ವಿದೇಶದಲ್ಲಿಯೂ ಭಾರತದ ಮಾನ ಹರಾಜು ಹಾಕಿ ಬಂದ ಪ್ರಧಾನಿ ಮೋದಿ: ಕಾಂಗ್ರೆಸ್ ಕಿಡಿ
ಬೆಂಗಳೂರು, ಜೂನ್ 28: ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸವನ್ನು ಕೈಗೊಂಡಿದ್ದರು. ಈ ಕುರಿತು ವಾಗ್ದಾಳಿ ನಡೆಸಿರುವ ಕರ್ನಾಟಕ ಕಾಂಗ್ರೆಸ್, 'ಪ್ರಧಾನಿ ಮೋದಿಯವರು ವಿದೇಶದಲ್ಲಿಯೂ ಭಾರತದ ಮಾನ ಹರಾಜು ಹಾಕಿ ಬಂದಿದ್ದಾರೆ' ಎಂದು ಟೀಕಿಸಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕೆಪಿಸಿಸಿ, 'ಪ್ರಶ್ನೆಗಳನ್ನು ಎದುರಿಸಲು ಹಿಂದೇಟು ಹಾಕುವ ಮೋದಿಗೆ ಏಕಾಏಕಿ ಪ್ರಶ್ನೆ ಕೇಳಿದ್ದಕ್ಕೆ ಅಮೆರಿಕಾದ ಪತ್ರಕರ್ತೆಯನ್ನು ಬಿಜೆಪಿಯ ಟ್ರಾಲ್ ಆರ್ಮಿ ಟಾರ್ಗೆಟ್ ಮಾಡಿದ ಪರಿಣಾಮ ದೇಶದ ಮರ್ಯಾದೆ ಮಣ್ಣುಪಾಲಾಗಿದೆ' ಎಂದು ಹೇಳಿದೆ.

'ಭಾರತದಲ್ಲಿ ಪತ್ರಕರ್ತರನ್ನು ಹತ್ತಿಕ್ಕಿದಂತೆ ಅಮೆರಿಕಾದಲ್ಲೂ ಹತ್ತಿಕ್ಕಲು ಮುಂದಾಗುವ ಬಿಜೆಪಿಯ #ToolKit ಆರ್ಮಿಗೆ ದೇಶದ ಘನತೆಯ ಬಗ್ಗೆ ಕಿಂಚಿತ್ ಕಾಳಜಿ ಇಲ್ಲವೇಕೆ?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಬಿಟ್ ಕಾಯಿನ್ ಹಗರಣ
ಬಿಟ್ ಕಾಯಿನ್ ಹಗರಣ ಬಯಲಿಗೆ ಬಂದಾಗ ಬಿಜೆಪಿ ಸರ್ಕಾರ ಪ್ರಕರಣ ಮುಚ್ಚಿಹಾಕಲು ಸರ್ವ ಪ್ರಯತ್ನಗಳನ್ನೂ ಮಾಡಿತ್ತು ಎಂದು ಕಾಂಗ್ರೆಸ್ ಆರೋಪಿಸಿದೆ.
ಪ್ರಧಾನಿ ಮೋದಿಯವರು ವಿದೇಶದಲ್ಲಿಯೂ ಭಾರತದ ಮಾನ ಹರಾಜು ಹಾಕಿ ಬಂದಿದ್ದಾರೆ.
— Karnataka Congress (@INCKarnataka) June 28, 2023
ಪ್ರಶ್ನೆಗಳನ್ನು ಎದುರಿಸಲು ಹಿಂದೇಟು ಹಾಕುವ ಮೋದಿಗೆ ಏಕಾಏಕಿ ಪ್ರಶ್ನೆ ಕೇಳಿದ್ದಕ್ಕೆ ಅಮೆರಿಕಾದ ಪತ್ರಕರ್ತೆಯನ್ನು ಬಿಜೆಪಿಯ ಟ್ರಾಲ್ ಆರ್ಮಿ ಟಾರ್ಗೆಟ್ ಮಾಡಿದ ಪರಿಣಾಮ ದೇಶದ ಮರ್ಯಾದೆ ಮಣ್ಣುಪಾಲಾಗಿದೆ.
ಭಾರತದಲ್ಲಿ ಪತ್ರಕರ್ತರನ್ನು ಹತ್ತಿಕ್ಕಿದಂತೆ… pic.twitter.com/8dXB9BobW7
ಈ ಕುರಿತು ಟ್ವೀಟ್ ಮಾಡಿರುವ ಕೆಪಿಸಿಸಿ, ಹಗರಣವನ್ನು ಮುಚ್ಚಿಹಾಕಲು ಯಶಸ್ವಿಯೂ ಆಗಿತ್ತು, ಈಗ ನಮ್ಮ ಸರ್ಕಾರ ಬಿಟ್ ಕಾಯಿನ್ ಹಗರಣದ ಬುಡ, ಬೇರುಗಳನ್ನು ಜಾಲಾಡಲಿದೆ ಎಂದು ಹೇಳಿದೆ.
