ಗೋವಾದಿಂದ ಕರ್ನಾಟಕಕ್ಕೆ ನೂರಾರು ಬಸ್‌: ಬೋಗಸ್ ಮತದಾನದ ಉದ್ದೇಶವೇ? ಕಾಂಗ್ರೆಸ್‌ ಪ್ರಶ್ನೆ

ಬೆಂಗಳೂರು, ಮೇ 10: ಇಂದು ಕರ್ನಾಟಕ ವಿಧಾನಸಭೆ ಚುನಾವಣೆಗೆ ( Karnataka Assembly Elections 2023 ) ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಗೋವಾದಿಂದ ನೂರಾರು ಬಸ್‌ಗಳಲ್ಲಿ ಜನರನ್ನು ಕರ್ನಾಟಕಕ್ಕೆ ಕಳುಹಿಸುತ್ತಿವೆ ಎಂದು ಕಾಂಗ್ರೆಸ್‌ ನಾಯಕರು ಆರೋಪಿಸಿದ್ದಾರೆ. ಗೋವಾದಲ್ಲಿರುವ ಬಿಜೆಪಿ ಸರ್ಕಾರದ ಈ ಕ್ರಮದ ಬಗ್ಗೆ ಕಾಂಗ್ರೆಸ್‌ ಶಂಕೆ ವ್ಯಕ್ತಪಡಿಸಿದೆ.

ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ನಾಯಕ ಪವನ್‌ ಖೇರಾ, 'ಗೋವಾ ಬಿಜೆಪಿ ಸರ್ಕಾರ ಇಂದು ರಾತ್ರಿ ಉತ್ತರ ಕರ್ನಾಟಕಕ್ಕೆ ಕದಂಬ ಸಾರಿಗೆ ಸಂಸ್ಥೆಯ ಬಸ್‌ಗಳ ಮೂಲಕ ಗೋವಾದಿಂದ ಜನರನ್ನು ಏಕೆ ಕಳುಹಿಸುತ್ತಿದೆ? ಕಳೆದ ವಾರವೂ ಪ್ರಧಾನಿಯವರ ರ್ಯಾಲಿಗಾಗಿ ಗೋವಾದಿಂದ 100 ಕ್ಕೂ ಹೆಚ್ಚು ಬಸ್‌ಗಳಲ್ಲಿ ಜನರನ್ನು ಕರೆತರಲಾಗಿತ್ತು' ಎಂದು ಆರೋಪಿಸಿದ್ದಾರೆ.

Goa

ಈ ವಿಚಾರವಾಗಿ ಶಂಕೆ ವ್ಯಕ್ತಪಡಿಸಿರುವ ಕಾಂಗ್ರೆಸ್‌, 'ಗೋವಾ ಬಿಜೆಪಿ ಸರ್ಕಾರ ಇಂದು ರಾತ್ರಿ ಗೋವಾದಿಂದ ಕದಂಬ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉತ್ತರ ಕರ್ನಾಟಕಕ್ಕೆ ಜನರನ್ನು ಕಳುಹಿಸುತ್ತಿರುವುದು ಏಕೆ? ಅಕ್ರಮ ಹಣ ಸಾಗಿಸಲಾಗುತ್ತಿದೆಯೇ? ಬೋಗಸ್ ಮತದಾನವೇ ಉದ್ದೇಶವೇ?' ಎಂದು ಪ್ರಶ್ನಿಸಿದೆ.

ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಗೋವಾದಿಂದ ಕನ್ನಡಿಗರು ಕರ್ನಾಟಕಕ್ಕೆ ತೆರಳಲು ಸಜ್ಜಾಗಿರುವುದರಿಂದ ಬಸ್‌ಗಳಿಗೆ ಭಾರೀ ರಶ್ ಇದೆ ಎಂದು ಹೆರಾಲ್ಡ್‌ ಗೋವಾ ಪತ್ರಿಕೆ ನಿನ್ನೆ ವರದಿ ಮಾಡಿದೆ. ಗೋವಾದಲ್ಲಿ ನೆಲೆಸಿರುವ ಕರ್ನಾಟಕದ ಮತದಾರರಿಗೆ ಗೋವಾ ರಾಜ್ಯ ಸರ್ಕಾರ ವೇತನ ಸಹಿತ ರಜೆ ಘೋಷಿಸಿದೆ.

ಗೋವಾದಲ್ಲಿ ನೆಲೆಸಿರುವ ಕನ್ನಡಿಗರು ಬುಧವಾರದ ಚುನಾವಣೆಯ ಹಿನ್ನೆಲೆಯಲ್ಲಿ ಮಂಗಳವಾರ ಕರ್ನಾಟಕಕ್ಕೆ ಬಸ್ಸು ಹತ್ತಲು ಪಣಜಿ ಕೆಟಿಸಿ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾದು ಕುಳಿತಿದ್ದರು. ಬಸ್ಸುಗಳು ತುಂಬಿ ತುಳುಕುತ್ತಿದ್ದರಿಂದ ಹಲವರಿಗೆ ಬಸ್‌ಗಳನ್ನು ಹತ್ತಲು ಸಾಧ್ಯವಾಗಲಿಲ್ಲ.

ಸಾರ್ವಜನಿಕ ಸಾರಿಗೆಯ ಕೊರತೆಯಿಂದಾಗಿ ಗೋವಾದಲ್ಲಿ ಪ್ರಯಾಣಿಕರು ತೊಂದರೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಹೆಚ್ಚಿನ ಕದಂಬ ಸಾರಿಗೆ ಸಂಸ್ಥೆಯ (ಕೆಟಿಸಿ) ಬಸ್‌ಗಳು ರಸ್ತೆಯಿಂದ ಹೊರಗುಳಿದಿವೆ ಎಂದು ವರದಿಯಾಗಿದೆ.

ಕೆಟಿಸಿ ತನ್ನ ಡಜನ್‌ಗಟ್ಟಲೆ ಬಸ್‌ಗಳನ್ನು ನೆರೆಯ ಕರ್ನಾಟಕಕ್ಕೆ ಕಳುಹಿಸಿದೆ ಎಂದು ಗೋವಾದ ಸ್ಥಳೀಯ ದಿನಪತ್ರಿಕೆ ಒಹೆರಾಲ್ಡೊ ವರದಿ ಮಾಡಿದೆ.

ಪ್ರಧಾನಿ ಸಭೆಗೂ ಗೋವಾದಿಂದ ಬಸ್‌

ಅಂಕೋಲಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ರ್ಯಾಲಿಯ ಸ್ಥಳಕ್ಕೆ ಜನರನ್ನು ಸಾಗಿಸಲು ಸುಮಾರು 70 ಬಸ್‌ಗಳನ್ನು ಕಳುಹಿಸಲಾಗಿದೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ಅಂತರರಾಜ್ಯ ಮಾರ್ಗಗಳಲ್ಲಿ ಪ್ರಯಾಣಿಸುವ ಹಲವಾರು ಜನರು ಗೋವಾದ ಮಾರ್ಗೋ ಮತ್ತು ಇತರ ಬಸ್ ನಿಲ್ದಾಣಗಳಲ್ಲಿ ಗಂಟೆಗಟ್ಟಲೆ ಸಿಕ್ಕಿಹಾಕಿಕೊಂಡಿದ್ದರು. ಈ ರಾಜ್ಯವು ಸಾರ್ವಜನಿಕ ಸಾರಿಗೆಗಾಗಿ ಹೆಚ್ಚಿನ ಜನರು ಬಸ್‌ಗಳನ್ನು ಅವಲಂಬಿಸಿರುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+