ಚುನಾವಣೆ ವೇಳೆ ಬಿಜೆಪಿಗೆ ಕಾಂಗ್ರೆಸ್ ಹೇಳಿಕೆಗಳೇ ಅಸ್ತ್ರ! ನಿಂದನೆಗಳನ್ನೇ ಪಾಸಿಟಿವ್ ಆಗಿ ಪರಿವರ್ತಿಸಿದ ಮಾಸ್ಟರ್ ಮೋದಿ!
ಬೆಂಗಳೂರು,ಏಪ್ರಿಲ್28: ರಾಜ್ಯ ವಿಧಾನಸಭಾ ಚುನಾವಣಾ ಹೊತ್ತಲ್ಲಿ ಬಿಜೆಪಿಗೆ ಮತ್ತೊಂದು ಅಸ್ತ್ರ ಸಿಕ್ಕಿದೆ. ಚುನಾವಣೆಯಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ನಾಯಕರು ಬಿಜೆಪಿ ನಾಯಕರ ವಿರುದ್ದ ಹೇಳಿಕೆಯನ್ನ ನೀಡುವ ಭರದಲ್ಲಿ ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದು, ಬಿಜೆಪಿಗೆ ಚುನಾವಣೆ ಪ್ರಬಲ ಅಸ್ತ್ರವನ್ನ ನೀಡುವ ಮೂಲಕ ಎಡವಟ್ಟು ಮಾಡಿಕೊಂಡಿಕೊಂಡಿದೆ.
ಹೌದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಷದ ಹಾವು ಎಂದು ಕರೆದಿದ್ದಾರೆ. ಇದೇ ಹೇಳಿಕೆ ಈಗ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಿರುಗುಬಾಣವಾಗುವ ಸಾಧ್ಯತೆ ಇದೆ. ಏಕೆಂದರೆ, ಈ ಹಿಂದೆ ಕಾಂಗ್ರೆಸ್ ನಾಯಕರು ಇದೇ ರೀತಿ ಮೋದಿ ಬಗ್ಗೆ ನೀಡಿರುವ ಹೇಳಿಕೆಗಳನ್ನು ಬಿಜೆಪಿ ಚುನಾವಣೆಯಲ್ಲಿ ಅಸ್ತ್ರವಾಗಿ ಬಳಸಿ ಗೆಲುವು ಕಂಡಿದೆ.

ಹಿಂದಿನಿಂದಲೂ ಕಾಂಗ್ರೆಸ್‌ನ ನಾಯಕರು ಮೋದಿ ಬಗ್ಗೆ ನೀಡಿದ ಹೇಳಿಕೆಗಳು ಕಾಂಗ್ರೆಸ್‌ಗೆ ತಿರುಗುಬಾಣ ಆಗಿವೆ. ಚಾಯ್‌ವಾಲಾ, ಚೌಕಿದಾರ್ ಚೋರ್ ಹೈ, ರಾವಣ ಸೇರಿ ಅನೇಕ ಟೀಕೆಗಳನ್ನು ಪಾಸಿಟಿವ್ ಆಗಿ ಪರಿವರ್ತಿಸಿಕೊಳ್ಳುವಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಸ್ಟರ್ ಆಗಿದ್ದು, ಕಳೆದ ಅನೇಕ ಚುನಾವಣೆಗಳಲ್ಲಿ ಬಿಜೆಪಿಗೆ ಒಂದಿಷ್ಟು ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಳ್ಳುವಲ್ಲಿಯೂ ಸಕ್ಸಸ್ ಆಗಿದ್ದಾರೆ.
2007 ರಲ್ಲಿ ಮೌತ್ ಕಾ ಸೌದಾಗರ್ ಎಂದ ಸೋನಿಯಾ
ಹೌದು, 2007 ರಲ್ಲಿ ನಡೆದ ಗುಜರಾತ್ ವಿಧಾನಸಭೆ ಚುನಾವಣೆ ವೇಳೆ ಮೌತ್ ಕಾ ಸೌದಾಗರ್(ಸಾವಿನ ವ್ಯಾಪರಿ) ಎಂದು ಸೋನಿಯಾ ಗಾಂಧಿ ಅವರು ಮೋದಿ ಅವರನ್ನ ಕರೆದಿದ್ದರೂ. ಇದನ್ನ ಮೋದಿ ಅವರು ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡಿದ್ದರು. ಈ ವೇಳೆ ಗುಜರಾತ್ ನಲ್ಲಿ 182 ಸ್ಥಾನಗಳಲ್ಲಿ 117 ಸ್ಥಾನಗಳನ್ನು ಗೆದ್ದು ಬಿಜೆಪಿ ಮತ್ತೆ ಸರ್ಕಾರ ರಚನೆ ಮಾಡಿತ್ತು. ಈ ವೇಳೆ ಕಾಂಗ್ರೆಸ್ ಹೀನಾಯವವಾಗಿ ಸೋಲು ಅನುಭವಿಸಿತು.

