ಜಲಾಶಯಗಳ ನೀರಿನ ಮಟ್ಟ, ಕೆಆರ್‌ಎಸ್‌ನಲ್ಲಿ 104 ಅಡಿ ನೀರು
ಬೆಂಗಳೂರು, ಸೆಪ್ಟೆಂಬರ್ 12 : ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ವರುಣನ ಆರ್ಭಟ ಕೊಂಚ ಕಡಿಮೆಯಾಗಿದೆ. ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಕರಾವಳಿ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬೇವೂರು 7, ಹುಕ್ಕೇರಿ 4, ಗೋಕಾಕ್ ಮತ್ತು ಲಕ್ಕವಳ್ಳಿಯಲ್ಲಿ 3 ಸೆಂ.ಮೀ ಮಳೆಯಾಗಿದೆ. ಬೆಂಗಳೂರು ಸುತ್ತ-ಮುತ್ತಲು ಉತ್ತಮ ಮಳೆಯಾಗಿದ್ದು, ಹೆಸರಘಟ್ಟ ಕೆರೆಗೆ ಜೀವಕಳೆ ಬಂದಿದೆ. ಕೆರೆಗೆ 10 ಅಡಿ ನೀರು ಹರಿದು ಬಂದಿದೆ.

ಭದ್ರಾವತಿ, ಟಿ.ನರಸೀಪುರ, ಮಹದೇಶ್ವರ ಬೆಟ್ಟ, ಮಂಗಳೂರು, ಭಾಗಮಂಡಲ, ಪೊನ್ನಂಪೇಟೆ, ಆನವಟ್ಟಿ, ಕೊಳ್ಳೆಗಾಲ, ದಾವಣಗೆರೆಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.
ಜಲಾಶಯಗಳ ನೀರಿನ ಮಟ್ಟ
| ಅಣೆಕಟ್ಟುಗಳು | ಗರಿಷ್ಠ ಮಟ್ಟ | ಇಂದಿನ ಮಟ್ಟ |
| ಲಿಂಗನಮಕ್ಕಿ | 1819.00 | 1795.25 |
| ಸುಪಾ | 1849.92 | 1793.18 |
| ವಾರಾಹಿ | 1949.50 | 1923.88 |
| ಹಾರಂಗಿ | 2859.00 | 2857.27 |
| ಹೇಮಾವತಿ | 2922.00 | 2890.00 |
| ಕೆಆರ್‌ಎಸ್ | 124.80 | 104.15 |
| ಕಬಿನಿ | 2284.00 | 2278.94 |
| ಭದ್ರಾ | 2158.00 | 2136.25 |
| ತುಂಗಭದ್ರಾ | 1633.00 | 1624.88 |
| ಘಟಪ್ರಭಾ | 2175.00 | 2154.46 |
| ಮಲಪ್ರಭಾ | 2079.50 | 2055.25 |
| ಆಲಮಟ್ಟಿ | 1704.81 | 1704.80 |
| ನಾರಾಯಣಪುರ | 1615.00 | 1614.97 |












Click it and Unblock the Notifications