Karnataka Election 2023, Rahul Gandhi Rally Live: 'ಸಮಾನತೆಯನ್ನು ಸಮಾಜಕ್ಕೆ ಸಾರಿದ ಬಸವಣ್ಣ' ರಾಹುಲ್ ಗಾಂಧಿ
ರಾಜ್ಯ ವಿಧಾನಸಭಾ ಚುನಾವಣೆ ಬೆನ್ನಲ್ಲೆ ಕರ್ನಾಟಕಕ್ಕೆ ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಕೂಡಲ ಸಂಗಮದಲ್ಲಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ವೇಳೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮೂಲಕ ಲಿಂಗಾಯತರನ್ನು ಸೆಳೆಯುವ ಪ್ರಯತ್ನ ಮಾಡಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರೊಂದಿಗೆ ಗದುಗಿನ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ, ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ, ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ವೇದಿಕೆಯನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಇಪ್ಪತ್ತಕ್ಕೂ ಹೆಚ್ಚು ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸಾಥ್ ನೀಡಿದ್ದಾರೆ. ಚುನಾವಣೆಗೆ ಕಾಂಗ್ರೆಸ್ಸಿನ ಪ್ರಮುಖ ಸ್ಟಾರ್ ಕ್ಯಾಂಪೇನರ್ ಆಗಿರುವ ರಾಹುಲ್ ಗಾಂಧಿ ಎರಡು ದಿನದ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ.
ಇದರಲ್ಲಿರುವ ಪ್ರಮುಖ ಕಾರ್ಯಕ್ರಮಗಳಲ್ಲೊಂದು ಕೂಡಲಸಂಗಮದಲ್ಲಿ ನಡೆಯುವ ಬಸವ ಜಯಂತಿ ಕಾರ್ಯಕ್ರಮ. ಸದ್ಯ ಕಾರ್ಯಕ್ರಮ ಮುಕ್ತಾಯಗೊಂಡಿದೆ.

ಲಿಂಗಾಯತರ ಸರ್ವಶ್ರೇಷ್ಠ ಗುರುಗಳಾದ ಬಸವಣ್ಣನವರ ಸಮಾಧಿ ಸ್ಥಳಕ್ಕೆ ಭೇಟಿ ನೀಡುವ ಮೂಲಕ ಕಾಂಗ್ರೆಸ್, ಬಿಜೆಪಿಗೆ ಕಠಿಣ ಸಂದೇಶ ರವಾನೆ ಮಾಡಲು ಯೋಜನೆ ರೂಪಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹಾಗಾಗಿ, ರಾಹುಲ್ ಗಾಂಧಿ ಎರಡು ದಿನದ ಈ ಪ್ರವಾಸ ಮಹತ್ವವನ್ನು ಪಡೆದುಕೊಂಡಿದೆ.
ರಾಹುಲ್ ಗಾಂಧಿಯ ಭಾಗವಹಿಸುತ್ತಿರುವ ಬಸವ ಜಯಂತಿ ಕಾರ್ಯಕ್ರಮದ ಪ್ರಮುಖಾಂಶ, ಅವರ ಭಾಷಣದ ಹೈಲೆಟ್ಸ್ ಅನ್ನು ಈ ಪೇಜಿನಲ್ಲಿ ಲೈವ್ ಆಗಿ ನೀಡುತ್ತಿದ್ದೇವೆ.
LIVE: Shri @RahulGandhi attends Basava Jayanthi celebrations at Basava Mandapa Center in Karnataka. https://t.co/H7HeQiBXRw
— Congress (@INCIndia) April 23, 2023
'ರಾಹುಲ್ ಗಾಂಧಿ ಹೋದ ಕಡೆ ಕಾಂಗ್ರೆಸ್ ಗೆಲ್ಲುತ್ತೆ' ನಲಪಾಡ್
'ನಾನು ಬಸವಣ್ಣ ಅವರ ಸಿದ್ಧಾಂತಗಳನ್ನು ಓದಿದ್ದೇನೆ' ರಾಹುಲ್ ಗಾಂಧಿ

'ಸಮಾನತೆಯನ್ನು ಸಮಾಜಕ್ಕೆ ಸಾರಿದ ಬಸವಣ್ಣ'
Today we are paying floral tribute to him (Guru Basavanna). But when he was alive, he would have been attacked. Some must have tried to scare him. But he didn't step back and leave the path of truth. This is why we paid floral tribute to him. We don't give floral tribute to those… pic.twitter.com/Wb0Sw8YJg3
— ANI (@ANI) April 23, 2023
'ಅಸಮಾನತೆಯ ಬಗ್ಗೆ ಪ್ರಶ್ನೆ ಮಾಡಿದ ಬಸವಣ್ಣ'
ಬಸವಣ್ಣ ಅವರಿಗೂ ಇತರರಿಗೂ ಇರುವ ವ್ಯತ್ಯಾಸ ಏನು? ರಾಹುಲ್ ಗಾಂಧಿ