ಅಂದಹಾಗೆ ನಳೀನ್ ಕುಮಾರ್ ಕಟೀಲ್ ಅವರು ಕುಳಿತಲ್ಲಿಯೇ ಬೆವರುತ್ತಿದ್ದಾರಂತೆ, ಏಕಿರಬಹುದು ಬಿಜೆಪಿ? ಎಂದು ಪ್ರಶ್ನಿಸಿದೆ.
ಬಿಟ್ ಕಾಯಿನ್ ಹಗರಣ ಬಯಲಿಗೆ ಬಂದಾಗ @BJP4Karnataka ಸರ್ಕಾರ ಪ್ರಕರಣ ಮುಚ್ಚಿಹಾಕಲು ಸರ್ವ ಪ್ರಯತ್ನಗಳನ್ನೂ ಮಾಡಿತ್ತು.
— Karnataka Congress (@INCKarnataka) June 28, 2023
ಹಗರಣವನ್ನು ಮುಚ್ಚಿಹಾಕಲು ಯಶಸ್ವಿಯೂ ಆಗಿತ್ತು, ಈಗ ನಮ್ಮ ಸರ್ಕಾರ ಬಿಟ್ ಕಾಯಿನ್ ಹಗರಣದ ಬುಡ, ಬೇರುಗಳನ್ನು ಜಾಲಾಡಲಿದೆ.
ಅಂದಹಾಗೆ@nalinkateel ಅವರು ಕುಳಿತಲ್ಲಿಯೇ ಬೆವರುತ್ತಿದ್ದಾರಂತೆ, ಏಕಿರಬಹುದು… pic.twitter.com/pa7ns7Rvh5
ಬೆಲೆ ಏರಿಕೆಗೆ ವಿರೋಧ
ತೊಗರಿ, ಟೊಮೊಟೊ ಮುಂತಾದವುಗಳ ಬೆಲೆ ದೇಶೀಯ ಮಟ್ಟದಲ್ಲಿ ಏರಿಕೆಯಾಗಿದೆ. ಹಿಂದೆ ತಾವು ಅಧಿಕಾರದಲ್ಲಿದ್ದಾಗ 'ಬೆಲೆ ಏರಿಕೆ ಎನ್ನುವವರು ಪಾಕಿಸ್ತಾನಕ್ಕೆ ಹೋಗಿ' ಎಂದಿದ್ದ ಬಿಜೆಪಿ ನಾಯಕರಿಗೆ ಜನರ ಬಗ್ಗೆ ಕನಿಷ್ಠ ಕಾಳಜಿ ಇದೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
'ಜನರಿಗೆ ಉದ್ಯೋಗ ನೀಡದೆ ಬೆಲೆ ಏರಿಕೆಯ ಮೂಲಕ ಹಗಲು ದರೋಡೆಗಿಳಿದ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿಗರ ಪ್ರತಿಭಟನೆ ಯಾವಾಗ?' ಎಂದು ಕೇಳಿದೆ.
ತೊಗರಿ, ಟೊಮೊಟೊ ಮುಂತಾದವುಗಳ ಬೆಲೆ ದೇಶೀಯ ಮಟ್ಟದಲ್ಲಿ ಏರಿಕೆಯಾಗಿದೆ.
— Karnataka Congress (@INCKarnataka) June 28, 2023
ಹಿಂದೆ ತಾವು ಅಧಿಕಾರದಲ್ಲಿದ್ದಾಗ "ಬೆಲೆ ಏರಿಕೆ ಎನ್ನುವವರು ಪಾಕಿಸ್ತಾನಕ್ಕೆ ಹೋಗಿ" ಎಂದಿದ್ದ @BJP4Karnataka ನಾಯಕರಿಗೆ ಜನರ ಬಗ್ಗೆ ಕನಿಷ್ಠ ಕಾಳಜಿ ಇದೆಯೇ?
ಜನರಿಗೆ ಉದ್ಯೋಗ ನೀಡದೆ ಬೆಲೆ ಏರಿಕೆಯ ಮೂಲಕ ಹಗಲು ದರೋಡೆಗಿಳಿದ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿಗರ… pic.twitter.com/S2j2ZC3q2j












Click it and Unblock the Notifications