Karnataka Dam Water Level Good News: KRS ನೀರಿನ ಮಟ್ಟ 100 ಅಡಿ ಸಮೀಪ!, 14 ಜಲಾಶಯಗಳ ನೀರಿನ ಮಟ್ಟದ ವಿವರ
Karnataka Dam Water Level: ಚಂಡಮಾರುತ ಪ್ರಸರಣ ಪ್ರಭಾವ ಹಾಗೂ ನೆರೆಯ ಕೇರಳ ರಾಜ್ಯದಲ್ಲಿ ಭಾರೀ ಮಳೆ ಆಗುತ್ತಿರುವುದು ಕರ್ನಾಟಕಕ್ಕೆ ವರವಾಗಿದೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಆಗುತ್ತಿದ್ದು, ಕರ್ನಾಟಕದ ಪ್ರಮುಖ ಜಲಾಶಯಗಳಿಗೆ ಜೀವ ಕಳೆ ಬಂದಿದೆ. ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗುತ್ತಿರುವುದರಿಂದ ಸಹಜವಾಗಿಯೇ ಕಾವೇರಿ ಜಲ ವಿವಾದ ತಣ್ಣಗಾಗುತ್ತಿದೆ. ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಜಲಾಶಯಕ್ಕೆ 30 ಸಾವಿರ ಕ್ಯುಸೆಕ್‌ಗೂ ಹೆಚ್ಚು ನೀರು ಹರಿದು ಬರುತ್ತಿದೆ. ಅಲ್ಲದೆ, ಕೆಆರ್‌ಎಸ್ ನೀರಿನ ಮಟ್ಟವು 100 ಅಡಿ ಸಮೀಪಕ್ಕೆ ಬಂದಿದೆ. ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟವು ಆಗಸ್ಟ್ 3ರ ಸಂಜೆ ವೇಳೆಗೆ 98.80 ಅಡಿ ತಲುಪಿದೆ (ಡ್ಯಾಂನ ಗರಿಷ್ಠ ಮಟ್ಟವು 124.80 ಅಡಿ). ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಭಾರೀ ಮಳೆ ಆಗುತ್ತಿರುವುದರಿಂದ ಕರ್ನಾಟಕದ ವಿವಿಧ ಜಲಾಶಯಗಳಿಗೆ ಜೀವಕಳೆ ಬಂದಿದೆ. ಕೆಆರ್‌ಎಸ್‌ಗೆ ಹರಿದು ಬರುತ್ತಿರುವ ನೀರನ ಪ್ರಮಾಣವು ಇದೇ ಮಾದರಿಯಲ್ಲಿ ಮುಂದುವರಿದರೆ ಸೋಮವಾರ ಜಲಾಶಯದ ನೀರಿನ ಮಟ್ಟವು 100 ಅಡಿ ತಲುಪಬಹುದು ಎಂದು ಹೇಳಲಾಗಿದೆ.
ಕಬಿನಿಗೆ 25 ಸಾವಿರ ಕ್ಯುಸೆಕ್ ನೀರು ನದಿಗೆ ಬಿಡಲಾಗಿದೆ
ಇನ್ನು ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯವು ಸಹ ಭಾನುವಾರ ಭರ್ತಿಯಾಗಿದೆ. ಈ ಜಲಾಶಯದಿಂದ 25 ಸಾವಿರ ಕ್ಯುಸೆಕ್ ನೀರನ್ನು ಕಪಿಲಾ ನದಿಗೆ ಹರಿಸಲಾಗಿದೆ. ಇದರಿಂದ ಸಮೀಪದ ಬಿದರಹಳ್ಳಿ ಸೇತುವೆ ಮುಳುಗಡೆಯಾಗಿದೆ. ಅಲ್ಲದೆ ನೆರೆಯ ಕೇರಳದ ವಯನಾಡು ಪ್ರದೇಶದಲ್ಲಿ ಭಾರೀ ಮಳೆ ಆಗುತ್ತಿರುವುದರಿಂದ ಜಲಾಶಯಕ್ಕೆ ಒಳಹರಿವಿನ ಪ್ರಮಾಣವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Karnataka Dam Water Level: ತುಂಬಿ ಹರಿಯುತ್ತಿದೆ ಕಾವೇರಿ, ಕೃಷ್ಣ, ತುಂಗೆ!
ಇನ್ನು ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಭಾರೀ ಮಳೆ ಆಗುತ್ತಿರುವುದರಿಂದ ಕರ್ನಾಟಕದ ಹಲವು ನದಿಗಳು ತುಂಬಿ ಹರಿಯುತ್ತಿವೆ. ನೆರೆಯ ರಾಜ್ಯಗಳಾದ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಮಳೆ ಆಗುತ್ತಿರುವುದು ಸಹ ವರವಾಗಿ ಪರಿಣಮಿಸಿದೆ. ಕೃಷ್ಣ ಮತ್ತು ಅದರ ಉಪ ನದಿಗಳಲ್ಲಿ ನೀರಿನ ಒಳಹರಿವು ಹೆಚ್ಚಳವಾಗಿದೆ. ಕಾವೇರಿ, ಕೃಷ್ಣ, ತುಂಗೆ ತುಂಬಿ ಹರಿಯುತ್ತಿರುವುದು ರೈತರು ಹಾಗೂ ನಾಡಿನ ಜನರಲ್ಲಿ ಸಂತಸ ಮೂಡಿಸಿದೆ. ಕರ್ನಾಟಕದ 13 ಪ್ರಮುಖ ಜಲಾಯಗಳಲ್ಲಿ ಆಗಸ್ಟ್ 3ರಂದು ನೀರಿನ ಮಟ್ಟ ಎಷ್ಟಿದೆ, ಒಳಹರಿವು ಹಾಗೂ ಹೊರ ಹರಿವು ಹೇಗೆ, ಎಷ್ಟಾಗಿದೆ ಎನ್ನುವ ಸಂಪೂರ್ಣ ವಿವರ ನೋಡೋಣ.
ಕೆಆರ್‌ಎಸ್ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 124.80
ಇಂದಿನ ಮಟ್ಟ: 98.80
ಒಳಹರಿವು: 22,055
ಹೊರಹರಿವು: 1,766 ಕ್ಯೂಸೆಕ್ಸ್‌ಗಳಲ್ಲಿ
ಹಾರಂಗಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,859
ಇಂದಿನ ಮಟ್ಟ: 2,856.78
ಒಳಹರಿವು: 10,620
ಹೊರಹರಿವು: 12,500 ಕ್ಯೂಸೆಕ್ಸ್‌ಗಳಲ್ಲಿ
ಕಬಿನಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,284.00
ಇಂದಿನ ಮಟ್ಟ: 2282.13
ಒಳಹರಿವು: 27218
ಹೊರಹರಿವು: 25000 ಕ್ಯೂಸೆಕ್ಸ್‌ಗಳಲ್ಲಿ
ಹೇಮಾವತಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,922
ಇಂದಿನ ಮಟ್ಟ: 2910.37
ಒಳಹರಿವು: 11,884
ಹೊರಹರಿವು: 500 ಕ್ಯೂಸೆಕ್ಸ್‌ಗಳಲ್ಲಿ
ಲಿಂಗನಮಕ್ಕಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 1,819
ಇಂದಿನ ಮಟ್ಟ: 1,781.85
ಒಳಹರಿವು: 77,580
ಹೊರಹರಿವು: 2,066 ಕ್ಯೂಸೆಕ್ಸ್‌ಗಳಲ್ಲಿ
ಸೂಪಾ ಜಲಾಶಯ
ಗರಿಷ್ಠ ಮಟ್ಟ (ಮೀ.ಗಳಲ್ಲಿ): 564
ಇಂದಿನ ಮಟ್ಟ: 538.80
ಒಳಹರಿವು: 26,594.7
ಹೊರಹರಿವು: 603.05 ಕ್ಯೂಸೆಕ್ಸ್‌ಗಳಲ್ಲಿ
ಮಾಣಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 595
ಇಂದಿನ ಮಟ್ಟ: 582.04
ಒಳಹರಿವು: 11,596
ಹೊರಹರಿವು: 0
ತುಂಗಭದ್ರಾ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 1,633
ಇಂದಿನ ಮಟ್ಟ: 1,611.59
ಒಳಹರಿವು: 25,811
ಹೊರಹರಿವು: 1,195
ಮಲಪ್ರಭಾ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,079.5
ಇಂದಿನ ಮಟ್ಟ: 2,059.50
ಒಳಹರಿವು: 4,862
ಹೊರಹರಿವು: 1,194
ಘಟಪ್ರಭಾ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,175
ಇಂದಿನ ಮಟ್ಟ: 2,155.93
ಒಳಹರಿವು: 19,330
ಹೊರಹರಿವು: 1,706
ತುಂಗಾ
ಗರಿಷ್ಠ ಮಟ್ಟ (ಅಡಿಗಳಲ್ಲಿ): 588.24
ಇಂದಿನ ಮಟ್ಟ: 587.36
ಒಳಹರಿವು: 94,000
ಹೊರಹರಿವು: 92,500
ಭದ್ರಾ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 186
ಇಂದಿನ ಮಟ್ಟ: 160.3
ಒಳಹರಿವು: 31,874
ಹೊರಹರಿವು: 185
ಆಲಮಟ್ಟಿ ಜಲಾಶಯ
ಗರಿಷ್ಠ ಮಟ್ಟ (ಮೀ.ಗಳಲ್ಲಿ): 519.60
ಇಂದಿನ ಮಟ್ಟ: 518.96
ಒಳಹರಿವು: 1,03,773
ಹೊರಹರಿವು: 1,11,308
ನಾರಾಯಣಪುರ ಜಲಾಶಯ
ಗರಿಷ್ಠ ಮಟ್ಟ (ಮೀ. ಗಳಲ್ಲಿ): 492.25
ಇಂದಿನ ಮಟ್ಟ: 491.42
ಒಳಹರಿವು: 1,10,000
ಹೊರಹರಿವು: 1,05,474


Click it and Unblock the Notifications
