Dam Water Storage Level: ಕಬಿನಿ ಜಲಾಶಯದಿಂದ 5000 ಕ್ಯೂಸೆಕ್ ರಿಲೀಸ್, ಇತರ ಡ್ಯಾಂಗಳ ನೀರಿನ ವಿವರ..
ಬೆಂಗಳೂರು, ಜೂನ್ 08: ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರಿಸಿ ಕೊಂಚ ಮರೆಯಾಗಿತ್ತು. ಇದೀಗ ಮತ್ತು ಬಹುತೇಕ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮಳೆ ಸುರಿಯುವ ಮುನ್ಸೂಚನೆ ಐಎಂಡಿ ನೀಡಿದೆ. ಇದರಿಂದ ರಾಜ್ಯದ ಜಲಾಶಯಗಳಲ್ಲಿ ನೀರಿನ ಒಳಹರಿವು ಅತ್ಯಧಿಕ ಪ್ರಮಾಣದಲ್ಲಿ ಹೆಚ್ಚಾಗುವ ನಿರೀಕ್ಷೆ ಇದೆ. ಈ ವರೆಗೆ ಬಂದ ಮಳೆಯಿಂದ ಹಾಗೂ ಮಲೆನಾಡು, ಇತರ ಜಿಲ್ಲೆಗಳಲ್ಲಿ ಮುಂದುವರಿದ ಮಳೆ ಪರಿಣಾಮ ಈ ಕೆಳಗಿನ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಏರಿಕೆ ಕಂಡಿದೆ. ಕಬಿನಿ ಜಲಾಶಯದಿಂದ 5000 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ. ಇಂದಿನ (ಜೂನ್ 08) ಈ ಡ್ಯಾಂಗಳ ನೀರು ಸಂಗ್ರಹ ಎಷ್ಟಿದೆ.
ಕೊಡಗು, ಮಸೂರು, ಮಡಿಕೇರಿ ಭಾಗದಲ್ಲಿ ಆಗಾಗ ಬರುತ್ತಿರುವ ಉತ್ತಮ ಮಳೆಯಿಂದ ಕಬಿನಿ ನದಿಗೆ ಅಡ್ಡಲಾಗಿ ಹೆಗ್ಗಡದೇವನಕೋಟೆ ತಾಲೂಕಿನ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದೆ. ಮೈಸೂರಿನಿಂದ 80ಕಿಲೋ ಮೀಟರ್ ಹಾಗೂ ಬೆಂಗಳೂರಿನಿಂದ 210 ಕಿಲೋ ಮೀಟರ್ ದೂರದಲ್ಲಿದೆ. ಸಾಕಷ್ಟು ಪ್ರದೇಶಗಳಿಗೆ ನೀರುಣಿಸುವ ಈ ಡ್ಯಾಂನಲ್ಲಿ ಒಳಹರಿವು ನಿರಂತರವಾಗಿ ಹೆಚ್ಚಾಗಿದ್ದು, ನೀರನ್ನು ನದಿಗೆ ಬಿಡುಗಡೆ ಮಾಡಲಾಗಿದೆ. ಕಬಿನಿ ಸೇರಿ ವಿವಿಧ ಡ್ಯಾಂಗಳ ನೀರಿನ ವಿವರ ಇಲ್ಲಿದೆ.

ಪ್ರಮುಖ ಜಲಾಶಯಗಳ ನೀರಿನ ವಿವರ
ಕಬಿನಿ ಅಣೆಕಟ್ಟಿನ ನೀರಿನ ಸಂಗ್ರಹ
ಡ್ಯಾಂ ಒಟ್ಟು ಎತ್ತರ: 2284 ಅಡಿ
ಒಟ್ಟು ನೀರಿನ ಸಾಮರ್ಥ್ಯ: 19.52 ಟಿಎಂಸಿ
ಇಂದಿನ ನೀರಿನ ಸಂಗ್ರಹ: 16.68 ಟಿಎಂಸಿ
ಡ್ಯಾಂ ಒಳಹರಿವು: 2292 ಕ್ಯೂಸೆಕ್
ಹೊರ ಹರಿವು : 5000 ಕ್ಯೂಸೆಕ್
* ಹೇಮಾವತಿ ಡ್ಯಾಂ ಇಂದಿನ ಮಾಹಿತಿ
ಜಲಾಶಯದ ಒಟ್ಟು ಎತ್ತರ: 2922 ಅಡಿ
ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ: 37.10 ಟಿಎಂಸಿ
ಇಂದಿನ ನೀರು ಸಂಗ್ರಹ: 24.281 ಟಿಎಂಸಿ
ನೀರಿನ ಒಳಹರಿವು : 997 ಕ್ಯೂಸೆಕ್
ಹೊರ ಹರಿವು: 350 ಕ್ಯೂಸೆಕ್
* ಕೆಆರ್‌ಎಸ್ ಡ್ಯಾಂ ನೀರಿನ ಅಪ್ಡೇಟ್ಸ್
ಅಣೆಕಟ್ಟಿನ ಒಟ್ಟು ಎತ್ತರ: 124.80 ಅಡಿ
ಕೆಆರ್ಎಸ್ ಒಟ್ಟು ನೀರು ಸಂಗ್ರಹ ಸಾಮರ್ಥ್ಯ: 49.452 ಟಿಎಂಸಿ
ಇಂದಿನ ನೀರಿನ ಮಟ್ಟ: 29.902 ಟಿಎಂಸಿ
ಒಳಹರಿವು : 2967 ಕ್ಯೂಸೆಕ್
ಹೊರ ಹರಿವು: 876 ಕ್ಯೂಸೆಕ್
* ಹಾರಂಗಿ ಅಣೆಕಟ್ಟಿನಲ್ಲಿ ಎಷ್ಟಿದೆ ನೀರು?
ಡ್ಯಾಂ ನೀರಿನ ಒಟ್ಟು ಎತ್ತರ: 2859 ಅಡಿ
ಒಟ್ಟು ನೀರು ಸಂಗ್ರಹ ಸಾಮರ್ಥ್ಯ: 8.5 ಟಿಎಂಸಿ
ಇಂದಿನ ನೀರು ಸಂಗ್ರಹ: 6.26 ಟಿಎಂಸಿ
ಒಳಹರಿವು : 1127 ಕ್ಯೂಸೆಕ್
ಹೊರಹರಿವು: 1000 ಕ್ಯೂಸೆಕ್












Click it and Unblock the Notifications