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಂಗಳವಾರ ನವದೆಹಲಿಯಲ್ಲಿ ಬಿಡುಗಡೆ ಮಾಡಿದೆ. ಬಿಜೆಪಿ ಕೇಂದ್ರ ಕಚೇರಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಸುದ್ದಿಗೋಷ್ಠಿ ನಡೆಸಿ, ಒಟ್ಟು 189 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದರು. ಇದರಲ್ಲಿ 52 ಹೊಸ ಮುಖಗಳಿಗೆ ಮಣೆ ಹಾಕಿದೆ.
ವಿಧಾನಸಭೆಯ 224 ಕ್ಷೇತ್ರಗಳ ಪೈಕಿ 35 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಬಾಕಿ ಉಳಿಸಿಕೊಂಡು 52 ಹೊಸ ಮುಖಗಳಿಗೆ ಮಣೆ ಹಾಕಿದೆ. ಪಟ್ಟಿಯಲ್ಲಿ ಒಂಬತ್ತು ವೈದ್ಯರು, ತಲಾ ಒಬ್ಬೊಬ್ಬ ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳು, 31 ಸ್ನಾತಕೋತ್ತರ ಪದವೀಧರರಿದ್ದಾರೆ. 189 ಮಂದಿ ಅಭ್ಯರ್ಥಿಗಳ ಪೈಕಿ 8 ಮಂದಿ ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ. ಐವರು ವಕೀಲರು ಮತ್ತು 3 ನಿವೃತ್ತ ಸರ್ಕಾರಿ ನೌಕರರಿಗೆ ಅವಕಾಶ ನೀಡಲಾಗಿದೆ.

ಮೊದಲ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಒಟ್ಟು 52 ಮಂದಿ ಹೊಸಬರಿಗೆ ಅವಕಾಶ ನೀಡಲಾಗಿದೆ.
*ಹೊಸಬರ ಪಟ್ಟಿ ಹೀಗಿದೆ*
| ಕ್ಷೇತ್ರ | ಅಭ್ಯರ್ಥಿ |
| ಶಿಕಾರಿಪುರ | ಬಿ.ವೈ. ವಿಜಯೇಂದ್ರ |
| ವಿಜಯನಗರ | ಸಿದ್ಧಾರ್ಥ ಸಿಂಗ್ |
| ರಾಮದುರ್ಗ | ಎಸ್ ಸರ್ ಚಿಕ್ಕರೇವಣ್ಣ |
| ಸಿರಗುಪ್ಪ | ಸೋಮಲಿಂಗಪ್ಪ |
| ಕುಂದಾಪುರ | ಕಿರಣ್ ಕುಮಾರ್ |
| ಬೆಳಗಾವಿ ಉತ್ತರ | ರವಿ ಪಾಟೀಲ |
| ಹೊಸದುರ್ಗಾ | ಲಿಂಗಮೂರ್ತಿ |
| ಸವದತ್ತಿ | ರತ್ನ ಮಹಾಮನಿ |
| ಶಿರಹಟ್ಟಿ | ಚಂದ್ರು ಲಮಾಣಿ |
| ಚಿತ್ತಾಪುರ | ಮಣಿಕಂಠ |
| ಚಿಂಚೊಳ್ಳಿ | ಅವಿನಾಶ್ ಜಾಧವ್ |
| ಚಾಮರಾಜಪೇಟೆ | ಭಾಸ್ಕರ್ ರಾವ್ |
| ಹಡಗಲಿ | ಕೃಷ್ಣ ನಾಯಕ್ |
| ಹರಿಹರ | ಬಿ.ಪಿ ಹರೀಶ್ |
| ಉಡುಪಿ | ಯಶ್ಪಾಲ್ ಸುವರ್ಣ |
| ಕುಣಿಗಲ್ | ಕೃಷ್ಣ ಕುಮಾರ್ |
| ಶಿರಾ | ರಾಜೇಶ್ ಗೌಡ |
| ಬ್ಯಾಟರಾಯನಪುರ | ತಮ್ಮೇಶ್ ಗೌಡ |
| ಪುಲಿಕೇಶಿನಗರ | ಮುರುಳಿ |
| ಶಾಂತಿ ನಗರ | ಶಿವಕುಮಾರ್ |
| ಸರ್ವಜ್ಞ ನಗರ | ಪದ್ಮನಾಭ ರೆಡ್ಡಿ |
| ಶಾಂತಿ ನಗರ | ಶಿವಕುಮಾರ್ |
| ಶಿವಾಜಿ ನಗರ | ಎನ್ ಚಂದ್ರ |
| ಜಯನಗರ | ಸಿ ಕೆ ರಾಮಮೂರ್ತಿ |
| ಮಂಡ್ಯ | ಅಶೋಕ್ ಜೈರಾಮ್ |
| ಮಧುಗಿರಿ | ಎಲ್ .ಸಿ ನಾಗರಾಜ್ |
| ಬಾಗೇಪಲ್ಲಿ | ಎಸ್ ಸಿ ಮುನಿರಾಜ್ |
| ಮುಳಬಾಗಿಲು | ಸೀಗೇಹಳ್ಳಿ ಸುಂದರ್ |
| ಪಿರಿಯಾಪಟ್ಟಣ | ವಿಜಯಶಂಕರ್ |
| ಆನೆಕಲ್ | ಹುಲ್ಲಹಳ್ಳಿ ಶ್ರೀನಿವಾಸ್ |
| ರಾಮನಗರ | ಗೌತಮ ಗೌಡ |
| ದೊಡ್ಡಬಳ್ಳಾಪುರ | ಧೀರಜ್ |
| ನಾಗಮಂಗಲ | ಸುಧಾ ಶಿವರಾಂ |
| ಮಾಗಡಿ | ಪ್ರಸಾದ್ ಗೌಡ |
| ಹನೂರು | ಪ್ರೀತಂ ನಾಗಪ್ಪ |
| ಪುತ್ತೂರು | ಆಶಾ ತಿಮ್ಮಪ್ಪ |
| ಅರಕಲಗೂಡು | ಯೋಗಾ ರಮೇಶ್ |
| ಸಕಲೇಶ್ ಪುರ | ಸಿಮೆಂಟ್ ಮಂಜು |
| ಚಾಮುಂಡೇಶ್ವರಿ | ಕವೀಶ್ ಗೌಡ |
| ಸುಳ್ಯ | ಭಾಗೀರಥಿ ಮುರುಳ್ಯ |

