ಕರ್ನಾಟಕ ಜಲಾಶಯಗಳ ಶನಿವಾರದ ನೀರಿನ ಮಟ್ಟ
ಬೆಂಗಳೂರು, ಸೆಪ್ಟೆಂಬರ್ 16 : ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ವರುಣನ ಆರ್ಭಟ ಕೊಂಚ ಕಡಿಮೆಯಾಗಿದೆ.
ಕಳೆದ ಒಂದು ವಾರದ ಹಿಂದೆ ಬೆಂಗಳೂರಿನಲ್ಲಿ ಸುರಿದಿದ್ದ ಮಳೆ ಇದೀಗ ತಗ್ಗಿದೆ. ಆದರೆ, ಉತ್ತರ ಕರ್ನಾಟಕದಲ್ಲಿ ಮಳೆರಾಯ ಕಳೆದ ಎರಡು ದಿನಗಳಿಂದ ತನ್ನ ರುದ್ರ ನರ್ತನ ತೋರುತ್ತಿದ್ದು, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿವೆ.

ಬಾಗಲಕೋಟೆ ಮಾತ್ರವಲ್ಲದೆ, ಕಲಬುರಗಿ, ಬೆಳಗಾವಿ, ಗದಗ, ವಿಜಯಪುರ, ರಾಯಚೂರು, ಕೊಪ್ಪಳ, ಬೀದರ್ ಜಿಲ್ಲೆಗಳಲ್ಲೂ ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ಆ ಭಾಗದ ಜನರು ತಲ್ಲಣಿಸುವಂತಾಗಿದೆ.
ರಾಜ್ಯದ ಜಲಾಶಗಳಲ್ಲಿ ಸಂಗ್ರಹವಾಗಿರುವ ಇಂದಿನ ನೀರಿನ ಮಟ್ಟ ಈ ಕೆಳಗಿನಂತಿದೆ.
| ಅಣೆಕಟ್ಟುಗಳು | ಗರಿಷ್ಠ ಮಟ್ಟ | ಇಂದಿನ ಮಟ್ಟ |
| ಲಿಂಗನಮಕ್ಕಿ | 1819.00 | 1795.25 |
| ಸುಪಾ | 1849.92 | 1792.52 |
| ವಾರಾಹಿ | 1949.50 | 1919.92 |
| ಹಾರಂಗಿ | 2859.00 | 2856.87 |
| ಹೇಮಾವತಿ | 2922.00 | 2888.25 |
| ಕೆಆರ್‌ಎಸ್ | 124.80 | 103.39 |
| ಕಬಿನಿ | 2284.00 | 2278.95 |
| ಭದ್ರಾ | 2158.00 | 2137.00 |
| ತುಂಗಭದ್ರಾ | 1633.00 | 1624.94 |
| ಘಟಪ್ರಭಾ | 2175.00 | 2155.93 |
| ಮಲಪ್ರಭಾ | 2079.50 | 2055.95 |
| ಆಲಮಟ್ಟಿ | 1704.81 | 1704.81 |
| ನಾರಾಯಣಪುರ | 1615.00 | 1614.97 |












Click it and Unblock the Notifications