Karnataka Dam Water Level: ಆಗಸ್ಟ್ 20 ರಂದು ರಾಜ್ಯದ 14 ಡ್ಯಾಂಗಳ ನೀರಿನ ಮಟ್ಟ ಎಷ್ಟು? ಇಲ್ಲಿದೆ ಮಾಹಿತಿ
ಬೆಂಗಳೂರು,ಆಗಸ್ಟ್ 20: ಮುಂಗಾರು ಮಳೆಯ ಅಬ್ಬರಕ್ಕೆ ರಾಜ್ಯದ ಜೀವನಾಡಿಗಳಾದ ಜಲಾಶಯಗಳು ಭರ್ತಿಯಾಗುತ್ತವೆ. ಬಹುತೇಕ ಜಲಾಶಯಗಳು ಭರ್ತಿಯಾಗಿದ್ದು, ಭಾರಿ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದೆ.
ಕಬಿನಿ, ಕೃಷ್ಣರಾಜಸಾಗರ, ಹೇಮಾವತಿ ಮತ್ತು ನಾರಾಯಣಪುರ ಜಲಾಶಯಗಳು ಭರ್ತಿಯಾಗಿದ್ದು, ಭಾರಿ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದೆ. ಇನ್ನೂ ಉತ್ತರ ಕರ್ನಾಟಕದ ಪ್ರಮುಖ ನದಿಗಳಲ್ಲಿ ಘಟಪ್ರಭಾ ಕೂಡ ಒಂದು. ಘಟಪ್ರಭ ನದಿ ಕೃಷ್ಣೆಯ ಉಪನದಿಯಾಗಿದೆ. ಘಟಪ್ರಭಾ ನದಿಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಗ್ರಾಮದಲ್ಲಿ ಜಲಾಶಯ ನಿರ್ಮಿಸಲಾಗಿದೆ. ಹಾಗಾದರೆ ಇಂದು (ಆಗಸ್ಟ್ 20) ಕರ್ನಾಟಕದ ಪ್ರಮುಖ 14 ಜಲಾಶಯಗಳ ನೀರಿನ ಮಟ್ಟ ವಿವರ ಇಲ್ಲಿದೆ.

| ಪ್ರಮುಖ ಜಲಾಶಯಗಳು | ಒಟ್ಟು ಸಾಮರ್ಥ್ಯ (ಟಿಎಂಸಿ) | ಇಂದಿನ ಮಟ್ಟ (ಟಿಎಂಸಿ) | ಒಳಹರಿವು (ಕ್ಯೂಸೆಕ್ಸ್) |
| ಆಗಮಟ್ಟಿ ಜಲಾಶಯ | 123.08 | 123.08 | 19968 |
| ತುಂಗಭದ್ರಾ ಜಲಾಶಯ | 105.79 | 75.13 | 37687 |
| ಮಲಪ್ರಭಾ ಜಲಾಶಯ | 37.73 | 34.45 | 1644 |
| ಕೆಆರ್‌ಎಸ್ | 49.45 | 47.60 | 12210 |
| ಲಿಂಗನಮಕ್ಕಿ ಜಲಾಶಯ | 151.75 | 144.58 | 4337 |
| ಕಬಿನಿ ಜಲಾಶಯ | 19.52 | 18.40 | 2821 |
| ಭದ್ರಾ ಜಲಾಶಯ | 71.54 | 64.30 | 7584 |
| ಘಟಪ್ರಭಾ ಜಲಾಶಯ | 51.00 | 51.00 | 2777 |
| ಹೇಮಾವತಿ ಜಲಾಶಯ | 37.10 | 36.04 | 8167 |
| ವರಾಹಿ ಜಲಾಶಯ | 31.10 | 21.70 | 678 |
| ಹಾರಂಗಿ ಜಲಾಶಯ | 8.50 | 8.01 | 962 |
| ಸೂಫಾ | 145.33 | 122.68 | 2667 |
| ನಾರಾಯಣಪುರ | 33.31 | 33.31 | 24253 |
| ವಾಣಿವಿಲಾಸ ಸಾಗರ | 30.42 | 20.08 | 1270 |












Click it and Unblock the Notifications