ಯಡಿಯೂರಪ್ಪನವರ ಆಪ್ತನ ಮನೆಯ ಮೇಲೆ ಐಟಿ ದಾಳಿ ವೇಳೆ ಸಿಕ್ಕ ಹಣ ಬಿಜೆಪಿಗೆ ಸಂಬಂಧಿಸಿದ್ದೇ?
ಬೆಂಗಳೂರು, ಅಕ್ಟೋಬರ್ 14: ಕಾಂಗ್ರೆಸ್ ಮಾಜಿ ಕಾರ್ಪೋರೇಟರ್ ಅಶ್ವಥಮ್ಮ ಮತ್ತು ಗುತ್ತಿಗೆದಾರ ಅಂಬಿಕಾಪತಿ ಮನೆ ಮೇಲೆ ಐಟಿ ದಾಳಿ ನಡೆದು ಬರೋಬ್ಬರಿ 42 ಕೋಟಿ ಹಣ ಪತ್ತೆಯಾಗಿದ್ದು, ಈ ಕುರಿತು ಆಡಳಿತರೂಢ ಕಾಂಗ್ರೆಸ್ ಹಾಗೂ ರಾಜ್ಯ ಬಿಜೆಪಿ ನಡುವೆ ಟ್ವೀಟ್ ವಾರ್ ಮುಂದುವರೆದಿದೆ.
42 ಕೋಟಿ ಹಣ ಪತ್ತೆಯಾದ ಹಿನ್ನಲೆ ಇದು, ಪಂಚರಾಜ್ಯಗಳ ಚುನಾವಣೆಗೆ ಬೆಂಗಳೂರಿನಿಂದ ಹಣ ಹೋಗುತ್ತಿದೆ ಎಂದು ರಾಜ್ಯ ಬಿಜೆಪಿ ನಾಯಕರು ಆರೋಪ ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಅಲ್ಲದೇ ಸಿಕ್ಕಿರುವ ಹಣ ಕಮಿಷನ್ ಹಣ ಎಂದು ಆರೋಪಿಸಿದೆ.

ಇನ್ನೂ ರಾಜ್ಯ ಬಿಜೆಪಿ ಆರೋಪಕ್ಕೆ ರಾಜ್ಯ ಕಾಂಗ್ರೆಸ್ ಪ್ರತಿದಾಳಿ ನಡೆಸಿದ್ದು, ಬೆಂಗಳೂರಿನಲ್ಲಿ ನಡೆದ ಐಟಿ ದಾಳಿಯ ಬಗ್ಗೆ ಬಿಜೆಪಿ, ಜೆಡಿಎಸ್ ನವರೇ ತನಿಖಾಧಿಕಾರಿಗಳು, ಅವರೇ ನ್ಯಾಯಾಧೀಶರು, ಅವರದ್ದೇ ತೀರ್ಪು! ಯಡಿಯೂರಪ್ಪನವರ ಆಪ್ತನ ಮನೆಯ ಮೇಲೆ ಹಿಂದೆ ಐಟಿ ದಾಳಿ ನಡೆದಿತ್ತು, ಆಗ ಸಿಕ್ಕ ಹಣ ಬಿಜೆಪಿಗೆ ಸಂಬಂಧಿಸಿದ್ದೇ? ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ.
ಚಿಲುಮೆ ಪ್ರಕರಣದಲ್ಲಿ ಮಾಜಿ ಸಚಿವ ಡಾ.ಸಿ ಎನ್ ಅಶ್ವಥ್ ನಾರಾಯಣ್ ಅವರ ಲೆಟರ್ ಹೆಡ್ ಸಿಕ್ಕಿತ್ತು, ಆದರೆ ಅವರಿಗೂ ಅದಕ್ಕೂ ಸಂಬಂಧವಿಲ್ಲವೆಂದು ವಾಧಿಸಿದ್ದರು. ಗುತ್ತಿಗೆದಾರನ ಮೇಲಿನ ಐಟಿ ದಾಳಿಯಲ್ಲಿ ಸಿಕ್ಕ ಹಣಕ್ಕೆ ಮಾತ್ರ ಯಾವುದೇ ಸಂಬಂಧವಿಲ್ಲದಿದ್ದರೂ, ಯಾವುದೇ ಸಾಕ್ಷಿ ಇಲ್ಲದಿದ್ದರೂ ಕಾಂಗ್ರೆಸ್ ಹೊಣೆಯಾಗುತ್ತದೆ. ಇದು ಬಿಜೆಪಿಯವರ ಲಾಜಿಕ್ ಎಂದು ಕಾಂಗ್ರೆಸ್ ಹೇಳಿದೆ.
