ಕೆಲವೆಡೆ ತಾಂತ್ರಿಕ ತೊಂದರೆ, ಮತದಾನ ಬಹುತೇಕ ಯಶಸ್ವಿ: ಸಂಜೀವ್ ಕುಮಾರ್
ಬೆಂಗಳೂರು, ಮೇ 12: ಕರ್ನಾಟಕದ ವಿಧಾನಸಭಾ ಚುನಾವಣೆ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಶೇ 70ಕ್ಕೂ ಹೆಚ್ಚು ಮತದಾನ ಆಗಿದೆ, ಆದರೆ ನಿಖರವಾದ ಅಂಕಿ ಸಂಖ್ಯೆ ಇನ್ನೂ ದೊರೆತಿಲ್ಲ ಎಂದು ರಾಜ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಹೇಳಿದರು.
ಮತದಾನ ಪ್ರಕ್ರಿಯೆ ಮುಗಿದ ನಂತರ ಸುದ್ದಿಗೋಷ್ಠಿ ನಡೆಸಿದ ಅವರು, ಕೆಲವೆಡೆ ಇವಿಎಂ ಮತ್ತು ವಿವಿಪ್ಯಾಟ್‌ಗಳು ತೊಂದರೆ ಕೊಟ್ಟಿವೆ 57.786 ವಿವಿಪ್ಯಾಟ್‌ಗಳಲ್ಲಿ ಶೇ 1.02% ವಿವಿಪ್ಯಾಟ್‌ಗಳನ್ನು ಬದಲಾಯಿಸಬೇಕಾಯಿತು ಎಂದು ಅವರು ಹೇಳಿದರು.
ಚುನಾವಣಾ ಸಿಬ್ಬಂದಿ, ಮೇಲ್ವಿಚಾರಕರು ಮತಯಂತ್ರಗಳ ಸಂಖ್ಯೆ, ಭದ್ರತೆ ಇನ್ನಿತರ ಮಾಹಿತಿಗಳ ಬಗ್ಗೆ ಮಾತನಾಡಿದ ಅವರು, ಎಲ್ಲ ಚುನಾವಣಾ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಇವಿಎಂ ಮತ್ತು ವಿವಿಪ್ಯಾಟ್‌ನ ತಾಂತ್ರಿಕ ಸಮಸ್ಯೆಯಿಂದಾಗಿ ಮತದಾನ ನಡೆಯದ ಹೆಬ್ಬಾಳ ಕ್ಷೇತ್ರದ ಲೊಟ್ಟೆಗೊಲ್ಲಹಳ್ಳಿ ಗ್ರಾಮ ಮತಗಟ್ಟೆ ಸಂಕ್ಯೆ 156ರಲ್ಲಿ ಮರು ಮತದಾನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಸಂಜೀವ್ ಕುಮಾರ್ ಅವರು ಹೇಳಿದರು.
ಲೊಟ್ಟೆಗೊಲ್ಲಹಳ್ಳಿಯಲ್ಲಿ ನಡೆದ ಮತದಾನ ಪ್ರಕ್ರಿಯೆಯನ್ನು ಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ತಿಳಿಸಿದ ಅವರು, ಮೇ 14ರಂದು ಲೊಟ್ಟೆಗೊಲ್ಲಹಳ್ಳಿಯಲ್ಲಿ ಮರು ಮತದಾನ ಮಾಡಲಾಗುವುದು, ಈಗಾಗಲೇ ಮತ ಹಾಕಿ ಬೆರಳಿಗೆ ಶಾಯಿ ಹಾಕಿಸಿಕೊಂಡವರಿಗೆ ಬೇರೆ ಬೆರಳಿಗೆ ಶಾಯಿ ಹಾಕುವ ವ್ಯವಸ್ಥೆ ಮಾಡಲಾಗುವುದು ಎಂದರು.












Click it and Unblock the Notifications