'ಬಸವಣ್ಣನವರು ಸಮಾಜಕ್ಕೆ ಬೆಳಕನ್ನು ತಂದು ಕೊಟ್ಟರು' ರಾಹುಲ್ ಗಾಂಧಿ
ಸಮಾಜದಲ್ಲಿ ಅಸಮಾನತೆ ಹೋಗಲಾಡಿಸಲು ಜೀವನ ಮುಡುಪಾಗಿಟ್ಟ ಬಸವಣ್ಣ

ಬಸವ ಜಯಂತಿ: ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಪ್ರಸ್ತಾವಿಕ ನುಡಿ
ರಾಹುಲ್ ಗಾಂಧಿ ಅವರಿಗೆ ಕಾರ್ಯಕ್ರಮಕ್ಕೆ ಅದ್ದೂರಿ ಸ್ವಾಗತ
#WATCH | Congress leader Rahul Gandhi, Karnataka LoP and senior Congress leader Siddaramaiah attend the Basava Jayanti celebration at Basava Mantapa Centre, Bagalkote pic.twitter.com/1RHpqm4WTg
— ANI (@ANI) April 23, 2023
ಬಸವ ಜಯಂತಿ ಕಾರ್ಯಕ್ರಮ ಆರಂಭ

ಸಂಗಮದಲ್ಲಿ ಸಂಗಮನಾಥ ದರ್ಶನ ಪಡೆದ ರಾಹುಲ್ ಗಾಂಧಿ

ಬಸವ ಜಯಂತಿ ಕಾರ್ಯಕ್ರಮದಲ್ಲಿ ತೋಂಟದ ಸಿದ್ಧರಾಮ ಸ್ವಾಮೀಜಿ ಭಾಗಿ
ಸಂಜೆ ವಿಜಯಪುರದಲ್ಲಿ ರಾಹುಲ್ ಗಾಂಧಿ ಪಥಸಂಚಲನ
ಬಸವ ಜಯಂತಿಯ ಶುಭಾಶಯ ಕೋರಿ ಕಾಂಗ್ರೆಸ್ ಟ್ವೀಟ್
'ಅನುಭವ ಮಂಟಪ'ದ ಮೂಲಕ ವಚನ ಸಾಹಿತ್ಯಕ್ಕೆ ಚಳುವಳಿಯ ರೂಪ ಕೊಟ್ಟ,
— Karnataka Congress (@INCKarnataka) April 23, 2023
ಜಾತಿ ವ್ಯವಸ್ಥೆ, ಸಾಮಾಜಿಕ ತಾರತಮ್ಯ, ಶೋಷಣೆ, ಮೂಢನಂಬಿಕೆಯ ವಿರುದ್ಧ ಸಮರ ಸಾರಿದ,
ಮಹಾನ್ ಮಾನವತಾ ವಾದಿ, ಜಗಜ್ಯೋತಿ, ಕ್ರಾಂತಿಯೋಗಿ 'ಬಸವ ಜಯಂತಿ'ಯ ಶುಭಾಶಯಗಳು. pic.twitter.com/QsAuCIuWdT
ರಾಹುಲ್ ಗಾಂಧಿಗೆ ಹುಬ್ಬಳ್ಳಿಯಲ್ಲಿ ಸ್ವಾಗತ: ಮಾಜಿ ಸಿಎಂ ಜೊತೆಗೆ ರಾಗಾ ಮಾತುಕತೆ

ರಾಹುಲ್ ಗಾಂಧಿಗೆ ಹುಬ್ಬಳ್ಳಿಯಲ್ಲಿ ಸ್ವಾಗತ: ಮಾಜಿ ಸಿಎಂ ಜೊತೆಗೆ ರಾಗಾ ಮಾತುಕತೆ
'ಸಂಗಮಕ್ಕೆ ಭೇಟಿ' ಕಾಂಗ್ರೆಸ್ ನಾಯಕ ಟ್ವೀಟ್
Guru Basavanna ji’s life personified brotherhood & compassion. He worked tirelessly for justice & dignity for all. His teachings lie at the foundation of our democracy.
— Rahul Gandhi (@RahulGandhi) April 23, 2023
Humble tributes to him. Honoured to be visiting Kudala Sangama on this sacred occasion of Basava Jayanti. pic.twitter.com/YJgVhbPr8v
ಲಿಂಗಾಯತ ಮತಗಳ ಮೇಲೆ ಕಾಂಗ್ರೆಸ್ ಕಣ್ಣು













Click it and Unblock the Notifications