Karnataka Dam Water Level Today: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ಸಂಗ್ರಹ ಮಟ್ಟ ಎಷ್ಟಿದೆ?
ಬೆಂಗಳೂರು, ನವೆಂಬರ್ 15: ಕರ್ನಾಟಕದಾದ್ಯಂತ ಹಿಂಗಾರು ಮಳೆ ಸಕ್ರಿಯಗೊಂಡಿದೆ. ಉತ್ತರ ಕರ್ನಾಟಕ ಸೇರಿದಂತೆ ವಿವಿಧ ಭಾಗಗಳಲ್ಲಿ ಮಳೆ ಓಡಾಟ ನಿರಂತರವಾಗಿದ್ದು, ದಕ್ಷಿಣ ಒಳನಾಡಿಗೆ ಅತ್ಯಧಿಕ ಮಳೆ ಅಗುತ್ತಿದೆ. ಕಳೆದ 15 ದಿನಗಳಲ್ಲಿ ರಾಜ್ಯದ ವಿವಿಧೆಡೆ ಸುರಿದ ಮಳೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟದಲ್ಲಿ ಏರಿಕೆ ಆಗಿದೆ. ಒಳಹರಿವು ಹೆಚ್ಚಾಗಿದ್ದು, ತಕ್ಕ ಮಟ್ಟಿನ ನೀರನ್ನು ಸರ್ಕಾರ ನದಿಗಳಿಗೆ ಬೀಡುಗಡೆ ಮಾಡುತ್ತಿದೆ.
ಭಾರೀ ಮಳೆಗೆ ರಾಜ್ಯದ ಕೆಆರ್.ಎಸ್, ಹಾರಂಗಿ, ತುಂಗಭದ್ರಾ, ಕಬಿನಿ, ವಾಣಿ ವಿಲಾಸ ಸಾಗರ, ಲಿಂಗನಮಕ್ಕಿ ಸೇರಿದಂತೆ ವಿವಿಧ ಜಲಾಶಯಗಳಲ್ಲಿ ನೀರಿನ ಒಳಹರಿವು ಏರಿಕೆ ಆಗಿದೆ. ಜಲಾಯನಯನ ಪ್ರದೇಶಗಳಲ್ಲಿ ಮಳೆಯ ವಾತವರಣ ಮುಂದುವರಿದಿದೆ. ಸದ್ಯ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ? ಒಳ ಮತ್ತು ಹೊರ ಹರಿವಿನ ಮಾಹಿತಿ ಇಲ್ಲಿದೆ.

ಪ್ರಮುಖ ಜಲಾಶಯಗಳ ನೀರಿನ ಮಟ್ಟದ ಪಟ್ಟಿ
ಲಿಂಗನಮಕ್ಕಿ ಜಲಾಶಯ
ಒಟ್ಟು ನೀರಿನ ಸಾಮರ್ಥ್ಯ: 152.75 ಟಿಎಂಸಿ
ಇಂದಿನ ಪ್ರಮಾಣ : 138 ಟಿಎಂಸಿ
ಡ್ಯಾಂ ಒಳಹರಿವು : 2072 ಕ್ಯೂಸೆಕ್ಸ್
ಡ್ಯಾಂ ಹೊರ ಹರಿವು: 5593 ಕ್ಯೂಸೆಕ್ಸ್
ಹಾರಂಗಿ ಜಲಾಶಯದ ವಿವರ
ಒಟ್ಟು ನೀರಿನ ಸಾಮರ್ಥ್ಯ: 8.50 ಟಿಎಂಸಿ
ಇಂದಿನ ಪ್ರಮಾಣ : 5.70 ಟಿಎಂಸಿ
ಡ್ಯಾಂ ಒಳಹರಿವು : 115 ಕ್ಯೂಸೆಕ್ಸ್
ಡ್ಯಾಂ ಹೊರ ಹರಿವು: 2400 ಕ್ಯೂಸೆಕ್ಸ್
ಕೆಆರ್‌ಎಸ್ ಜಲಾಶಯದ ಮಾಹಿತಿ
ಒಟ್ಟು ನೀರಿನ ಸಾಮರ್ಥ್ಯ: 49.45 ಟಿಎಂಸಿ
ಇಂದಿನ ಪ್ರಮಾಣ : 49.45 ಟಿಎಂಸಿ
ಡ್ಯಾಂ ಒಳಹರಿವು : 5245 ಕ್ಯೂಸೆಕ್ಸ್
ಡ್ಯಾಂ ಹೊರ ಹರಿವು: 5035 ಕ್ಯೂಸೆಕ್ಸ್
ಹೇಮಾವತಿ ಜಲಾಶಯ ಇಂದಿನ ವಿವರ
ಒಟ್ಟು ನೀರಿನ ಸಾಮರ್ಥ್ಯ: 37.10ಟಿಎಂಸಿ
ಇಂದಿನ ಪ್ರಮಾಣ : 32.03 ಟಿಎಂಸಿ
ಡ್ಯಾಂ ಒಳಹರಿವು : 1999 ಕ್ಯೂಸೆಕ್ಸ್
ಡ್ಯಾಂ ಹೊರ ಹರಿವು: 4980 ಕ್ಯೂಸೆಕ್ಸ್