ಇನ್ನೂ 42 ಕೋಟಿ ಹಣ ಪತ್ತೆ ಕುರಿತು ರಾಜ್ಯ ಬಿಜೆಪಿ ಕಿಡಿಕಾರಿದ್ದು, ಹೈಕಮಾಂಡ್ ಪಾಲಿನ ಎಟಿಎಂ ಆಗಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಬಗೆಬಗೆದು ದೋಚುತ್ತಿದೆ. ಪಂಚ ರಾಜ್ಯ ಚುನಾವಣೆಗಳಿಗೆ ಹಣ ಒದಗಿಸುವ ಗುತ್ತಿಗೆ ಪಡೆದ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರಿಬ್ಬರೂ ಹೈಕಮಾಂಡ್ ಮೆಚ್ಚಿಸಲು ಭ್ರಷ್ಟಾಚಾರದಲ್ಲಿ ಮಿಂದೇಳುತ್ತಿದ್ದಾರೆ. ಬಿಜೆಪಿ ಆಡಳಿತದಲ್ಲಿ ನ್ಯಾವೀನ್ಯತಾ ಸೂಚ್ಯಂಕದಲ್ಲಿ ನಂಬರ್ 1 ಆಗಿದ್ದ ರಾಜ್ಯ, ಈಗ ಭ್ರಷ್ಟಾಚಾರ ಮಾಡುವುದರಲ್ಲಿ ಮತ್ತು ಭ್ರಷ್ಟರನ್ನು ರಕ್ಷಿಸುವ ನವೀನ ಮಾದರಿಯಲ್ಲಿ ನಂಬರ್ 1 ಆಗಿದೆ ಎಂದು ಬಿಜೆಪಿ ಹೇಳಿದೆಸ.
ಬೆಂಗಳೂರಿನಲ್ಲಿ ನಡೆದ ಐಟಿ ದಾಳಿಯ ಬಗ್ಗೆ ಬಿಜೆಪಿ, ಜೆಡಿಎಸ್ ನವರೇ ತನಿಖಾಧಿಕಾರಿಗಳು, ಅವರೇ ನ್ಯಾಯಾಧೀಶರು, ಅವರದ್ದೇ ತೀರ್ಪು!!
— Karnataka Congress (@INCKarnataka) October 14, 2023
ಚಿಲುಮೆ ಪ್ರಕರಣದಲ್ಲಿ @drashwathcn ಅವರ ಲೆಟರ್ ಹೆಡ್ ಸಿಕ್ಕಿತ್ತು, ಆದರೆ ಅವರಿಗೂ ಅದಕ್ಕೂ ಸಂಬಂಧವಿಲ್ಲವೆಂದು ವಾಧಿಸಿದ್ದರು.
ಗುತ್ತಿಗೆದಾರನ ಮೇಲಿನ ಐಟಿ ದಾಳಿಯಲ್ಲಿ ಸಿಕ್ಕ ಹಣಕ್ಕೆ ಮಾತ್ರ ಯಾವುದೇ…
ಕರ್ನಾಟಕವನ್ನು ಸಂಪೂರ್ಣ ಅಂಧಕಾರದಲ್ಲಿರಿಸಿರುವ ಕರ್ನಾಟಕ ಕಾಂಗ್ರೆಸ್, ರಾಜ್ಯದ ಜನತೆಯ ಶ್ರಮದ ತೆರಿಗೆ ಹಣವನ್ನು, 80% ಕಮಿಷನ್ ರೂಪದಲ್ಲಿ ವಸೂಲಿ ಮಾಡಿ, ಪಂಚ ರಾಜ್ಯಗಳ ಚುನಾವಣೆಗೆ ಫಂಡಿಂಗ್ ಮಾಡುತ್ತಿದೆ. ಇದು ಕಾಂಗ್ರೆಸ್‌ನ ಅಸಲಿ ಕರ್ನಾಟಕ ಮಾಡೆಲ್. ಇದಕ್ಕೆ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷನ ಮನೆಯಲ್ಲಿ ದೊರೆತ ₹42 ಕೋಟಿ ಹಣವೇ ