Get Updates
Get notified of breaking news, exclusive insights, and must-see stories!

ಅತ್ಯಧಿಕ ಅಂತರದಿಂದ ಕಾಂಗ್ರೆಸ್ ಗೆಲ್ಲಲಿದೆ : ಭವಿಷ್ಯ ನುಡಿದ 'ಓಡುವ ಕುದುರೆ' ಶಾಮನೂರು ಶಿವಶಂಕರಪ್ಪ

ಬೆಂಗಳೂರು, ಏಪ್ರಿಲ್. 19: ಚುನಾವಣಾ ಅಖಾಡದಲ್ಲಿ ತನ್ನನ್ನು ತಾನು "ಓಡುವ ಕುದುರೆ" ಎಂದು ಕರೆದುಕೊಳ್ಳುತ್ತಿರುವ 91ರ ಹರೆಯದ ಶಾಮನೂರು ಶಿವಶಂಕರಪ್ಪ ಅವರು ಕರ್ನಾಟಕದಲ್ಲಿ ಮತ್ತೆ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ತಮ್ಮ ವಯಸ್ಸನ್ನು ಗಮನದಲ್ಲಿ ಇಟ್ಟುಕೊಳ್ಳದೆ ಚುನಾವಣಾ ಉತ್ಸಾಹದಲ್ಲಿರುವ ಇವರು ಈ ಬಾರಿ ಕಾಂಗ್ರೆಸ್ ಅತ್ಯಧಿಕ ಅಂತರದಿಂದ ಗೆಲುವು ಕಾಣಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಐದು ಬಾರಿ ಶಾಸಕರಾಗಿರುವ ಹಾಗೂ ಮಾಜಿ ಲೋಕಸಭಾ ಸದಸ್ಯರೂ ಆಗಿರುವ ಕಾಂಗ್ರೆಸ್ ಹಿರಿಯ ನಾಯಕ, ದಾವಣಗೆರೆ ದಕ್ಷಿಣದಿಂದ ಸ್ಪರ್ಧಿಸಲು ಮತ್ತೆ ಸಜ್ಜಾಗಿದ್ದಾರೆ. "ನನಗೆ ಜನರ ಬೆಂಬಲ ಮತ್ತು ದೇವರ ಆಶೀರ್ವಾದವಿದೆ. ಇನ್ನೇನು ಬೇಕು?" ಎಂದು ಪ್ರಶ್ನಿಸುವ ಅವರು ತಾವು ಮತ್ತೊಮ್ಮೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Karnataka Election 2023: Will Win By Highest Margin says congress leader Shamanur Shivashankarappa

ಸಿದ್ದರಾಮಯ್ಯ ಈಗಾಗಲೇ ಇದು ತನ್ನ ಕೊನೆಯ ಚುನಾವಣೆ ಎಂದು ಘೋಷಿಸಿದ್ದಾರೆ. ಆದರೆ, ಈ ಇಳಿ ವಯಸ್ಸಿನಲ್ಲಿಯೂ ಅವರ ವಯಸ್ಸನ್ನು ಪರಿಗಣಿಸದೆ ಕಾಂಗ್ರೆಸ್ ಹೇಗೆ ಟಿಕೆಟ್ ನೀಡಿತು ಎಂಬುದರ ಕುರಿತು ಮಾತನಾಡಿರುವ ಅವರು, "ಓಟದ ಕುದುರೆಗಳನ್ನು ಮಾತ್ರ ರೇಸ್‌ಗೆ ಆಯ್ಕೆ ಮಾಡಲಾಗುತ್ತದೆ. ನಾನು ಅಂತಹ ಓಡುವ ಕುದುರೆ. ನಾನು ಚುನಾವಣೆಯಲ್ಲಿ ಹೆಚ್ಚು ಅಂತರದಿಂದ ಗೆಲ್ಲಲಿದ್ದೇನೆ" ಎಂದು ನಗೆ ಬೀರಿದ್ದಾರೆ.

ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಭಾವಿ ವೀರಶೈವ ಮಹಾಸಭಾದ ಅಧ್ಯಕ್ಷರೂ ಆಗಿರುವ ಹಿರಿಯ ರಾಜಕಾರಣಿ, ದಾವಣಗೆರೆಯ ಮಾಜಿ ಮೇಯರ್ ಬಿಜೆಪಿಯ ಬಿ ಜಿ ಅಜಯ್ ಕುಮಾರ್ ವಿರುದ್ಧ ಕಣಕ್ಕಿಳಿಯಲಿದ್ದಾರೆ. "ಎಸ್‌ಎಸ್‌" ಎಂದು ಪ್ರೀತಿಯಿಂದ ಕರೆಸಿಕೊಳ್ಳುವ ಅನುಭವಿ ನಾಯಕನಿಗೆ ನಡೆಯುವಾಗ ಜನರ ಬೆಂಬಲ ಬೇಕಾಗುತ್ತದೆ. ಆದರೆ ಉತ್ತಮ ಕೇಳುವ ಸಾಮರ್ಥ್ಯ, ಸ್ಪಷ್ಟ ಧ್ವನಿ ಮತ್ತು ಸ್ಪಷ್ಟತೆಯಿಂದ ಮಾತನಾಡುತ್ತಾರೆ. ನಾಮಪತ್ರ ಸಲ್ಲಿಸುವ ವೇಳೆ 312.75 ಕೋಟಿ ರೂಪಾಯಿ ಆಸ್ತಿ ಘೋಷಿಸಿದ್ದಾರೆ.

ದಾವಣಗೆರೆಯಲ್ಲಿ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ನರ್ಸಿಂಗ್ ಕಾಲೇಜುಗಳನ್ನು ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಶಿವಶಂಕರಪ್ಪ ಅವರು ಚುನಾವಣಾ ಕಣದಲ್ಲಿ ತನಗೆ ಸ್ಪರ್ಧಿ ಇಲ್ಲ, ಚುನಾವಣೆಯಲ್ಲಿ ಗೆಲ್ಲುವುದು ಖಚಿತ ಎಂದಿದ್ದಾರೆ. ಇದರ ಜೊತೆಗೆ ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಂ ಸಮುದಾಯ ಮತ್ತು ಲಿಂಗಾಯತರು ನನ್ನೊಂದಿಗಿದ್ದಾರೆ ಎಂದಿದ್ದಾರೆ. ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲು ಶಿವಶಂಕರಪ್ಪ ಅವರ ಪುತ್ರ ಮಾಜಿ ಸಚಿವ ಎಸ್‌ಎಸ್‌ ಮಲ್ಲಿಕಾರ್ಜುನ್‌ಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ.

Karnataka Election 2023: Will Win By Highest Margin says congress leader Shamanur Shivashankarappa

ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸುವ ಕೆಲಸವನ್ನು ಕೂಡ ಪಕ್ಷವು ಅವರಿಗೆ ವಹಿಸಿತ್ತು ಎಂಬುದನ್ನು ಗಮನಿಸಿದರೇ ಅವರ ರಾಜಕೀಯ ಬುದ್ಧಿವಂತಿಕೆಯನ್ನು ಅಳೆಯಬಹುದು ಎಂದು ಪಕ್ಷದ ಮುಖಂಡರೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಬಿಜೆಪಿ ತೊರೆದಿದ್ದ ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್‌ಗೆ ಕರೆತರುವಲ್ಲಿ ಅವರ ಪಾತ್ರ ಮುಖ್ಯವಾದದ್ದು.

ಜಗದೀಶ್ ಶೆಟ್ಟರ್ ಅವರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಕಾಂಗ್ರೆಸ್‌ ಅಲರ್ಟ್ ಆಗಿತ್ತು. ಶೆಟ್ಟರ್ ಅವರನ್ನು ಕಾಂಗ್ರೆಸ್‌ ಕರೆತರುವ ಪ್ರಯತ್ನಗಳನ್ನು ಕಾಂಗ್ರೆಸ್‌ ಗುಟ್ಟಾಗಿ ನಡೆಸಿತ್ತು. ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಕುಟುಂಬದ ಮೂಲಕ ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್‌ ಸಂಪರ್ಕಿಸಿತ್ತು. ದಾವಣಗೆರೆ ದಕ್ಷಿಣ ಶಾಸಕರಾಗಿರುವ ಶಿವಶಂಕರಪ್ಪ ಅವರ ಹಿರಿಯ ಪುತ್ರ ಗಣೇಶ್‌ ಅವರಿಂದ ಜಗದೀಶ್ ಶೆಟ್ಟರ್‌ಗೆ ಕರೆ ಹೋಗಿತ್ತು ಎಂಬ ಮಾಹಿತಿಯಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+