Mallikarjun Kharge: ರಾಹುಲ್ ಗಾಂಧಿ, ಸೋನಿಯಾ ಗಾಂಧಿಗೆ ಸ್ವಂತ ಮನೆ ಇಲ್ಲ; ಬಿಜೆಪಿ ವಿರುದ್ದ ಮಲ್ಲಿಕಾರ್ಜುನ್ ಖರ್ಗೆ ಕಿಡಿ
ಬೆಂಗಳೂರು,ಏಪ್ರಿಲ್29: ರಾಹುಲ್ ಗಾಂಧಿ ಅವರಿಗೆ ಮಾನಹಾನಿ ಪ್ರಕರಣದಲ್ಲಿ ಗರಿಷ್ಠ ಶಿಕ್ಷೆ ನೀಡಿ 24 ತಾಸಿನಲ್ಲಿ ಅನರ್ಹ ಮಾಡಿ ಮನೆ ಖಾಲಿ ಮಾಡಲು ನೊಟೀಸ್ ನೀಡಿದರು. ಅವರು ಮನೆ ಖಾಲಿ ಮಾಡಿದರು.ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಗೆ ಸ್ವಂತ ಮನೆ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಹೇಳಿದರು.
ಈ ಕುರಿತು ಬಸವನಗುಡಿ ಅಭ್ಯರ್ಥಿ ವೆಂಕಟೇಶ್ ಅವರ ಪರವಾಗಿ ಪ್ರಚಾರ ನಡೆಸಿ ಮಾತನಾಡಿದ ಅವರು, ಬಿಜೆಪಿಯವರು ಅರಿಗೆ ಬೇಕಾದವರಿಗೆ ವರ್ಷಾನುಗಟ್ಟಲೆ ಅವಕಾಶ ನೀಡಿದ್ದಾರೆ. ಒಬ್ಬರಿಗೆ ಒಂದೊಂದು ಕಾನೂನು ಬಿಜೆಪಿಯ ಆಡಳಿತ. ಬಿಜೆಪಿ ರಾಹುಲ್ ಗಾಂಧಿ ಅವರನ್ನು ಅನರ್ಹ ಮಾಡಿದೆ. ಆದರೆ ಗುಜರಾತಿನಲ್ಲಿ ನಾರಾಯಣ ಭಾಯ್ ಕಚಾಡಿಯಾ ಎಂಬ ಸಂಸದ ದಲಿತ ವೈದ್ಯನಿಗೆ ಕಪಾಳಮೋಕ್ಷ ಮಾಡಿದ ಪ್ರಕರಣದಲ್ಲಿ 3.10 ವರ್ಷ ಶಿಕ್ಷೆ ಆಗಿದ್ದರೂ ಆತನನ್ನು ಯಾವುದೇ ರೀತಿಯ ಅನರ್ಹ ಮಾಡಲಿಲ್ಲ ಎಂದು ಬಿಜೆಪಿ ವಿರುದ್ದ ಕಿಡಿಕಾರಿದರು.

ರಾಜ್ಯ ಸರ್ಕಾರದ ಬಗ್ಗೆ ಎಲ್ಲೆ ಕೇಳಿದರೂ 40% ಕಮಿಷನ್ ಸರ್ಕಾರ ಎಂದು ಹೇಳುತ್ತಾರೆ. ಎಲ್ಲಾ ಕೆಲಸಗಳಿಗೂ ಹಣ ಪಡೆದೇ ಮಾಡುತ್ತಾರೆ. ಹಣವಿಲ್ಲದೆ ಯಾವ ಕೆಲಸವೂ ಆಗುವುದಿಲ್ಲ. ಗುತ್ತಿಗೆದಾರರ ಸಂಘ ಈ ಸರ್ಕಾರದಲ್ಲಿ 40% ಕಮಿಷನ್ ಪಡೆಯುತ್ತಿದ್ದು, ಇದರಿಂದ ಗುಣಮಟ್ಟದ ಕೆಲಸ ಆಗುವುದಿಲ್ಲ. ಇದನ್ನು ತನಿಖೆ ಮಾಡಿ ನಿಲ್ಲಿಸಿ ಎಂದು ಪ್ರಧಾನಿಗೆ ಪತ್ರ ಬರೆದರು. ಆದರೆ ಈ ಬಗ್ಗೆ ಪ್ರಧಾನಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಮೋದಿ ನಾ ಖಾವೂಂಗಾ ನಾ ಖಾನೆ ದೂಂಗ ಎನ್ನುತ್ತಾರೆ. ಆದರೆ ಮೋದಿ ಅವರ ಪಕ್ಕದಲ್ಲಿ ಭ್ರಷ್ಟರು ಇದ್ದಾರೆ. ಇಡಿ, ಸಿಬಿಐ, ಐಟಿ ಎಲ್ಲಿ ಹೋಗಿದೆ? ಎಂದು ಪ್ರಶ್ನಿಸಿದರು.
ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಪುತ್ರ 8 ಕೋಟಿ ಲಂಚ ಹಣ ಪಡೆದು ಸಿಕ್ಕಿಬಿದ್ದಿದ್ದಾರೆ. ಇವರನ್ನು ಯಾಕೆ ಇಡಿ ಅವರು ಜೈಲಿಗೆ ಹಾಕಿಲ್ಲ ಯಾಕೆ? ಬಿಜೆಪಿ ನಾಯಕರು ಬಂದು ಡಬಲ್ ಇಂಜಿನ್ ಸರ್ಕಾರ ಅಭಿವೃದ್ಧಿ ಮಾಡುತ್ತೇವೆ ಎಂದಿದ್ದಾರೆ. ಕರ್ನಾಟಕ ರಾಜ್ಯಕ್ಕೆ ಬಿಜೆಪಿ ಕೊಡುಗೆ ಏನು? ಕಾಂಗ್ರೆಸ್ ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ಸಾರ್ವಜನಿಕ ಉದ್ದಿಮೆ ಆರಂಭಿಸಿತು. ಕಾಂಗ್ರೆಸ್ ಪಕ್ಷದ ಆಡಳಿತದಿಂದ ಬೆಂಗಳೂರು ಸಿಲಿಕಾನ್ ವ್ಯಾಲಿ ಆಗಿ ವಿಶ್ವದಲ್ಲೇ ಹೆಸರು ಮಾಡಿತು. ಆದರೂ ನೀವು ಏನು ಮಾಡಿದ್ದೀರಿ ಎಂದು ಕೇಳುತ್ತಾರೆ.
ನಾವು ಏನೂ ಮಾಡದೇ ದೇಶದಲ್ಲಿ ರಾಜ್ಯದಲ್ಲಿ ಇಷ್ಟು ಇಂಜಿನಿಯರ್, ಡಾಕ್ಟರ್ ಬರುತ್ತಿರಲಿಲ್ಲ. ಬಿಜೆಪಿ ಬಂದ ಮೇಲೆ ಸಾರ್ವಜನಿಕ ಉದ್ದಿಮೆ ಮುಚ್ಚಿದ್ದಾರೆ ಮಾರುತ್ತಿದ್ದಾರೆ. ರಾಜ್ಯದಲ್ಲಿ 2.59 ಲಕ್ಷ ಸರ್ಕಾರಿ ಹುದ್ದೆ ಗಳು ಖಾಲಿ ಇವೆ. ಆದರೂ ಯಾಕೆ ಭರ್ತಿ ಮಾಡುತ್ತಿಲ್ಲ. ಇದೆಲ್ಲಾ ಮಾಡಿದರೆ ಬಡವರಿಗೆ ಅನುಕೂಲವಾಗುತ್ತದೆ ಎಂದು ಮಾಡುತ್ತಿಲ್ಲ. ನಿರುದ್ಯೋಗ ಸಮಸ್ಯೆ ಗರಿಷ್ಠ ಮಟ್ಟಕ್ಕೆ ಏರಿದೆ. ಪ್ರತಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ. ಎಲ್ಲಾ ವಸ್ತುಗಳ ಮೇಲೆ ಜಿಎಸ್ ಟಿ ಹಾಕಿದ್ದಾರೆ. ಗಾಳಿ ಒಂದು ಬಿಟ್ಟು ಉಳಿದ ಎಲ್ಲದಕ್ಕೂ ಜಿಎಸ್ ಟಿ ವಿಧಿಸುತ್ತಾರೆ. ಇದಕ್ಕೂ ಮುಂದೆ ಜಿಎಸ್ ಟಿ ವಿಧಿಸಬಹುದು.

ಇವರಿಗೆ ಜನರ ಬಗ್ಗೆ ಕಾಳಜಿ ಇಲ್ಲ. ಕೇವಲ ಕಾಂಗ್ರೆಸ್ ವಿರುದ್ಧ ಟೀಕೆ ಮಾಡುತ್ತಾರೆ. ಸ್ವಾತಂತ್ರ್ಯ ಬಂದಾಗ ಆಹಾರ ಕೊರತೆ ಇದ್ದ ದೇಶವನ್ನು ಆಹಾರ ಸ್ವಾವಲಂಬನೆ ದೇಶವಾಗಿ ಮಾಡಿದ್ದೇವೆ. ಹಸಿರು ಕ್ರಾಂತಿ, ಶ್ವೇತ ಕ್ರಾಂತಿ ಮಾಡಿದ್ದು ಕಾಂಗ್ರೆಸ್ ಎಂದರು.
ಬಿಜೆಪಿ ಯಾವುದೇ ಕೆಲಸ ಮಾಡದೇ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ವರ್ಷಕ್ಕೆ 2 ಕೋಟಿ ಉದ್ಯೋಗ, ಎಲ್ಲರ ಖಾತೆಗೆ 15 ಲಕ್ಷ ಹಣ ಹಾಕುತ್ತೇವೆ, ರೈತರ ಆದಾಯ ಡಬಲ್, ಉಚಿತ ಸಿಲಿಂಡರ್ ನೀಡುತ್ತೇವೆ ಎಂದರು. ಯಾವುದನ್ನೂ ಮಾಡಲಿಲ್ಲ. ಕೇವಲ ಮೋಸ, ಸುಳ್ಳು, ವಂಚನೆಯಿಂದ ಮತ ಪಡೆದು ನಮ್ಮನ್ನು ಪ್ರಶ್ನಿಸುತ್ತಾರೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications