ಅಣೆಕಟ್ಟುಗಳ ನೀರಿನಲ್ಲಿ ಅಲ್ಪ ಏರಿಕೆ, ಕಾಣೆಯಾದ ಮಳೆ

Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 13: ಕಳೆದ 24 ಗಂಟೆಗಳಲ್ಲಿ ನೈಋತ್ಯ ಮಾನ್ಸೂನ್ ಮಾರುತಗಳು ರಾಜ್ಯದಲ್ಲಿ ದುರ್ಬಲವಾಗಿದ್ದು ಮಳೆ ಪ್ರಮಾಣ ಕುಸಿತವಾಗಿದೆ.

ಭಾರೀ ಮಳೆಯಿಂದಾಗಿ ಹೆಸರಘಟ್ಟ ಕೆರೆಗೆ ಜೀವಕಳೆ

ಕರಾವಳಿ ಕರ್ನಾಟಕ ಮತ್ತು ಕರ್ನಾಟಕದ ಒಳನಾಡಿನಲ್ಲಷ್ಟೆ ಸ್ವಲ್ಪಮಟ್ಟಿಗೆ ಮಳೆಯಾಗಿದೆ. ಉಡುಪಿಯ ಸಿದ್ದಾಪುರದಲ್ಲಿ ಕಳೆದ 24 ಗಂಟೆಗಳಲ್ಲಿ 4 ಸೆಂಟಿ ಮೀಟರ್ ಮಳೆಯಾಗಿದ್ದರೆ, ಉತ್ತರ ಕನ್ನಡದ ಕುಮಟಾದಲ್ಲಿ 2 ಸೆಂಟಿ ಮೀಟರ್, ಉತ್ತರ ಕನ್ನಡದ ಅಂಕೋಲ, ಕಾರವಾರ, ಬನವಾಸಿ, ಶಿವಮೊಗ್ಗದ ಅನವಟ್ಟಿ, ಚಿಕ್ಕಮಗಳೂರಿನ ಕಮ್ಮರಡಿ, ಕೊಪ್ಪ, ಜಯಪುರದಲ್ಲಿ ತಲಾ ಒಂದು ಸೆಂಟಿ ಮೀಟರ್ ಮಳೆಯಾಗಿದೆ.

Karnataka dam water level September 13, 2017

ಬೆಂಗಳೂರಿನಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಮಳೆ ಮಂಗಳವಾರ ಮಾತ್ರ ರಜಾ ಹಾಕಿದೆ. ಬೆಂಗಳೂರಿನಲ್ಲಿ ಇವತ್ತು ಮತ್ತು ನಾಳೆ ಅಂದರೆ ಗುರುವಾರ ಮೋಡ ಕವಿದ ವಾತಾವರಣವಿದ್ದು ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇನ್ನು ಕರಾವಳಿ ಕರ್ನಾಟಕ ಮತ್ತು ಒಳನಾಡು ಕರ್ನಾಟಕದಲ್ಲಿ ಗುಡುಗು ಸಹಿತ ಅಲ್ಪ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.

ಮಳೆ ಕುಸಿತವಾಗಿದ್ದರೂ ಜಲಾಶಯಗಳ ನೀರಿನಲ್ಲಿ ಅಲ್ಪ ಏರಿಕೆಯಾಗಿದೆ. ಇದಕ್ಕೆ ನಿನ್ನೆ ಮತ್ತು ಮೊನ್ನೆ ಬಿದ್ದ ಮಳೆಯೇ ಕಾರಣ. ಆದರೆ ಸದ್ಯ ಮಳೆ ನಿಂತಿರುವುದರಿಂದ ಮುಂದಿನ ದಿನಗಳಲ್ಲಿ ಅಣೆಕಟ್ಟುಗಳಲ್ಲಿರುವ ನೀರಿನ ಪ್ರಮಾಣ ಇಳಿಕೆಯಾಗಬಹುದು.

ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ..

ಅಣೆಕಟ್ಟುಗಳು ಗರಿಷ್ಠ ಮಟ್ಟ ಇಂದಿನ ಮಟ್ಟ
ಲಿಂಗನಮಕ್ಕಿ 1819.00 1795.25
ಸುಪಾ 1849.92 1793.04
ವಾರಾಹಿ 1949.50 1923.82
ಹಾರಂಗಿ 2859.00 2857.27
ಹೇಮಾವತಿ 2922.00 2889.62
ಕೆಆರ್‌ಎಸ್ 124.80 104.35
ಕಬಿನಿ 2284.00 2278.97
ಭದ್ರಾ 2158.00 2136.50
ತುಂಗಭದ್ರಾ 1633.00 1624.88
ಘಟಪ್ರಭಾ 2175.00 2154.80
ಮಲಪ್ರಭಾ 2079.50 2055.30
ಆಲಮಟ್ಟಿ 1704.81 1704.81
ನಾರಾಯಣಪುರ 1615.00 1615.04

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rain will continue for another 48 hours in Karnataka said Meteorological department. Water level in almost all dams in Karnataka has increased considerably.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