ರಾಯಚೂರು: ಕೇಸರಿ ಪಡೆಯಲ್ಲಿ ಟಿಕೆಟ್‌ಗಾಗಿ ಬಿಜೆಪಿ vs ಬಿಜೆಪಿ: ಶಾಸಕರ ವೈಫಲ್ಯ ಎಂದು ಕಾಂಗ್ರೆಸ್ ಟೀಕೆ

ಬೆಂಗಳೂರು, ಏಪ್ರಿಲ್ 05: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಮುಂದಿನ ತಿಂಗಳ ಮೇ 10 ರಂದು ನಡೆಯಲಿದೆ. ರಾಜ್ಯ ರಾಜಕಾರಣದಲ್ಲಿ ಒಂದು ಕಡೆ ಪಕ್ಷಾಂತ ಪರ್ವ ಶುರುವಾದರೆ ಮತ್ತೊಂದು ಕಡೆ ಟಿಕೆಟ್ ಗೊಂದಲ ಶುರುವಾಗಿದೆ. ಇದಕ್ಕೆ ಆಡಳಿತಾರೂಢ ಬಿಜೆಪಿಯೇನು ಹೊರತಾಗಿಲ್ಲ.

ಬಿಜೆಪಿಯಲ್ಲಿ ಟಿಕೆಟ್ ನೀಡುವ ವಿಚಾರವಾಗಿ ಶಾಸಕರ ವಿರುದ್ಧವಾಗಿ ಸ್ವಪಕ್ಷದ ಮುಖಂಡರೇ ಧ್ವನಿ ಎತ್ತಿರುವುದು ಹಲವು ಚರ್ಚೆಗಳಿಗೆ ಕಾರಣವಾಗಿದೆ. ಅಷ್ಟೇ ಅಲ್ಲದೇ ಈ ಟಿಕೆಟ್ ವಿಚಾರವು ವಿಪಕ್ಷ ಕಾಂಗ್ರೆಸ್‌ಗೆ ಚುನಾವಣೆ ಅಸ್ತ್ರವಾಗಿ ಸಿಕ್ಕಿದ್ದು, ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿವೆ.

Karnataka Election 2023: BJP Party Workers Rebels, Not to Give Tickets To Corrupt Candidates

ಹೌದು, ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ ಜಿಲ್ಲೆಯ ಶಾಸಕ ವೆಂಕಟರೆಡ್ಡಿ ಮುದ್ನಾಳ್ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡದಂತೆ ಸ್ವಪಕ್ಷದ ಮುಖಂಡರು, ಕಾರ್ಯಕರ್ತರೇ ದೂರು ಸಲ್ಲಿಸಿದ್ದಾರೆ. ಇದು ಮುನ್ನೆಲೆಗೆ ಬರುತ್ತಿದ್ದಂತೆ ಕಾಂಗ್ರೆಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.

ಈ ಕುರಿತು ಬುಧವಾರಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಆಡಳಿತಾರೂಢ ಬಿಜೆಪಿಯ ಬಹುತೇಕ ಶಾಸಕರಿಗೆ ಟಿಕೆಟ್ ನೀಡದಂತೆ ಬಿಜೆಪಿ ಕಾರ್ಯಕರ್ತರೇ ಬಂಡಾಯವೆದ್ದಿದ್ದಾರೆ. ಇದು ರಾಜ್ಯ ಬಿಜೆಪಿ ಸರ್ಕಾರದ ದುರಾಡಳಿತದ ಪರಿಣಾಮವೋ ಅಥವಾ ಶಾಸಕರ ವೈಫಲ್ಯದ ಕಾರಣವೋ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಅಲ್ಲದೇ ಬಿಜೆಪಿ ಕರ್ನಾಟಕಕ್ಕೆ ಟ್ಯಾಗ್ ಮಾಡಿ ಜೊತೆಗೆ ಬಿಜೆಪಿ ವರ್ಸಸ್‌ ಬಿಜೆಪಿ (#BJPvsBJP) ಎಂದು ಹ್ಯಾಷ್‌ಟ್ಯಾಗ್ ಟ್ವೀಟ್ ಪೋಸ್ಟ್‌ವೊಂದನ್ನು ಹಂಚಿಕೊಂಡಿದೆ.

ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮಿಷನ್ ಭ್ರಷ್ಟಾಚಾರದ ಬಿಜೆಪಿಯ ಅತೀ ಹೀನಾಯ ಆಡಳಿತ ನೀಡಿದೆ ಎನ್ನಲು ಬಿಜೆಪಿ ಕಾರ್ಯಕರ್ತರ ಹೀಗೆ ಬಂಡಾಯ ಎಂದಿದ್ದರುವುದೇ ಸಾಕ್ಷಿಯಾಗಿದೆ. ಇದೆಲ್ಲವನ್ನು ನೋಡಿದರೆ ಬಿಜೆಪಿ ವರ್ಸಸ್ ಬಿಜೆಪಿ ಎಂಬಂತಾಗಿರುವುದು ಗೊತ್ತಾಗುತ್ತದೆ ಎಂದು ಕಾಂಗ್ರೆಸ್ ಬಿಜೆಪಿಯ ಕಾಲೆಳೆದಿದೆ.

Karnataka Election 2023: BJP Party Workers Rebels, Not to Give Tickets To Corrupt Candidates

ಯಾದಗಿರಿಯಲ್ಲಿ ಆಗಿದ್ದೇನು?

ಸದ್ಯ ಬಿಜೆಪಿಯಲ್ಲಿ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದಿಂದ ಕಣಕ್ಕಿಳಿಯುವವರ ಹೆಸರುಗಳ ಪಟ್ಟಿಯನ್ನು ಬಿಡುಗಡೆ ಮಾಡುವುದು ಬಾಕಿ ಇದೆ. ಈ ಮಧ್ಯೆ ಯಾದಗಿರಿ ವಿಧಾನಸಭಾ ಕ್ಷೇತ್ರ ಬಿಜೆಪಿಯ ಹಾಲಿ ಶಾಸಕ ವೆಂಕಟರೆಡ್ಡಿ ಮುದ್ನಾಳ್ ಅವರು ವಿರುದ್ಧ ಜಿಲ್ಲಾ ಮಟ್ಟದ ಬಿಜೆಪಿ ಮುಖಂಡರು, ಕಾರ್ಯಕರ್ತರೆ ಧ್ವನಿಎತ್ತಿದ್ದಾರೆ.

ಚುನಾವಣೆ ಸಂಬಂದ ಯಾದಗಿರಿ ಕ್ಷೇತ್ರದ ಟಿಕೆಟ್ ಅನ್ನು ಶಾಸಕ ಮುದ್ನಾಳ್ ಅವರಿ ನೀಡದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಯಾದಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಶರಣ ಭೂಪಾಲರೆಡ್ಡಿ ನೇತೃತ್ವದಲ್ಲಿ ಕೆಲವು ಕಾರ್ಯಕರ್ತ ದೂರು ನೀಡಿದ್ದಾರೆ. ಈ ಮೂಲಕ ಯಾದಗಿರಿಯ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ, ಭಿನ್ನಮತ ತಾಂಡವವಾಡುತ್ತಿರುವುದು ಬಹಿರಂಗೊಂಡಿದೆ. ಇದನ್ನೆ ಕಾಂಗ್ರೆಸ್‌ ಟೀಕಾಸ್ತ್ರವನ್ನಾಗಿ ಮಾಡಿಕೊಂಡಿವೆ.

ಹಾಲಿ ಶಾಸಕರಿಗೆ ಟಿಕೆಟ್ ಬೇಡ ಏಕೆ?

ಯಾದಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಶರಣ ಭೂಪಾಲರೆಡ್ಡಿ ಅವರು ನೀಡಿರುವ ದೂರಿನಲ್ಲಿ ಕ್ಷೇತ್ರದಲ್ಲಿ ಆಡಳಿತ ವಿರೋಧ ಅಲೆ ಇರುವುದು ಕಂಡು ಬಂದಿದೆ. ಹಾಲಿ ಶಾಸಕ ಮುದ್ನಾಳ್ ಅವರು ತಾವೇ ದೊಡ್ಡವರು ಎಂಬಂತೆ ವರ್ತಿಸುತ್ತಾರೆ. ಮುಖ್ಯವಾಗಿ 2018ರ ವಿಧಾನಸಭಾ ಚುನಾವಣೆಯಲ್ಲಿ ಅವರು ಚುನಾಯಿತರಾದಾಗಿನಿಂದ ಈವರೆಗಿನ ಐದು ವರ್ಷಗಳಲ್ಲಿ ಸ್ಥಳಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ.

ಶಾಸಕರ ಆಡಳಿತದಲ್ಲಿ ಅವರ ಕುಟುಂಬಸ್ಥರೇ ಶಾಮೀಲಾಗಿದ್ದಾರೆ ಎಂದು ಜಿಲ್ಲಾಧ್ಯಕ್ಷರು ನೇರವಾಗಿ ಆರೋಪ ಮಾಡಿದ್ದಾರೆ. ಈ ಎಲ್ಲ ಕಾರಣದಿಂದ ಅವರಿಗೆ ಟಿಕೆಟ್ ನೀಡದಂತೆ ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+