Get Updates
Get notified of breaking news, exclusive insights, and must-see stories!

ಕರ್ನಾಟಕ ಅಸೆಂಬ್ಲಿ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ದಿನಾಂಕ ಫಿಕ್ಸ್: ಸಿಎಂ ತಿಳಿಸಿದ ಮಾಹಿತಿ ಇದು

ಬೆಂಗಳೂರು, ಏಪ್ರಿಲ್ 04: ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಬಿಜೆಪಿ ಪಟ್ಟಿ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ. ರಾಜ್ಯ ಸಮಿತಿ ಸಭೆಗೆ ಆಹ್ವಾನಿಸಿದ್ದು, ಅದು ಮುಗಿದ ತಕ್ಷಣವೇ ಪಟ್ಟಿ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ದಿನಾಂಕವನ್ನು ಖಚಿತಪಡಿಸಿದ್ದಾರೆ.

Karnataka Election 2023: BJP Candidates List Will Be Releasing On 8th April: CM Basavaraj Bommai

ವಾಸ್ತವಾಂಶ ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕಣಕ್ಕೆ ಇಳಿಸಲಿದ್ದೇವೆ. ಅಲ್ಲದೇ ಇಂದು (ಮಂಗಳವಾರ) ರಾಜ್ಯ ಸಮಿತಿಯ ಸಭೆ ಕರೆದಿದ್ದೇವೆ. ಎರಡು ದಿನಗಳ ಕಾಲ ನಡೆಯಲಿರುವ ಈ ಸಭೆ ಬಳಿಕ ಕೇಂದ್ರಕ್ಕೆ ಅಭ್ಯರ್ಥಿಗಳ ಪಟ್ಟಿ ಕಳುಹಿಸಲಾಗುವುದು. ನಂತರ ಏಪ್ರೀಲ್ 8ನೇ ಕೇಂದ್ರದ ವರಿಷ್ಠರ ಸಮ್ಮುಖದಲ್ಲಿ ಪಟ್ಟಿ ಬಗ್ಗೆ ಚರ್ಚೆಯಾಗಿ ಬಿಡುಗಡೆಗೊಳ್ಳಲಿದೆ ಎಂದು ಅವರು ಹೇಳಿದರು.

ಫಲಿತಾಂಶದ ನಂತರ ಜನರ ಅಭಿಮತ ತಿಳಿಯಲಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಖಾಸಗಿ ಚಾನಲ್ ಸಂದರ್ಶನವೊಂದರಲ್ಲಿ ಮತ್ತೆ ಸಿಎಂ ಆಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿಯವರು, ಸಿದ್ದರಾಮಯ್ಯನವರೇನೋ ಮತ್ತೆ ಸಿಎಂ ಆಗಲು ಬಯಸಿದ್ದಾರೆ. ಆದರೆ ಜನರ ನಾಡಿ ಮಿಡಿತ ಏನಿದೆಯೋ ಯಾರಿಗೆ ಗೊತ್ತು..? ಫಲಿತಾಂಶ ಬಂದ ಮೇಲೆ ಜನರ ಅಭಿಮತ ತಿಳಿಯಲಿದೆ ಏನಿದೆ ಎಂಬುದು ತಿಳಿಯಲಿದೆ.

ಜನರ ಬೆಂಬಲ ಇದ್ದರೆ ಮಾತ್ರ ಒಬ್ಬರ ನಾಯಕ ಶಾಸಕನಾಗಲು ಸಾಧ್ಯ ಎಂದರಲ್ಲದೇ ಸಿದ್ದರಾಮಯ್ಯ ಅವರು ಹೊಸದೇನು ಹೇಳಿಲ್ಲ ಎಂದರು. ಕಳೆದ ಮೂರು ನಾಲ್ಕು ದಿನಗಳ ಬೆಳವಣಿಗೆ ಗಮನಿಸಿದರೆ ಬಿಜೆಪಿಗೆ ಸಂಪೂರ್ಣ ಬಹುಮತ ದೊರೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Karnataka Election 2023: BJP Candidates List Will Be Releasing On 8th April: CM Basavaraj Bommai

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೆಲವು ಕ್ಷೇತ್ರದಲ್ಲಿ ಆಶ್ಚರ್ಯಕರ ಫಲಿತಾಂಶ ಬರಲಿದೆ. ಕಾರ್ಯಕರ್ತರು ಮತ್ತು ನಾಯಕರಿಗೆ ಆತ್ಮವಿಶ್ವಾಸವಿದೆ ಎಂದು ಭವಿಷ್ಯ ನುಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಆರಿಸಿ ಬರಲ್ಲ: ಸಿಎಂ

