PM Modi Road Show: ಕರ್ತವ್ಯಕ್ಕೆ ರಜೆ ಹಾಕಿ ರಾಜ್ಯದಲ್ಲಿ ಪ್ರಧಾನಿ ಮೋದಿ ಠಿಕಾಣಿ: ಕಾಂಗ್ರೆಸ್ ಹೇಳಿದ್ದಿಷ್ಟು
ಬೆಂಗಳೂರು, ಮೇ 06: ರಾಜ್ಯ ಸಾರ್ವತ್ರಿಕ ಚುನಾವಣೆ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದಾದ್ಯಂತ ರೋಡ್ ಶೋ ನಡೆಸುತ್ತಿದ್ದಾರೆ. ಇಂದು ಶನಿವಾರ ಸಹ ಬೆಂಗಳೂರಿನಲ್ಲಿ ಬೃಹತ್ ರೋಡ್ ಶೋ ಆರಂಭವಾಗುತ್ತಿದೆ. ಈ ಕುರಿತು ಕರ್ನಾಟಕ ಕಾಂಗ್ರೆಸ್ ತಿಂಗಳಿಂದ ಕರ್ತವ್ಯಕ್ಕೆ ರಜೆ ಪಡೆದು ಪ್ರಧಾನಿ ಮೋದಿ ಕರ್ನಾಟಕದಲ್ಲೇ ಠಿಕಾಣಿ ಹೂಡಿದ್ದಾರೆ ಎಂದು ವ್ಯಂಗ್ಯವಾಡಿದೆ.
ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಕುರಿತು ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಪಾಪ ನಮ್ಮ ಪ್ರಧಾನಿ ಮೋದಿಯವರು, ದಿನಕ್ಕೆ 18 ಗಂಟೆ ಕೆಲಸ ಮಾಡುವವರು, ಜೀವನದಲ್ಲಿ ಒಂದು ದಿನವೂ ರಜೆ ಪಡೆಯದವರು, ನಿರಂತರ ದೇಶದ ಕೆಲಸಗಳಲ್ಲಿ ತೊಡಗಿಸಿಕೊಳ್ಳುವವರು.

ಸದಾ ಅತ್ಯಂತ ಬ್ಯುಸಿ ಇರುವ ಪ್ರಧಾನಿಮಂತ್ರಿಗಳು ಇದೀಗ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಕಳೆದ ಒಂದು ತಿಂಗಳಿಂದ ಕರ್ತವ್ಯಕ್ಕೆ ರಜೆ ಪಡೆದಿದ್ದಾರೆ. ರಜೆ ಪಡೆದು ಕರ್ನಾಟಕದಲ್ಲೇ ಠಿಕಾಣಿ ಹೂಡಿದ್ದು ನೋಡಿ ಬೇಸರವಾಗುತ್ತದೆ' ಟ್ವೀಟ್ ಮೂಲಕ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಟೀಕಿಸಿದೆ.
ಹಣ ಕೊಟ್ಟು ಕರೆತಂದ ಅದೇ ಜನರು ಹಿಂದೆ ಹಿಂದೆ ಓಡಿಬರುತ್ತಿದ್ದಾರೆಯೇ ಹೊರತು ಬೇರೆ ಇನ್ಯಾರೂ ಮೋದಿ ಮುಖ ನೋಡಲು ಬಂದಿಲ್ಲ!
— Karnataka Congress (@INCKarnataka) May 5, 2023
ಮೋದಿ ಸಾಹೇಬರು ಇದನ್ನು ನೋಡಿಯಾದರೂ ಕರ್ನಾಟಕದಿಂದ ಕಾಲ್ಕಿತ್ತರೆ ಕೊಂಚ ಮರ್ಯಾದೆ ಉಳಿದೀತು!
ನೆರೆ ಬಂದಾಗ, ಜನ ಸಂಕಟದಲ್ಲಿದ್ದಾಗ ಬರದ ಪ್ರಧಾನಿ ಈಗ ಬಂದು ಕೈಬೀಸಿದರೆ ಮರುಳಾಗಲು ಕನ್ನಡಿಗರು ಗಾಂಪರಲ್ಲ. pic.twitter.com/ScYlyEk6Ap
ಇತ್ತೀಚೆಗಷ್ಟೇ ಬಿಜೆಪಿ ರೋಡ್ ಶೋ ಬಗ್ಗೆ ಕುಟುಕಿದ್ದ ಕಾಂಗ್ರೆಸ್, ಸಹಣ ಕೊಟ್ಟು ಕರೆತಂದ ಅದೇ ಜನರು ಹಿಂದೆ ಹಿಂದೆ ಓಡಿಬರುತ್ತಿದ್ದಾರೆಯೇ ಹೊರತು ಬೇರೆ ಇನ್ಯಾರೂ ಪ್ರಧಾನಿ ಮೋದಿ ಮುಖ ನೋಡಲು ಬಂದಿಲ್ಲ ಎಂದು ಆರೋಪಿಸಿತ್ತು. ಪ್ರಧಾನಿ ಮೋದಿ ಸಾಹೇಬರು ಇದನ್ನು ನೋಡಿಯಾದರೂ ಕರ್ನಾಟಕದಿಂದ ಕಾಲ್ಕಿತ್ತರೆ ಕೊಂಚ ಮರಿಯಾದೇ ಉಳಿದೀತು. ರಾಜ್ಯದಲ್ಲಿ ನೆರೆ-ಪ್ರವಾಹ ಬಂದಾಗ, ಜನರು ಸಂಕಟದಲ್ಲಿದ್ದಾಗ ಬಾರದ ಪ್ರಧಾನಮಂತ್ರಿಗಳು ಈಗ ಬಂದು ಕೈಬೀಸಿದರೆ ಮರುಳಾಗಲು ಕನ್ನಡಿಗರು ಗಾಂಪರಲ್ಲ ಎಂದು ವಾಗ್ದಾಳಿ ನಡೆಸಿದೆ.












Click it and Unblock the Notifications