HD Kumaraswamy: ₹20 ಕೋಟಿ ಕೊಟ್ಟರೆ ಜೆಡಿಎಸ್‌ಗೆ 128 ಸೀಟು ಬರುತ್ತೆ ಅಂತಾರೆ: HDK
ಬೆಂಗಳೂರು, ಮೇ 06: ಮತದಾನ ಪೂರ್ವ ಸಮೀಕ್ಷೆಗಳನ್ನು ನಂಬಬೇಡಿ. ಮೊನ್ನೆ ಕಾಂಗ್ರೆಸ್ 116 ಸೀಟು ಗೆಲ್ಲಲಿದೆ ಎಂದರು. ನೆನ್ನೆ ಬಿಜೆಪಿಗೆ 116 ಸ್ಥಾನ ಬರಲಿದೆ ಎಂದು ಹೇಳುತ್ತಿದ್ದಾರೆ. 20 ಕೋಟಿ ರೂಪಾಯಿ ಕೊಟ್ಟರೆ ಜೆಡಿಎಸ್‌ಗೆ 128 ಸೀಟು ಬರುತ್ತದೆ ಎಂದು ಹೇಳುತ್ತಾರೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಲೇವಡಿ ಮಾಡಿದರು.
ಬೆಂಗಳೂರಿನ ದಾಸರಹಳ್ಳಿ ವ್ಯಾಪ್ತಿಯ ಪೀಣ್ಯ ಸೇರಿದಂತೆ ಹಲವು ಭಾಗಗಳಲ್ಲಿ ಭಾನುವಾರ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಕೆಲವರು ಜೆಡಿಎಸ್ ಪಕ್ಷಕ್ಕೆ 22ರಿಂದ 28 ಎಂದು ಬಿತ್ತರಿಸಿದ್ದಾರೆ. ಚುನಾವಣಾ ಪೂರ್ವ ಸಮೀಕ್ಷೆಳನ್ನು ನೀವುಸ ನಂಬಬೇಡಿ. ದುಡ್ಡು ಕೊಟ್ಟರೆ ಹೇಗೆ ಬೇಕಾದರೂ ಬಿತ್ತರಿಸುತ್ತಾರೆ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಅವರು, ಈ ಬಾರಿ ಜೆಡಿಎಸ್ 123 ಸ್ಥಾನ ಪಡೆಯಲಿದೆ. ಯಾರೇ ಕುತಂತ್ರ ಮಾಡಿದರೂ ಮುಂದಿನ ಸಿಎಂ ನಾನೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇವಲ ಉತ್ತರ ಕರ್ನಾಟಕ ಭಾಗವೊಂದರಲ್ಲೇ ಜೆಡಿಎಸ್ ಈ ಸಲ 30ರಿಂದ 40 ಸ್ಥಾನಗಳನ್ನು ಬಾಚಿಕೊಳ್ಳಲಿದೆ. ಇನ್ನು ಜೆಡಿಎಸ್ ಭದ್ರಕೋಟೆಯಾದ ತುಮಕೂರ, ಮಂಡ್ಯ, ಹಾಸನ, ರಾಮನಗರ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ವಿಜಯಪತಾಕೆ ಹಾರಿಸಲಿದ್ದಾರೆ. ಆರೋಗ್ಯ ತೊಂದರೆಯಲ್ಲೂ ನಾನು ರಾಜ್ಯಾದ್ಯಂತ ಸುತ್ತಿ ಪ್ರಚಾರ ಮಾಡಿದ್ದೇನೆ. ಜನರ ಕಷ್ಟ ಸುಖ ಆಲಿಸಿದ್ದೇನೆ ಎಂದರು.
ಜನರು ಪಂಚರತ್ನ ಯೋಜನೆ ಬೆಂಬಲಿಸುತ್ತಾರೆ.
ರೈತರು ಒಳಗೊಂಡಂತೆ ಕರ್ನಾಟಕದ ಜನರ ಬದುಕಲ್ಲಿ ನೆಮ್ಮದಿ ತರಬೇಕು ಎಂಬುದು ಮಹತ್ತ ಆಸೆ ಹೊಂದಿದ್ದೇನೆ. ಮತದಾರರು ದುಡ್ಡಿಗೆ ಮರುಳಾಗುವವರಲ್ಲ. ಕನ್ನಡ ಭಾಷೇ, ನೆಲ ಜಲ ರಕ್ಷಣೆ ನಿಟ್ಟಿನಲ್ಲಿ ನಾವು ಹಮ್ಮಿಕೊಂಡಿರುವ ಪಂಚರತ್ನ ಯೋಜನೆ ಬೆಂಬಲಿಸುವ ವಿಶ್ವಾಸ, ಈ ಬಾರಿ ಜೆಡಿಎಸ್ ಕೈ ಹಿಡಿಯುತ್ತಾರೆ ಎಂದು ನಾನು ನಂಬಿದ್ದೇನೆ ಎಂದು ಅವರು ಹೇಳಿದರು.

ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಶೇಕಡಾ 85 ಭ್ರಷ್ಟಾಚಾರ ಸರ್ಕಾರವೆಂದು ಹಾಗೂ ಕಾಂಗ್ರೆಸ್‌ನವರು ಬಿಜೆಪಿ ವಿರುದ್ಧ ಇದು 40 ಪರ್ಸೆಂಟ್ ಭ್ರಷ್ಟಾಚಾರದ ಸರ್ಕಾರ ಎಂದು ಆರೋಪಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಆದರೆ, ಜೆಡಿಎಸ್ ವಿರುದ್ಧ ಆ ರೀತಿಯ ಆರೋಪ ಹೊರಿಸಲು ಸಾಧ್ಯವೇ ಇಲ್ಲ. ಯಾಕಂದರೆ ನಾವು ಭ್ರಷ್ಟಾಚಾರ ಮಾಡಿಲ್ಲ ಎಂದು ಅವರು ಹೇಳಿಕೊಂಡರು.
ದಾಸರಹಳ್ಳಿ ಕ್ಷೇತ್ರದ ಹೆಗ್ಗನಹಳ್ಳಿ, ಪೀಣ್ಯ, ಸುಂಕದಕಟ್ಟೆಇತರೆ ಪ್ರದೇಶಗಳಲ್ಲಿ ರಾರಯಲಿ ನಡೆಸಿ ಜೆಡಿಎಸ್ ಅಭ್ಯಥಿ ಮಂಜುನಾಥ್ ಪರ ಮತಯಾಚಿಸಿದರು. ಸಾವಿರಾರು ಕಾರ್ಯಕರ್ತರು, ಸ್ಥಳೀಯ ನಾಗರಿಕರು ಜಮಾಯಿಸಿದ್ದರು.












Click it and Unblock the Notifications