‘ಭಾರತ್ ಅಕ್ಕಿ’ ಬಗ್ಗೆ ಕಾಂಗ್ರೆಸ್ ಹೇಳಿದ್ದೇನು?

ಲೋಕಸಭೆ ಚುನಾವಣೆ 2024ರ ಮತದಾನ ಇನ್ನೇನು ಶುರುವಾಗಲಿದೆ, ಇದೇ ವೇಳೆ ಬಿಜೆಪಿ & ಕಾಂಗ್ರೆಸ್ ನಡುವೆ ಭರ್ಜರಿ ಫೈಟ್ ಶುರುವಾಗಿದೆ. ಸರ್ಕಾರಿ ಯೋಜನೆಗಳ ಕ್ರೆಡಿಟ್ ಪಡೆದು ಮತದಾರರ ಮನಸ್ಸು ಗೆಲ್ಲಲು ಎರಡೂ ಪಕ್ಷಗಳು ಪೈಪೋಟಿ ಆರಂಭಿಸಿವೆ. ಇದೇ ಹೊತ್ತಲ್ಲಿ ಕರ್ನಾಟಕದ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಹೊಸ ಸವಾಲು ಎಸೆದಿದೆ. ಅದರಲ್ಲೂ ಇದು 'ಭಾರತ್ ಅಕ್ಕಿ' ವಿಚಾರದಲ್ಲಿ!

ಹೌದು, ಕಳೆದ ಕೆಲವು ದಿನಗಳಿಂದ 'ಭಾರತ್ ಅಕ್ಕಿ' ವಿಚಾರ ದೊಡ್ಡ ಮಟ್ಟದಲ್ಲಿ ಸದ್ದನ್ನು ಮಾಡುತ್ತಿದೆ. ಒಂದು ಕಡೆ ಇದು ಬಡವರ ಪರ ಯೋಜನೆ & ಪ್ರಧಾನಿ ಮೋದಿ ಸರ್ಕಾರದ ಕೊಡುಗೆ ಅಂತಾ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಹೀಗಿದ್ದಾಗಲೇ ಕಾಂಗ್ರೆಸ್ ಆರೋಪದ ಬಾಂಬ್ ಒಂದನ್ನ ಸಿಡಿಸಿದ್ದು, 'ಭಾರತ್ ಅಕ್ಕಿ' ವಿಚಾರ ಮತ್ತೊಮ್ಮೆ ಭಾರಿ ಚರ್ಚೆಗೆ ಈಗ ವೇದಿಕೆ ಒದಗಿಸಿದೆ. ಹಾಗಾದರೆ ಕಾಂಗ್ರೆಸ್ ಹೇಳಿದ್ದೇನು? & ಬಿಜೆಪಿಗೆ ಹಾಕಿರುವ ಆ ಸವಾಲು ಎಂತಹದ್ದು? ಬನ್ನಿ ತಿಳಿಯೋಣ.

Karnataka Congress Said This About Bharat Rice

'ಗೃಹಲಕ್ಷ್ಮಿಗಾಗಿ ಮಹಿಳೆಯರು ಕಾದು...'

ಮೊದಲಿಗೆ ಬಿಜೆಪಿ ಒಂದು ಟ್ವೀಟ್ ಅನ್ನು ಮಾಡಿತ್ತು, '10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಜನತೆಯ ಕಿವಿ ಮೇಲೆ ಹೂವಿಟ್ಟಿದ್ದ @INCKarnataka ಸರ್ಕಾರ, ನುಡಿದಂತೆ ನಡೆಯುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. 10 ಕೆಜಿ ಅಕ್ಕಿ ಬದಲು ಪ್ರತಿ ಕೆಜಿ ಅಕ್ಕಿಗೆ ₹34 ನೀಡುತ್ತೇವೆಂದು ಹೇಳಿದ್ದ ಸಿಎಂ @siddaramaiah ಅವರು, ಅಕ್ಕಿ ಬದಲು ನೀಡುತ್ತಿದ್ದ ದುಡ್ಡನ್ನು ಮೂರು ತಿಂಗಳಿಂದ ಬಾಕಿ ಉಳಿಸಿಕೊಂಡಿದ್ದಾರೆ. ಇನ್ನು ಗೃಹಲಕ್ಷ್ಮಿ ಹಣ ಸಹ ಆರು ತಿಂಗಳಿನಿಂದ ಬಾಕಿ ಉಳಿದಿದ್ದು, ಗೃಹಲಕ್ಷ್ಮಿಗಾಗಿ ಮಹಿಳೆಯರು ಕಾದು ಕಾದು ಸುಸ್ತಾಗಿದ್ದಾರೆ. ಸುಳ್ಳು ಹೇಳುವುದು ಹಾಗೂ ಜನರನ್ನು ಏಮಾರಿಸುವ ಗ್ಯಾರಂಟಿ ಮಾತ್ರ ಕಾಂಗ್ರೆಸ್ ಕರ್ನಾಟಕದಲ್ಲಿ ಸರಿಯಾಗಿ ಜಾರಿಗೊಳಿಸಿದ ಏಕೈಕ ಗ್ಯಾರಂಟಿಯಾಗಿದೆ.' ಅಂತಾ ಮೊದಲಿಗೆ ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿತ್ತು.

