ಡಿಸಿಎಂ ಪಟ್ಟ ಕೈತಪ್ಪಿದ್ದಕ್ಕೆ ಡಿಕೆ ಬ್ರದರ್ಸ್ ಗರಂ!
Recommended Video

ಆರಂಭಿಕ ಆಘಾತ! ಇನ್ನೂ ಇನ್ನಿಂಗ್ಸ್ ಆರಂಭವಾಗುವ ಮೊದಲೇ ಕಾಂಗ್ರೆಸ್ ಪಾಳೇಯದಲ್ಲಿ ಭಿನ್ನಮತ ಆರಂಭವಾಗುವ ಎಲ್ಲಾ ಸೂಚನೆಗಳೂ ನಿಚ್ಛಳವಾಗಿವೆ. ಅದಕ್ಕೆ ಪುಷ್ಠಿ ನೀಡುವಂತೆ ಕಾಂಗ್ರೆಸ್ಸಿನ ಹೀರೋಗಳೆಂದೇ ಕರೆಯಿಸಿಕೊಂಡ ಡಿಕೆ ಬ್ರದರ್ಸ್ ಪಕ್ಷದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಕೆಲಸ ಮಾಡೋದು ನಾವು, ಅಧಿಕಾರ ಮಾತ್ರ ನಿಮಗಾ?" ಹಾಗಂತ ಕಾಂಗ್ರೆಸ್ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ ಸಂಸದ ಡಿ ಕೆ ಸುರೇಶ್.
ಹೌದು, ಸಹೋದರ ಡಿ ಕೆ ಶಿವಕುಮಾರ್ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ಕೈತಪ್ಪಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, "ನಿಷ್ಠೆಯಿಂದ ಜವಾಬ್ದಾರಿ ನಿರ್ವಹಿಸೋದು ನಾವು, ಆದರೆ ನಮಗೆ ಡಿಸಿಎಂ ಹುದ್ದೆ ನೀಡೋಲ್ಲ ಅಂದ್ರೆ ನಾವು ಇಷ್ಟೆಲ್ಲ ಯಾಕೆ ಮಾಡಬೇಕು?" ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ಸಿನ ಸೂಪರ್ ಹೀರೋ ಡಿ ಕೆ ಶಿವಕುಮಾರ್ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ಸಿಕ್ಕೇ ಸಿಗುತ್ತದೆ ಎಂಬ ಹುಮ್ಮಸ್ಸಿನಲ್ಲಿದ್ದ ಅವರ ಬೆಂಬಲಿಗರ ಕನಸು ಭಗ್ನವಾಗಿದ್ದು, 'ಇಂದು ಉಪಮುಖ್ಯಮಂತ್ರಿಯಾಗಿ ಡಾ ಜಿ.ಪರಮೇಶ್ವರ್ ಪ್ರಮಾಣ ವಚನ ಸ್ವೀಕರಿಸುತ್ತಾರೆ' ಎಂಬ ಸುದ್ದಿ ಬಂದಾಗ.
ಸಮರ್ಥರೇ ಆಗಿದ್ದರೂ ಒಕ್ಕಲಿಗ ಎಂಬ ಕಾರಣಕ್ಕೆ ಕೈತಪ್ಪಿದ ಡಿಸಿಎಂ ಹುದ್ದೆಯ ಕುರಿತು ಡಿಕೆಶಿ ಬೆಂಬಲಿಗರು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಡಿಕೆಡಿ ಬ್ರದರ್ಸ್ ಮನವೊಲಿಸಲು ಕಾಂಗ್ರೆಸ್ ಮುಖಂಡರು ಹಿಲ್ಟನ್ ಹೋಟೆಲ್ ಗೆ ದೌಡಾಯಿಸಿದ್ದಾರೆ ಎನ್ನಲಾಗಿದೆ. ಸಮ್ಮಿಶ್ರ ಸರ್ಕಾರದ ಆರಂಭಕ್ಕೂ ಮುನ್ನವೇ ಬಹುದೊಡ್ಡ ವಿಘ್ನವೊಂದು ಈ ರೀತಿಯಲ್ಲಿ ಬಂದೆರಗಿದಂತಾಗಿದೆ.












Click it and Unblock the Notifications