ಇಂದೇ ಕಾಂಗ್ರೆಸ್‌ ಎರಡನೇ ಪಟ್ಟಿ ಪ್ರಕಟ; 49 ಜನರಲ್ಲಿ ಯಾರಿಗೆ ಒಲಿಯಲಿದೆ ಅದೃಷ್ಟ: ಇಲ್ಲಿದೆ ಸಂಭಾವ್ಯ ಪಟ್ಟಿ

ಬೆಂಗಳೂರು,ಏಪ್ರಿಲ್4:‌ ರಾಜ್ಯ ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಕಾಂಗ್ರೆಸ್‌ ಈಗಾಗಲೇ 124 ಸ್ಥಾನಗಳಿಗೆ ಅಭ್ಯರ್ಥಿಗಳನ್ನ ಘೋಷಿಸಿದೆ. ಇತ್ತ ಕಾಂಗ್ರೆಸ್‌ ಗೆ 100 ಅಭ್ಯರ್ಥಿಗಳ ಘೋಷಣೆಯೇ ದೊಡ್ಡ ತಲೆನೋವಾಗಿದೆ.

ಈ ಕುರಿತು ಇಂದು (ಮಂಗಳವಾರ) ದೆಹಲಿಯಲ್ಲಿ ನಡೆದ ಚುನಾವಣಾ ಸಮಿತಿ ಸಭೆಯಲ್ಲಿ 49 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ. ದೆಹಲಿಯಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ನಾಯಕರು ಸಿಇಸಿ ಸಭೆಯಲ್ಲಿ ಎರಡನೇ ಅಭ್ಯರ್ಥಿಗಳ ಕುರಿತು ಚರ್ಚೆ ನಡೆಸಿದ್ದು, ಇದೀಗ 49 ಅಭ್ಯರ್ಥಿಗಳನ್ನ ಹೈಕಮಾಂಡ್‌ ಫೈನಲ್ ಮಾಡಿದೆ. ಇಂದು ರಾತ್ರಿಯೊಳಗೆ ಕಾಂಗ್ರೆಸ್‌ನ 49 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಕಾಂಗ್ರೆಸ್‌ ಮೂಲಗಳಿಂದ ತಿಳಿದು ಬಂದಿದೆ.

Karnataka Election 2023 : Congress To Release The Second List Of 49 Candidates Today

100 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಬಾಕಿ ಉಳಿದಿದ್ದು, ಇದೀಗ 49 ಅಭ್ಯರ್ಥಿಗಳನ್ನ ಎರಡನೇ ಪಟ್ಟಿಯಲ್ಲಿ ಘೋಷಿಸಲಿದ್ದು, ಇನ್ನೂ ಉಳಿದ ಕ್ಷೇತ್ರ ಅಭ್ಯರ್ಥಿ ಕುರಿತು ಮತ್ತೊಂದು ಸಭೆ ನಡೆಸಲು ಹೈಕಮಾಂಡ್‌ ನಾಯಕರು ಚಿಂತನೆ ನಡೆಸಿದ್ದಾರೆ. ಈಗಾಗಲೇ ಅನ್ಯ ಪಕ್ಷಗಳ ನಾಯಕರಿಗೆ ಗಾಳ ಹಾಕಿರುವ ರಾಜ್ಯ ಕಾಂಗ್ರೆಸ್‌ ನಾಯಕರು ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ದಾರೆ.

ಇನ್ನೂ ಈ ಕುರಿತು ದೆಹಲಿಯಲ್ಲಿ ಸುರ್ಜೆವಾಲ ಮಾತನಾಡಿ, ನಾವು ನೀತಿ ಸಂಹಿತೆ ಜಾರಿ ಆಗುವ ಮುನ್ನವೇ ಮೊದಲ ಲಿಸ್ಟ್ ಬಿಡುಗಡೆ ಮಾಡಿದ್ದೇವೆ. ಇಂದು ನಡೆದ ಸಭೆಯಲ್ಲಿ ಹಲವು ಕ್ಷೇತ್ರಗಳ ಬಗ್ಗೆ ಮಾತುಕತೆ ಆಗಿದೆ. ಇಂದು ಕಾಂಗ್ರೆಸ್‌ ಎರಡನೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

Karnataka Election 2023 : Congress To Release The Second List Of 49 Candidates Today