ಭಾರತ್ ಅಕ್ಕಿ ಬಗ್ಗೆ ಕಾಂಗ್ರೆಸ್...

ಹೀಗೆ ಬಿಜೆಪಿ ಮಾಡಿದ್ದ ಟ್ವೀಟ್‌ಗೆ ಉತ್ತರ ನೀಡಿರುವ ಕಾಂಗ್ರೆಸ್, 'ನಮ್ಮ ಗ್ಯಾರಂಟಿಗಳ ಯಶಸ್ಸನ್ನು ನೋಡಿ "ಗ್ಯಾರಂಟಿ" ಪದವನ್ನೇ ಕದ್ದಿರುವ ಬಿಜೆಪಿ ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುವುದನ್ನೇ "ಹಿಪಾಕ್ರಸಿ" ಎನ್ನುತ್ತಾರೆ! ಪ್ರತಿ ತಿಂಗಳೂ ರಾಜ್ಯದ 93% ರಷ್ಟು ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಸಂದಾಯವಾಗುತ್ತಿದೆ, ಅನ್ನಭಾಗ್ಯದ ಹಣವೂ ಜನರ ಖಾತೆಗೆ ಸೇರುತ್ತಿದೆ, ಆದರೆ ಅನ್ನಭಾಗ್ಯಕ್ಕೆ ಅಕ್ಕಿ ನೀಡದೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದ್ದೇಕೆ ಎನ್ನುವುದಕ್ಕೆ ಬಿಜೆಪಿ ಉತ್ತರಿಸಬೇಕು. ಅಂದಹಾಗೆ, ಉಚಿತವಾಗಿ ನೀಡಬೇಕಿದ್ದ ಪಡಿತರ ಅಕ್ಕಿಯನ್ನು ₹29ಕ್ಕೆ ಮಾರಾಟ ಮಾಡುವ "ಭಾರತ್ ಅಕ್ಕಿ" ಜನತೆಗೆ ಎಲ್ಲಿ ಸಿಗುತ್ತಿದೆ @BJP4Karnataka?' ಅಂತಾ ಕರ್ನಾಟಕ ಬಿಜೆಪಿಯ ಕಾಲೆಳೆದಿದೆ.

ಒಟ್ನಲ್ಲಿ ಲೋಕಸಭೆ ಚುನಾವಣೆ ಮುಗಿಯುವ ತನಕ ಈ ಗ್ಯಾರಂಟಿ ವಾರ್ ಮುಗಿಯುವಂತೆ ಕಾಣ್ತಾ ಇಲ್ಲ. ಅದರಲ್ಲೂ ಬಿಜೆಪಿ & ಕಾಂಗ್ರೆಸ್ ನಡುವೆ ಭಾರಿ ತಿಕ್ಕಾಟ ನಡೆಯುತ್ತಿದೆ. ಈ ಮೂಲಕ ಮತದಾರರ ಮನಸ್ಸು ಗೆಲ್ಲಲು ಎರಡೂ ಪಕ್ಷಗಳು ಪೈಪೋಟಿ ಆರಂಭಿಸಿವೆ. ಆದ್ರೆ ಇದೆಲ್ಲಾ ಮತದಾರರ ಮನಸ್ಸು ಗೆಲ್ಲುವಲ್ಲಿ ಎಷ್ಟು ವರ್ಕೌಟ್ ಆಗುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+