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಪ್ರಸ್ತಕ ಸಾಲಿನ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಬರದಿರುವ/ಇಲ್ಲದ ಸೀಟಿಗೆ ಗುದ್ದಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕಾಗಿ ಮತ್ತು ಮುಖ್ಯಮಂತ್ರಿ ಸ್ಥಾನದ ಗದ್ದುಗೆ ಏರಲು ಹೊರಾಡುತ್ತಿದೆ. ಜನರಿಗೆ ಕರ್ನಾಟಕಕ್ಕೆ ಒಳ್ಳೆಯದು ಮಾಡಬೇಕು ಎಂಬ ಯೋಚನೆ ಅವರಲ್ಲಿ ಕಾಣುತ್ತಿಲ್ಲ ಎಂದು ಅವರು ಟೀಕಿಸಿದರು.

ಸಿದ್ದರಾಯಮಯ್ಯನವರ ಸಿಎಂ ಸ್ಥಾನದ ಹೇಳಿಕೆ ವಿಚಾರವು ಅವರ ಕಾಂಗ್ರೆಸ್‌ ಪಕ್ಷದಲ್ಲಿನ ಆಂತರಿಕವಾಗಿ ನಡೆಯುತ್ತಿರುವ ವಿದ್ಯಮಾನಗಳ ಪ್ರತಿಬಿಂಬ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೋದ ಕಡೆಯಲ್ಲಿ ನಾನೇ ಮುಂದಿನ ಮುಖ್ಯಮಂತ್ರಿ ಆಶೀರ್ವಾದ ಮಾಡಿ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಸಿದ್ದರಾಮಯ್ಯ ಅವರು ಇತ್ತ ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಬೊಮ್ಮಾಯಿ ಗೇಲಿ ಮಾಡಿದರು.

ರಾಜ್ಯದಲ್ಲಿ ಮುಖ್ಯಮಂತ್ರಿಗಳ ಸ್ಥಾನಕ್ಕೇರಿಸುವುದು ಜನರು, ಅವರ ಮನಸ್ಸಿನಲ್ಲೇ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರಿಲ್ಲ. ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರೂ ಮುಖ್ಯಮಂತ್ರಿ ಸ್ಥಾನದ ಕನಸು ಕಾಣುತ್ತಿದ್ದಾರೆ. ಆ ಕನಸು ನನಸಾಗುವುದಿಲ್ಲ. ಅವರ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂದು ಪುನರುಚ್ಚರಿಸಿದರು.

ಬಿಜೆಪಿಯಿಂದ ಬೇರೆಡೆ ಪಕ್ಷಾಂತರ: ಪರಿಣಾಮ ಬೀರಲ್ಲ

ಹಿರಿಯ ಮುಖಂಡ ಮಾಜಿ ಶಾಸಕ ಮತ್ತು ಹಾಲಿ ವಿಧಾನ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ಬಂಡಾಯ ಮತ್ತು ರಾಜೀನಾಮೆ ಕುರಿತು ಮಾತನಾಡಿದ್ದಾರೆ. ಈ ಕುರಿತು ಉತ್ತರಿಸಿದ ಮುಖ್ಯಮಂತ್ರಿಗಳು ಪಕ್ಷದಲ್ಲೀಗ 125 ಶಾಸಕರು ಇದ್ದಾರೆ. ಅದರಲ್ಲಿ ಕೆಲವು ಕಡೆ ಇಬ್ಬರು ಆಕಾಂಕ್ಷಿಗಳು ಇದ್ದಾರೆ. ಅಲ್ಲಿ ಸ್ಥಾನ ದೊರೆಯುವುದಿಲ್ಲ ಎಂಬ ಕಾರಣಕ್ಕೆ ಪಕ್ಷ ಬಿಟ್ಟು ಕೆಲವರು ಹೋಗಿದ್ದಾರೆ ಅಷ್ಟೆ.

ಈ ರೀತಿಯ ಪಕ್ಷಾಂತರದಿಂದ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ. ಈಗ ಒಂದಿಬ್ಬರು ಹೋಗಿದ್ದು, ಬಿಜೆಪಿಯಿಂದ ಮತ್ತೆ ಯಾರು ಪಕ್ಷಾಂತರ ಮಾಡುವುದಿಲ್ಲ. ಕೆಪಿಸಿಸಿ ಅಧ್ಯಕ್ಷರು ಡಿ.ಕೆ.ಶಿವಕುಮಾರ್ ಸುಮ್ಮನೆ ನಮ್ಮ ನಾಯಕರ ಹೆಸರುಗಳನ್ನು ತೇಲಿ ಬಿಡುತ್ತಿದ್ದಾರೆ ಅಷ್ಟೆ ಎಂದು ಸ್ಪಷ್ಟನೆ ನೀಡಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+