Kichcha Sudeep: ಚುನಾವಣಾ ಪ್ರಚಾರ ಮುಗಿಸಿ ಬಂದ ನಟ ಸುದೀಪ್; ಅಭಿಮಾನಿಗಳ ಪ್ರೀತಿ ಕಂಡು ಕಿಚ್ಚ ಹೇಳಿದ್ದೇನು?
ಬೆಂಗಳೂರು,ಮೇ 10: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಈ ಬಾರೀ ಸಿನಿಮಾ ಸ್ಟಾರ್ಸ್ ನಟ ನಟಿಯರು ಹಲವು ರಾಜಕೀಯ ಪಕ್ಷದಳ ಪರವಾಗಿ ಹಾಗೂ ಅಭ್ಯರ್ಥಿಗಳ ಪರವಾಗಿ ಅಬ್ಬರದ ಪ್ರಚಾರವನ್ನ ನಡೆಸಿದ್ದಾರೆ.
ಈ ಬಾರಿ ನಟ ಕಿಚ್ಚ ಸುದೀಪ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ಪರವಾಗಿ ಪ್ರಚಾರ ಮಾಡುವುದಾಗಿ ಹೇಳಿದ್ದು, ಅದರಂತೆ ರಾಜ್ಯಾದ್ಯಂತ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರವನ್ನ ನಡೆಸಿದ್ದು, ಮೇ 08 ರಂದು ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದ್ದು, ಇತ್ತ ಬಹಿರಂಗ ಪ್ರಚಾರ ಅಂತ್ಯವಾಗುತ್ತಿದ್ದಂತೆ ಬೆಂಗಳೂರಿಗೆ ವಾಪಸ್ಸಾಗಿರುವ ನಟ ಸುದೀಪ್ ಅಭಿಮಾನಿ ದೇವರುಗಳಿಗೆ ಧನ್ಯವಾದ ಹೇಳಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಜೊತೆಯಾಗಿ ಎಲ್ಲರಿಗೂ ಧನ್ಯವಾದ ಹೇಳಿರುವ ಜೊತೆಗೆ ಅಭಿಮಾನಿಗಳಿಗೆ ವಿಶೇಷ ಧನ್ಯವಾದ ಹಾಗೂ ಕ್ಷಮೆಯನ್ನೂ ಕೋರಿದ್ದಾರೆ.

ಈ ಕುರಿತು ನಟ ಕಿಚ್ಚ ಸುದೀಪ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಭಾವುಕ ಪದ್ಯವೊಂದನ್ನು ಹಂಚಿಕೊಂಡಿದ್ದು, "ನಿಮ್ಮ ಕಣ್ಣಲ್ಲಿ ಕಂಡ ಅಪಾರ ಪ್ರೀತಿ, ನನ್ನ ಬದುಕಿನ ರೀತಿ, ನಿಮ್ಮ ನಿರಂತರ ರಣಕೇಕೆ, ಸಾಕಿಷ್ಟು ಈ ಜನುಮಕೆ. ಹಣತೆ ಹೊತ್ತಿರಿ ಆರತಿ ಎತ್ತಿದಿರಿ, ದಾರಿಯುದ್ದಕ್ಕೂ ಹೂವು ಚೆಲ್ಲಿದಿರಿ. ನಿಮ್ಮ ಎದೆಯ ಮೇಲಿನ ಹಚ್ಚೆಯಂತೆ ಸದಾ ಜೊತೆಗಿರುವೆ" ಎಂದು ನಟ ಸುದೀಪ್ ಬರೆದು ಹೇಳಿಕೊಂಡಿದ್ದಾರೆ.
🤗❤️🙏🏼 pic.twitter.com/n2Tll1cA7t
— Kichcha Sudeepa (@KicchaSudeep) May 9, 2023
ಇನ್ನೂ ಚುನಾವಣೆ ವೇಳೆ ಜನಸಾಗರದ ನೂಕು ನುಗ್ಗಲಲ್ಲಿ ಕೆಲವರಿಗೆ ಬಿದ್ದ ಲಾಠಿ ಏಟಿಕೆ ಕ್ಷಮೆ ಇರಲಿ. ಸ್ನೇಹಿತರೆ ನಿಮ್ಮ ಪ್ರತಿ ಮನದಲ್ಲಿ ಈ ಪ್ರೀತಿ ಹೀಗೆಯೇ ಇರಲಿ. ಕರುನಾಡಲ್ಲಿ ನಡೆದ ಈ ಮೆರವಣಿಗೆಯುದ್ದಕ್ಕೂ ಜೊತೆಯಾಗಿ ಸಾಗಿದ ಮಾಧ್ಯಮ ಮಿತ್ರರಿಗೆ. ಕಾಳಜಿಯಿಂದ ಕಾವಲಿಟ್ಟ ಪೊಲೀಸರಿಗೆ ಮಿಲಿಟರಿ ಕಮಾಂಡೊ ಸಿಬ್ಬಂದಿಗೆ. ಲಕ್ಷಾಂತರ ಕಾರ್ಯಕರ್ತರಿಗೆ ಹೃದಯಗೀತೆಯಾದ ನನ್ನ ಸ್ನೇಹಿತರಿಗೆ ಚಿರರುಣಿ" ಎಂದು ಬರೆದಿದ್ದಾರೆ ನಟ ಸುದೀಪ್. ಕೊನೆಯಲ್ಲಿ ಪ್ರೀತಿಯಿಂದ ನಿಮ್ಮ ಕಿಚ್ಚ, ಲವ್ ಯೂ ಆಲ್ ಎಂಬ ಕಿರುಸಾಲು ಸಹ ಸೇರಿಸಿದ್ದಾರೆ.
Finally, bk to blore after a long campaign schedule.
— Kichcha Sudeepa (@KicchaSudeep) May 8, 2023
It's been a learning experience as well. Thank u @Chakravarthy_dj for having been a great support through this journey til the finish.
Best wshs to all candidates.🤗🥂 pic.twitter.com/8c6JWXrs7L
ಈ ನನ್ನ ಪಯಣದಲ್ಲಿ ಪ್ರಾರಂಭದಿಂದಲೂ ನನ್ನ ಜೊತೆಗಿದ್ದು ನನಗೆ ಸಹಕಾರ ನೀಡಿದ ಚಕ್ರವರ್ತಿ ಚಂದ್ರಚೂಡ್ಗೆ ಧನ್ಯವಾದ. ಎಲ್ಲ ಅಭ್ಯರ್ಥಿಗಳಿಗೂ ಶುಭವಾಗಲಿ" ಎಂದು ಬರೆದುಕೊಂಡಿದ್ದರು. ಅಲ್ಲದೇ ಚಕ್ರವರ್ತಿ ಚಂದ್ರಚೂಡ್ ಅವರೊಟ್ಟಿಗೆ ಚಿತ್ರವನ್ನು ಸುದೀಪ್ ಹಂಚಿಕೊಂಡಿದ್ದಾರೆ.












Click it and Unblock the Notifications