ರಾತ್ರಿಯಿಡೀ ಮನೆಗೇ ಹೋಗದ ಸಿಎಂ ಯಡಿಯೂರಪ್ಪ
ಬೆಂಗಳೂರು, ಮೇ 18: ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿ ಎಸ್ ಯಡಿಯೂರಪ್ಪ ಅವರು ಅಧಿಕಾರ ಸ್ವೀಕರಿಸಿದ ಮೊದಲ ದಿನ ಮನೆಗೇ ಹೋಗಲಿಲ್ಲ! ಹೌದು, ಸದನದಲ್ಲಿ ಬಹುಮತ ಸಾಬೀತುಪಡಿಸುವ ಒತ್ತಡದಲ್ಲಿರುವ ಬಿಜೆಪಿ ನಾಯಕರು ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಸಭೆ ಸೇರಿದ್ದರಿಂದ ಮುಖ್ಯಮಂತ್ರಿಗಳು ಮನೆಗೇ ಹೋಗದೆ ರಾತ್ರಿಯಿಡೀ ಹೊಟೇಲ್ ನಲ್ಲೇ ಇದ್ದರು.
ಬಿಜೆಪಿಯ ಮುಂದಿನ ನಡೆಯ ಕುರಿತು ನಾಯಕರೆಲ್ಲ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ. ಇಂದು ಬೆಳಗ್ಗಿನ ಜಾವದವರೆಗೂ ಖಾಸಗಿ ಹೊಟೇಲ್ ನಲ್ಲೇ ತಂಗಿದ್ದ ಯಡಿಯೂರಪ್ಪ ಗಷ್ಟೇ ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ಮನೆಗೆ ತೆರಳಿದ್ದಾರೆ.

ಕರ್ನಾಟಕ ರಾಜ್ಯದ 24 ನೇ ಮುಖ್ಯಮಂತ್ರಿಯಾಗಿ ನಿನ್ನೆ(ಮೇ 17) ಬೆಳಿಗ್ಗೆ ಬಿ ಎಸ್ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮೇ 15 ರಂದು ಹೊರಬಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ, ಕಾಂಗ್ರೆಸ್ 78 ಸ್ಥಾನ, ಜೆಡಿಎಸ್ 38 ಸ್ಥಾನ ಮತ್ತು ಇತರರು 2 ಸ್ಥಾನ ಗೆದ್ದಿದ್ದರು.












Click it and Unblock the Notifications