ಕಬಿನಿ ಡ್ಯಾಂ ನೀರಿನ ಮಟ್ಟ ಎಷ್ಟಿದೆ
ಒಟ್ಟು ನೀರಿನ ಸಾಮರ್ಥ್ಯ: 19.52 ಟಿಎಂಸಿ
ಇಂದಿನ ಪ್ರಮಾಣ : 17.69 ಟಿಎಂಸಿ
ಡ್ಯಾಂ ಒಳಹರಿವು : 102 ಕ್ಯೂಸೆಕ್ಸ್
ಡ್ಯಾಂ ಹೊರ ಹರಿವು: 1700 ಕ್ಯೂಸೆಕ್ಸ್
ಆಲಮಟ್ಟಿ ಜಲಾಶಯದ ನೀರಿನ ಪ್ರಮಾಣ
ಒಟ್ಟು ನೀರಿನ ಸಾಮರ್ಥ್ಯ: 123.08 ಟಿಎಂಸಿ
ಇಂದಿನ ಪ್ರಮಾಣ : 122.13 ಟಿಎಂಸಿ
ಡ್ಯಾಂ ಒಳಹರಿವು : 00 ಕ್ಯೂಸೆಕ್ಸ್
ಡ್ಯಾಂ ಹೊರ ಹರಿವು: 1726 ಕ್ಯೂಸೆಕ್ಸ್
ವಾಣಿ ವಿಲಾಸ ಸಾಗರ ಡ್ಯಾಂ ವಿವರ
ಒಟ್ಟು ನೀರಿನ ಸಾಮರ್ಥ್ಯ: 30.42 ಟಿಎಂಸಿ
ಇಂದಿನ ಪ್ರಮಾಣ : 28.78 ಟಿಎಂಸಿ
ಡ್ಯಾಂ ಒಳಹರಿವು : 924 ಕ್ಯೂಸೆಕ್ಸ್
ಡ್ಯಾಂ ಹೊರ ಹರಿವು: 135 ಕ್ಯೂಸೆಕ್ಸ್
ಕರ್ನಾಟಕದಲ್ಲಿ ಈ ಮೇಲಿನ ಜಲಾಶಯಗಳು ಸೇರಿದಂತೆ ವಿವಿದ ಡ್ಯಾಂಗಳ ಮೈದುಂಬಿ ಹರಿಯುತ್ತಿವೆ. ಕೊಪ್ಪಳ ಜಿಲ್ಲೆಯಲ್ಲಿನ ತುಂಗಭದ್ರಾ ಡ್ಯಾಂ ಗೇಟ್ ಒಡೆದುಹೋಗಿತ್ತು. ತದನಂತರ ರಿಪೇರಿ ಆಯಿತು. ಅದಾದ ಬಳಿಕ ಬಂದ ಮಳೆಯಿಂದಾಗಿ ಇಲ್ಲಿ ಸಹ ಉತ್ತಮ ನೀರಿನ ಸಂಗ್ರಹವಾಗುತ್ತಿದೆ. ಮುಂದಿನ ಹಲವು ದಿನಗಳ ಕಾಲ ಮಳೆ ಮುಂದುವರಿಕೆ ಇದೆ. ದಕ್ಷಿಣ ಒಳನಾಡು ಹಾಗೂ ಮಲೆನಾಡಿನ ಭಾಗದಲ್ಲಿ ಭಾರೀ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.












Click it and Unblock the Notifications