Jagadish Shettar: ಯಡಿಯೂರಪ್ಪ‌ ಹೆಗಲ ಮೇಲೆ ಬಂದೂಕು ಇಟ್ಟು, ನನಗೆ ಗುರಿ ಇಟ್ಟಿದ್ದಾರೆ: ಜಗದೀಶ್‌ ಶೆಟ್ಟರ್‌

ಹುಬ್ಬಳ್ಳಿ,ಏಪ್ರಿಲ್27: ರಾಜ್ಯ ವಿಧಾನಸಭಾ ಚುನಾವಣಾ ಕಾವು ಜೋರಾಗಿದೆ. ಮಿಷನ್‌ 150 ಟಾರ್ಗೆಟ್‌ ಹಾಕಿಕೊಂಡಿರು ಬಿಜೆಪಿ ಹೈಕಮಾಂಡ್‌, ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯುವುದರ ಜೊತೆಗೆ ಬಿಜೆಪಿ ಬಿಟ್ಟು ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗಿರುವ ನಾಯಕರಿಗೆ ತಕ್ಕ ಪಾಠ ಕಲಿಸಲು ಮುಂದಾಗಿದೆ.

ಹೌದು, ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರಿಗೆ ಟಿಕೆಟ್‌ ಕೈ ತಪ್ಪಿ ಹಿನ್ನೆಲೆ ಬಿಜೆಪಿಗೆ ಗುಡ್‌ ಬೈ ಹೇಳಿ ಕಾಂಗ್ರೆಸ್‌ ಪಕ್ಷವನ್ನ ಸೇರ್ಪಡೆಯಾಗಿದ್ದು, 6 ಬಾರೀ ಗೆಲ್ಲುವು ಸಾಧಿಸಿರುವ ಜಗದೀಶ್‌ ಶೆಟ್ಟರ್‌ ಗೆ ಸೋಲಿನ ರುಚಿ ತೋರಿಸಲು ಬಿಜೆಪಿ ಕಲಿಗಳು ಸಜ್ಜಾಗಿದ್ದಾರೆ.

Karnataka Election: I Will Win With BS Yediyurappa Blessings Says Jagadish Shettar

ಈ ಕುರಿತು ಮಾಜಿ ಮುಖ್ಯಮಂತ್ರ ಹಾಗೂ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಗದೀಶ್‌ ಶೆಟ್ಟರ್‌ ಮಾತನಾಡಿ, ನಾನು ಕೂಲ್ ಕೂಲ್ ಆಗಿಯೇ ಚುನಾವಣಾ ಪ್ರಚಾರ ನಡೆಸುತ್ತಿದ್ದ್ದೇನೆ. ನಾನು ಪ್ರತಿಬಾರಿಯೂ ಇದೇ ರೀತಿಯಲ್ಲಿ ಚುನಾವಣಾ ಪ್ರಚಾರ ನಡೆಸೋದು. ಆದರೆ, ಈ ಬಾರೀ ನನ್ನನ್ನು ಮಣಿಸೋಕೆ ಘಟಾನುಘಟಿ ನಾಯಕರು ಬೀಡು ಬಿಟ್ಟಿದ್ದಾರೆ ಎಂದು ಹೇಳಿದರು.

ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರ್ಪಡೆಯಾದ ನನ್ನ ವಿರುದ್ದ ಲಿಂಗಾಯತ ಮುಖಂಡರನ್ನೇ ನನ್ನ ವಿರುದ್ಧ ದಾಳ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ‌ ಅವರ ಹೆಗಲ ಮೇಲೆ ಬಂದೂಕು ಇಟ್ಟು,‌ ನನಗೆ ಗುರಿ ಇಟ್ಟಿದ್ದಾರೆ. ಲಿಂಗಾಯತ ನಾಯಕನ ಮೂಲಕವೇ ಮತ್ತೊಬ್ಬ ಲಿಂಗಾಯತ ನಾಯಕನ ತೇಜೋವಧೆ ನಡೆದಿದೆ ಎಂದು ಬಿಜೆಪಿ ನಾಯಕರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.

ಇನ್ನೂ ಲಿಂಗಾಯತ ಸಮುದಾಯಕ್ಕೆ ಜಗದೀಶ್‌ ಶೆಟ್ಟರ್‌ ಅನ್ಯಾಮ ಮಾಡಿದ್ದಾರೆ. ಈ ಬಾರೀ ಚುನಾವಣೆಯಲ್ಲಿ ಅವರನ್ನ ಸೋಲಿಸಿ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಹೇಳಿದ್ದು, ಯಡಿಯೂರಪ್ಪನವರು ವೀರಶೈವ ಲಿಂಗಾಯತರ ಸಭೆ ಮಾಡಿದ್ದಾರೆ. ಯಡಿಯೂರಪ್ಪ ಅವರು ನಡೆಸಿದ ಸಭೆಯಲ್ಲಿ ಎಂತಹ ನಾಯಕರು, ಎಷ್ಟು ನಾಯಕರು ಭಾಗಿಯಾಗಿದ್ದರೆಂಬ ಮಾಹಿತಿ ನನ್ನ ಬಳಿ ಇದೆ. ಅವರಷ್ಟೇ ಲಿಂಗಾಯತ ನಾಯಕರಲ್ಲ. ಅದರ ಹೊರತಾಗಿಯೂ ಲಿಂಗಾಯತ ನಾಯಕರ ದೊಡ್ಡ ಪಡೆ ಇದೆ ಎಂದು ಹೇಳುವ ಮೂಲಕ ಯಡಿಯೂಪ್ಪ ಅವರಿಗೆ ಟಾಂಗ್ ನೀಡಿದರು.

Karnataka Election: I Will Win With BS Yediyurappa Blessings Says Jagadish Shettar

ನನ್ನ ಕ್ಷೇತ್ರದಲ್ಲಿ ಆಗುತ್ತಿರುವ ರಾಜಕೀಯ ಬೆಳವಣಿಗೆಯನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇಲ್ಲಿಗೆ ಪ್ರಧಾನಿ‌ ಮೋದಿಯವರನ್ನೂ‌ ಸಹ ಕರೆತರೋಕೆ ಮುಂದಾಗಿದ್ದಾರೆ. ಅವರು ಏನೇ ಮಾಡಲಿ, ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ‌ ಏನೇ ಬೈಯಲಿ. ನಾನು ಮಾತ್ರ ಧೃತಿಗೆಡಲ್ಲ ಎಂದು ಜಗದೀಶ್‌ ಶೆಟ್ಟರ್‌ ಹೇಳಿದರು.

ಇನ್ನೂ ಲಿಂಗಾಯತ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರ ಬೈಗುಳವನ್ನು ಆಶೀರ್ವಾದ ಅಂತ ತಿಳಿದುಕೊಳ್ತೇನೆ. ಅವರ ಬೈಗುಳ ಆಶೀರ್ವಾದದಿಂದಲೇ ಗೆದ್ದು ತೋರಿಸುತ್ತೇನೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+