* ಬಿಜೆಪಿ ಪಟ್ಟಿಯಲ್ಲಿ ಸ್ಥಾನ ಪಡೆದ ಜಾತಿವಾರು ಮಾಹಿತಿ*
| ಇತರೆ ಹಿಂದುಳಿದ ವರ್ಗ (OBC) | 32 |
| ಪರಿಶಿಷ್ಟ ಜಾತಿ | 30 |
| ಪರಿಶಿಷ್ಟ ಪಂಗಡ | 16 |
*ಮಹಿಳೆಯರು ಮತ್ತು ಪದವೀಧರರು*
| ಮಹಿಳೆಯರು | 8 |
| ಹೊಸ ಅಭ್ಯರ್ಥಿಗಳು | 52 |
| ಸ್ನಾತಕೋತ್ತರ ಪದವೀಧರರು | 31 |
*ವೃತ್ತಿಪರರು*
| ವಕೀಲರು | 5 |
| ವೈದ್ಯರು | 9 |
| ನಿವೃತ್ತ ಐಎಎಸ್ ಅಧಿಕಾರಿ | 1 |
| ನಿವೃತ್ತ ಐಪಿಎಸ್ ಅಧಿಕಾರಿ | 1 |
| ನಿವೃತ್ತ ಸರ್ಕಾರಿ ನೌಕರರು | 3 |
| ಸಾಮಾಜಿಕ ಕಾರ್ಯಕರ್ತರು | 8 |
ಕಾಂಗ್ರೆಸ್ ಈಗಾಗಲೇ ಎರಡು ಪಟ್ಟಿಯನ್ನು ಘೋಷಿಸಿದೆ. ಜೆಡಿಎಸ್ ಎರಡನೇ ಪಟ್ಟಿ ಘೋಷಣೆಗೆ ತಯಾರಿ ನಡೆಸಿದೆ. ಇತರೆ ಎಲ್ಲ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸಿ ಪಟ್ಟಿ ಬಿಡುಗಡೆ ಮಾಡಿದ್ದವು. ಆದರೆ ಬಿಜೆಪಿ ಮಾತ್ರ ಮೇಲಿಂದ ಮೇಲೆ ಸಭೆ ನಡೆಸಿತ್ತಾದರೂ ಪಟ್ಟಿ ಪ್ರಕಟಿಸಿರಲಿಲ್ಲ. ಇದೀಗ, ಒಟ್ಟು 189 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಅಂತಿಗೊಳಿಸಿ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಉಳಿದ 35 ಕ್ಷೇತ್ರಗಳಿಗೆ ಶೀಘ್ರವೇ ಟಿಕೆಟ್ ಘೋಷಣೆ ಮಾಡಲಿದೆ.
ಸಿಎಂ ಬಸವರಾಜ ಬೊಮ್ಮಾಯಿ, "ನವ ಕರ್ನಾಟಕದದಿಂದ ನವ ಭಾರತವನ್ನು ನಿರ್ಮಿಸಲು ಮತ್ತು ಸಮಗ್ರ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗಾಗಿ ಕರ್ನಾಟಕ ಬಿಜೆಪಿಯ 189 ಸಮರ್ಥ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ರಾಜ್ಯದೆಲ್ಲೆಡೆ ಡಬಲ್ ಇಂಜಿನ್ ಸರ್ಕಾರದ ಆಡಳಿತದ ಪರವಾದ ವಾತಾವರಣವಿದ್ದು, ಈ ಬಾರಿ ಸಂಪೂರ್ಣ ಬಹುಮತದ ಸರ್ಕಾರವನ್ನು ನಾವು ರಚಿಸಲಿದ್ದೇವೆ. ಎಲ್ಲಾ ಅಭ್ಯರ್ಥಿಗಳು ಭರ್ಜರಿ ಬಹುಮತದಿಂದ ಗೆದ್ದು ಬನ್ನಿ ಎಂದು ಶುಭ ಹಾರೈಸುತ್ತೇನೆ" ಎಂದು ಅಭ್ಯರ್ಥಿಗಳ ಪಟ್ಟಿಯನ್ನು ಟ್ವೀಟ್ ಮಾಡಿದ್ದಾರೆ.












Click it and Unblock the Notifications