2014 ರಲ್ಲಿ ಮೋದಿ ಚಾಯ್‌ವಾಲಾ ಎಂದ ಮಣಿಶಂಕರ ಅಯ್ಯರ್
ಇನ್ನೂ 2014 ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ನ ನಾಯಕ ಮಣಿಶಂಕರ್ ಅಯ್ಯರ್ ಅವರು, ನರೇಂದ್ರ ಮೋದಿ ಚಾಯ್ ವಾಲಾ ( ಚಹಾ ಮಾರಾಟಗಾರ) ಯಾವತ್ತೂ ಪ್ರಧಾನಿಯಾಗಲೂ ಸಾಧ್ಯವಿಲ್ಲ ಎಂದು ಹೇಳಿದ್ದು, ಬೇಕಾದರೇ ಕಾಂಗ್ರೆಸ್ ಸಮಾವೇಶದಲ್ಲೂ ಚಹಾ ಮಾರಬಹುದು ಎಂದು ಟೀಕಿಸಿದ್ದರು. ಇದನ್ನ ಅಸ್ತ್ರವನ್ನಾಗಿ ಮಾಡಿಕೊಂಡ ಮೋದಿ ಅವರು ಚುನಾವಣಾ ಪ್ರಚಾರದಲ್ಲಿ ಚಾಯ್ ಪೇ ಚರ್ಚಾ ನಡೆಸಿದರು. ಅಂದರೇ ಚಹಾ ಮಾರುವವ ಪ್ರಧಾನಿ ಆಗಬಾರದೇ ಎಂದು ಪ್ರಚಾರ ನಡೆಸಿದ್ದು, ಇದನ್ನೇ ಚುನಾವಣಾ ಅಸ್ತ್ರವಾಗಿ ಮಾಡಿಕೊಂಡು ಅಧಿಕಾರವನ್ನ ಪಡೆದರು.
2017ರಲ್ಲಿ ಮೋದಿ ನೀಚ ಎಂದ ಮಣಿಶಂಕರ್ ಅಯ್ಯರ್
ಇನ್ನೂ 2017ರ ಗುಜರಾತ್ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ನೀಚ್ ಆದ್ಮಿ ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದರು. ಇನ್ನೂ ನೀಚ್ ಎಂದರೆ ಹಿಂದಿಯಲ್ಲಿ ಕೆಳಜಾತಿಗಳಿಗೆ ಬಳಸುವ ಪದ. ಬಿಜೆಪಿಗೆ ಜಾತಿವಾದಿ ನಿಂದನೆಗೆ ತಿರುಗಿಸಲು ಮೋದಿ ಈ ಹೇಳಿಕೆಯನ್ನು ಬಳಸಿಕೊಂಡು 2017ರ ಚುನಾವಣೆಯಲ್ಲಿ ಬಿಜೆಪಿ 99 ಸ್ಥಾನ ಗಳಿಸಿ ಅಧಿಕಾರಕ್ಕೆ ಬಂತು.
2019 ರಲ್ಲಿ ಚೌಕಿದಾರ್ ಚೋರ್ ಹೈ ಎಂದ ಕಾಂಗ್ರೆಸ್
2019ರ ಲೋಕಸಭೆ ಚುನಾವಣೆ ವೇಳೆ ರಫೇಲ್ ಒಪ್ಪಂದದಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಕಾಂಗ್ರೆಸ್ ಮೋದಿ ಅವರನ್ನ ಚೌಕಿದಾರ್ ಚೋರ್ ಹೈ (ಈತ ದೇಶರಕ್ಷಕನಲ್ಲ, ಕಳ್ಳ) ಎಂಬ ಪ್ರಚಾರ ಆರಂಭಿಸಿತು. ಇದನ್ನೇ ಲೋಕಸಭೆಯಲ್ಲಿ ಬಿಜೆಪಿ ಚುನಾವಣೆಗೆ ಪ್ರಯೋಗವಾಗಿ ಜಯ ಗಳಿಸಿತು.
2022ರಲ್ಲಿ ಮೋದಿ 10 ತಲೆಯ ರಾವಣ ಎಂದ ಖರ್ಗೆ
2022ರಲ್ಲಿ ರಾಜ್ಯಸಭಾ ಸದಸ್ಯರಾಗಿದ್ದ ಮಲ್ಲಿಕಾರ್ಜುನ್ ಖರ್ಗೆ ಅವರು ಗುಜರಾತ್ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು 10 ತಲೆಯ ರಾವಣನಿಗೆ ಹೋಲಿಸಿದರು. ಈ ವೇಳೆ ಬಿಜೆಪಿ ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆಯನ್ನ ಉಪಯೋಗಿಸಿಕೊಂಡು ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಪ್ರಚಾರ ಮಾಡಿತ್ತು. ಇದರ ಲಾಭವನ್ನು ಬಿಜೆಪಿ ಪಡೆದುಕೊಂಡಿತು.












Click it and Unblock the Notifications