Karnataka Dam Water Level: ಕರ್ನಾಟಕದ ವಿವಿಧ ಭಾಗಗಳಲ್ಲಿ ಮಳೆ; ಇಂದಿನ ಪ್ರಮುಖ ಜಲಾಶಯಗಳ ನೀರಿನ ಮಟ್ಟದ ವಿವರ
ಕರ್ನಾಟಕದ ವಿವಿಧ ಭಾಗಗಳಲ್ಲಿ ಸಾಧಾರಣ ಮಳೆ ಮುಂದುವರಿದಿದೆ. ಮುಂದಿನ 2 ದಿನಗಳಲ್ಲಿ ದೇಶದ ಉಳಿದ ಭಾಗಗಳಿಂದ ನೈಋತ್ಯ ಮುಂಗಾರು ಮತ್ತಷ್ಟು ಹಿಮ್ಮೆಟ್ಟಲು ಮತ್ತು ಅದೇ ಸಮಯದಲ್ಲಿ ದಕ್ಷಿಣ ಪರ್ಯಾಯ ದ್ವೀಪದಲ್ಲಿ ಈಶಾನ್ಯ ಮುಂಗಾರು ಮಳೆ ಪ್ರಾರಂಭವಾಗಲು ಪೂರಕವಾದ ವಾತಾವರಣ ನಿರ್ಮಾಣವಾಗುತ್ತಿದೆ. ಮೇಲ್ಮಟ್ಟದ ವಾಯುಮಂಡಲದ ಪಶ್ಚಿಮ ದಿಕ್ಕಿನ ಮಾರುತಗಳಲ್ಲಿನ "ಟ್ರಫ್' ಈಗ ಸರಿಸುಮಾರು 82°E ರೇಖಾಂಶದ ಉದ್ದಕ್ಕೂ, 22°N ಅಕ್ಷಾಂಶದ ಉತ್ತರಕ್ಕೆ, ಸಮುದ್ರ ಮಟ್ಟದಿಂದ 5.8 ರಿಂದ 7.6 ಕಿ.ಮೀ ಎತ್ತರದ ನಡುವೆ ವ್ಯಾಪಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ,
ಮನ್ನಾರ್ ಕೊಲ್ಲಿ ಮತ್ತು ಪಕ್ಕದ ದಕ್ಷಿಣ ತಮಿಳುನಾಡು ಕರಾವಳಿಯಲ್ಲಿದ್ದ ಮೇಲ್ಮಟ್ಟದ ವಾಯುಭಾರ ಕುಸಿತದ ಸುಳಿಗಾಳಿಯು (Cyclonic circulation) ಈಗ ದಕ್ಷಿಣ ಶ್ರೀಲಂಕಾ ಕರಾವಳಿಯ ಆಚೆಗಿನ ನೈಋತ್ಯ ಬಂಗಾಳ ಕೊಲ್ಲಿಯ ಮೇಲೆ ನೆಲೆಗೊಂಡಿದ್ದು, ಸಮುದ್ರ ಮಟ್ಟದಿಂದ 3.1 ಕಿ.ಮೀ ಎತ್ತರದವರೆಗೆ ವಿಸ್ತರಿಸಿದೆ. ದಕ್ಷಿಣ ಶ್ರೀಲಂಕಾ ಕರಾವಳಿಯ ಆಚೆಗಿನ ನೈಋತ್ಯ ಬಂಗಾಳ ಕೊಲ್ಲಿಯಲ್ಲಿರುವ ಮೇಲಿನ ಸುಳಿಗಾಳಿಯಿಂದ ಮಧ್ಯ ಬಂಗಾಳ ಕೊಲ್ಲಿಯವರೆಗೆ ಪೂರ್ವ ದಿಕ್ಕಿನ ಮಾರುತಗಳಲ್ಲಿನ ಒಂದು "ಟ್ರಫ್' ವ್ಯಾಪಿಸಿದೆ; ಇದು ಸಮುದ್ರ ಮಟ್ಟದಿಂದ 3.1 ಕಿ.ಮೀ ಎತ್ತರದವರೆಗೆ ವಿಸ್ತರಿಸಿದ್ದು, ಎತ್ತರಕ್ಕೆ ಹೋದಂತೆ ದಕ್ಷಿಣದ ಕಡೆಗೆ ವಾಲಿಕೊಂಡಿದೆ.

ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿದ್ದ ಮೇಲ್ಮಟ್ಟದ ವಾಯುಭಾರ ಕುಸಿತದ ಸುಳಿಗಾಳಿಯು ಮೇಲೆ ತಿಳಿಸಲಾದ 'ಟ್ರಫ್'ನೊಂದಿಗೆ ವಿಲೀನಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಉಲ್ಲೇಖಿಸಿದೆ. ಕರ್ನಾಟಕದ 14 ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವರ ಇಲ್ಲಿದೆ.
ಕೆಆರ್‌ಎಸ್ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 124.80
ಇಂದಿನ ಮಟ್ಟ: 101.35
ಒಳಹರಿವು: 459
ಹೊರಹರಿವು: 2,664 ಕ್ಯೂಸೆಕ್ಸ್‌ಗಳಲ್ಲಿ
ಹಾರಂಗಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,859
ಇಂದಿನ ಮಟ್ಟ: 2,847.02
ಒಳಹರಿವು: 368
ಹೊರಹರಿವು: 1,700 ಕ್ಯೂಸೆಕ್ಸ್‌ಗಳಲ್ಲಿ
ಕಬಿನಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,284.00
ಇಂದಿನ ಮಟ್ಟ: 2267.90
ಒಳಹರಿವು: 782
ಹೊರಹರಿವು: 1,300 ಕ್ಯೂಸೆಕ್ಸ್‌ಗಳಲ್ಲಿ
ಹೇಮಾವತಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,922
ಇಂದಿನ ಮಟ್ಟ: 2,892.61
ಒಳಹರಿವು: 735
ಹೊರಹರಿವು: 300 ಕ್ಯೂಸೆಕ್ಸ್‌ಗಳಲ್ಲಿ
ಲಿಂಗನಮಕ್ಕಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 1,819
ಇಂದಿನ ಮಟ್ಟ: 1,793.20
ಒಳಹರಿವು: 584
ಹೊರಹರಿವು: 3,695 ಕ್ಯೂಸೆಕ್ಸ್‌ಗಳಲ್ಲಿ
ಸೂಪಾ ಜಲಾಶಯ
ಗರಿಷ್ಠ ಮಟ್ಟ (ಮೀ.ಗಳಲ್ಲಿ): 564
ಇಂದಿನ ಮಟ್ಟ: 546.03
ಒಳಹರಿವು: 237.81
ಹೊರಹರಿವು: 4,442.50 ಕ್ಯೂಸೆಕ್ಸ್‌ಗಳಲ್ಲಿ
ಮಾಣಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 595
ಇಂದಿನ ಮಟ್ಟ: 585.20
ಒಳಹರಿವು: 0
ಹೊರಹರಿವು: 01
ತುಂಗಭದ್ರಾ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 1,633
ಇಂದಿನ ಮಟ್ಟ: 1,619.89
ಒಳಹರಿವು: 0
ಹೊರಹರಿವು: 194
ಮಲಪ್ರಭಾ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,079.50
ಇಂದಿನ ಮಟ್ಟ: 2,065.32
ಒಳಹರಿವು: 0
ಹೊರಹರಿವು: 194
ಘಟಪ್ರಭಾ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,175
ಇಂದಿನ ಮಟ್ಟ: 2,174.60
ಒಳಹರಿವು: 0
ಹೊರಹರಿವು: 155
ತುಂಗಾ (ಮೀ)
ಗರಿಷ್ಠ ಮಟ್ಟ (ಅಡಿಗಳಲ್ಲಿ): 588.24
ಇಂದಿನ ಮಟ್ಟ: 588.24
ಒಳಹರಿವು: 1,495
ಹೊರಹರಿವು: 1,495
ಭದ್ರಾ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 186
ಇಂದಿನ ಮಟ್ಟ: 173.3
ಒಳಹರಿವು: 341
ಹೊರಹರಿವು: 874
ಆಲಮಟ್ಟಿ ಜಲಾಶಯ
ಗರಿಷ್ಠ ಮಟ್ಟ (ಮೀ.ಗಳಲ್ಲಿ): 519.60
ಇಂದಿನ ಮಟ್ಟ: 517.95
ಒಳಹರಿವು: 0
ಹೊರಹರಿವು: 7,254
ನಾರಾಯಣಪುರ ಜಲಾಶಯ
ಗರಿಷ್ಠ ಮಟ್ಟ (ಮೀ. ಗಳಲ್ಲಿ): 492.25
ಇಂದಿನ ಮಟ್ಟ: 490.32
ಒಳಹರಿವು: 374
ಹೊರಹರಿವು: 20,900


Click it and Unblock the Notifications