40% ಸರ್ಕಾರದ ವಿರುದ್ಧ ನಮ್ಮ ಹೋರಾಟ. ಬಸವರಾಜ ಬೊಮ್ಮಾಯಿ ಸರ್ಕಾರ ಕಡು ಭ್ರಷ್ಟ, ಬಿಜೆಪಿ ಮುಳುಗುತ್ತಿರುವ ಹಡಗು. ನರೇಂದ್ರ ಮೋದಿ ಅಥವಾ ಬಸವರಾಜ ಬೊಮ್ಮಾಯಿ ಅವರಿಂದ ಅದನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ಎರಡನೇ ಪಟ್ಟಿ ಸಂಭಾವ್ಯ ಅಭ್ಯರ್ಥಿಗಳು

ಕ್ಷೇತ್ರಗಳು ಸಂಭಾವ್ಯ ಅಭ್ಯರ್ಥಿಗಳು
ನಿಪ್ಪಾಣಿ ಕಾಕಾ ಸಾಹೇಬ್ ಪಾಟೀಲ್
ಅಥಣಿ ಗಜಾನನ ಮಂಗಸೂಳಿ
ಅರಭಾವಿ ಅರವಿಂದ ದಳವಾಯಿ
ಗೋಕಾಕ್ ಅಶೋಕ್ ಪೂಜಾರಿ
ಬೆಳಗಾವಿ ಉತ್ತರ ಫಿರೋಜ್ ಸೇಠ
ಕಿತ್ತೂರು ಡಿ.ಬಿ. ಇಮಾನ್ದಾ‌
ಸವದತ್ತಿ ಉದಯ್ ಕುಮಾರ್
ಮುದೋಳ್ ಆರ್ ಬಿ ತಿಮ್ಮಾಪುರ
ಬೀಳಗಿ ಜಿ.ಟಿ ಪಾಟೀಲ್
ದೇವರಹಿಪ್ಪರಗಿ ಎಸ್.ಆರ್. ಪಾಟೀಲ್
ಸಿಂದಗಿ ಅಶೋಕ್ ಮನಗೂಳಿ
ಗುರುಮಠಕಲ್ ಬಾಬುರಾವ್ ಚಿಂಚನಸೂರ್
ಕಲ್ಬುರ್ಗಿ ಗ್ರಾಮೀಣ ವಿಜಯ್ ಕುಮಾರ್
ಔರಾದ್ ಭೀಮರಾವ್ ಸಿಂಧೆ
ಮಾನ್ವಿ ಹಂಪಯ್ಯ ನಾಯಕ್
ಸಿಂಧನೂರು ಹಂಪನಗೌಡ ಬಾದರ್ಲಿ
ಗಂಗಾವತಿ: ಇಕ್ಬಾಲ್ ಅನ್ಸಾರಿ
ನರಗುಂದ ಬಿ.ಆರ್ ಯಾವಗಲ್
ಶಿರಹಟ್ಟಿ ರಾಮಕೃಷ್ಣ ದೊಡ್ಡಮನಿ
ನವಲಗುಂದ ಕೋನರೆಡ್ಡಿ
ಕಲಘಟಗಿ ಸಂತೋಷ ಲಾಡ್
ಶಿರಸಿ ಭೀಮಣ್ಣ ನಾಯ್
ಹರಿಹರ ರಾಮಪ್ಪ
ಕಾರ್ಕಳ ಉದಯ್ ಕುಮಾರ್ ಶೆಟ್ಟಿ
ಮೂಡಗೆರೆ ನಯನಾ ಮೋಟಮ್
ಗುಬ್ಬಿ ಶ್ರೀನಿವಾಸ್
ಯಲಹಂಕ ಕೇಶವ್ ರಾಜಣ್ಣ
ಮಹಾಲಕ್ಷ್ಮೀ ಲೇಔಟ್ ಕೇಶವಮೂರ್ತಿ
ಸಿವಿ ರಾಮನ್ ನಗರ ಸಂಪತ್ ರಾಜ್
ಪದ್ಮನಾಭ ನಗರ ಪಿಜಿಆರ್ ಸಿಂದ್ಯಾ
ಬೊಮ್ಮನಹಳ್ಳಿ ಉಮಾಪತಿಗೌಡ
ಅರಸೀಕೆರೆ ಶಿವಲಿಂಗೇಗೌಡ
ಮೊಳಕಾಲ್ಕೂರು ಎನ್.ವೈ ಗೋಪಾಲಕೃಷ್ಣ
ತರೀಕೆರೆ ಶ್ರೀನಿವಾಸ್
ಯಶವಂತಪುರ ತಿಮ್ಮರಾಯಪ್ಪ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+