Karnataka Dam Water Level: ಮಳೆಯಿಂದ ಹಲವು ಡ್ಯಾಂಗಳು ಭರ್ತಿ: ರಾಜ್ಯದ 14 ಜಲಾಶಯಗಳ ನೀರಿನ ಮಟ್ಟ ವಿವರ ಹೀಗಿದೆ
ಬೆಂಗಳೂರು, ಆಗಸ್ಟ್ 22: ದೇಶಾದ್ಯಂತ ಮಳೆಯ ಅಬ್ಬರ ಹೆಚ್ಚುತ್ತಿದ್ದು, ಕೆಲವೆಡೆ ದಿನದಿಂದ ದಿನಕ್ಕೆ ಮಳೆಯಾರ್ಭಟ ತುಸು ಕಡಿಮೆಯಾಗುತ್ತಿದೆ. ಕರ್ನಾಟಕದ ಕೆಲವು ಭಾಗದಲ್ಲಿ ಮಳೆಯಾಗುತ್ತಿದೆ. ರಾಜ್ಯದಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಕರ್ನಾಟಕದ ಬಹುತೇಕ ನದಿಗಳು ಮೈದುಂಬಿ ಹರಿಯುತ್ತಿವೆ. ಇದರಿಂದ ಜಲಾಯಶಗಳು ಕೂಡ ಭರ್ತಿಯಾಗಿವೆ.
ಈ ಬಾರಿ ಮುಂಗಾರು ಮಳೆ ಹೆಚ್ಚಾಗಿದ್ದು, ಇದೀಗ ರಾಜ್ಯದಲ್ಲಿ ಮಳೆಯ ಅಬ್ಬರ ಸದ್ಯ ಕಡಿಮೆಯಾಗಿದೆ. ಆದರೆ, ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ, ಕರಾವಳಿ ಭಾಗದಲ್ಲಿ ಹಾಗೂ ಮಲೆನಾಡಿನ ಕೆಲವು ಪ್ರದೇಶಗಳಲ್ಲಿ ಇನ್ನೂ ಮಳೆ ಮುಂದುವರೆದಿದೆ. ಹೀಗಾಗಿ, ಆ ಭಾಗಕ್ಕೆ ನೀರಿನ ಹರಿವು ಹೆಚ್ಚುತ್ತಲೇ ಇದೆ. ಮಳೆಯಿಂದಾಗಿ ಭದ್ರಾ, ಹಾರಂಗಿ, ಕಬಿನಿ, ಕೆಆರ್ಎಸ್, ಹೇಮಾವತಿ, ಲಿಂಗನಮಕ್ಕಿ ಅಣೆಕಟ್ಟುಗಳ ನೀರಿನ ಮಟ್ಟ ಹೆಚ್ಚಳವಾಗಿದೆ. ಹಾಗಾದ್ರೆ ಭದ್ರಾ ಜಲಾಶಯ ಸೇರಿದಂತೆ ಇಂದು(ಆಗಸ್ಟ್ 22) ರಂದು ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

| ಕರ್ನಾಟಕದ ಜಲಾಶಯಗಳು | ಒಟ್ಟು ಸಾಮರ್ಥ್ಯ (ಟಿಎಂಸಿ) | ಇಂದಿನ ನೀರಿನ ಮಟ್ಟ (ಟಿಎಂಸಿ) | ಒಳಹರಿವು(ಕ್ಯೂಸೆಕ್ಸ್) |
| ಆಲಮಟ್ಟಿ ಜಲಾಶಯ | 123.08 | 123.08 | 34,968 |
| ತುಂಗಭದ್ರಾ ಜಲಾಶಯ | 105.79 | 78.80 | 30,893 |
| ಮಲಪ್ರಭಾ ಜಲಾಶಯ | 37.73 | 34.45 | 1,644 |
| ಕೆ ಆರ್ ಎಸ್ | 49.45 | 47.84 | 8,747 |
| ಲಿಂಗನಮಕ್ಕಿ ಜಲಾಶಯ | 151.75 | 144.42 | 7,721 |
| ಕಬಿನಿ ಜಲಾಶಯ | 19.52 | 18.42 | 2,676 |
| ಭದ್ರಾ ಜಲಾಶಯ | 71.54 | 64.33 | 6,118 |
| ಘಟಪ್ರಭಾ ಜಲಾಶಯ | 51.00 | 50.98 | 2,701 |
| ಹೇಮಾವತಿ ಜಲಾಶಯ | 37.10 | 36.04 | 6,483 |
| ವರಾಹಿ ಜಲಾಶಯ | 31.10 | 21.80 | 376 |
| ಹಾರಂಗಿ ಜಲಾಶಯ | 8.50 | 8.04 | 1,389 |
| ನಾರಾಯಣಪುರ | 33.31 | 32.98 | 35,594 |
| ವಾಣಿವಿಲಾಸ ಸಾಗರ | 30.42 | 20.27 | 693 |
| ಸೂಫಾ | 145.33 | 122.52 | 2,874 |












Click it and Unblock the Notifications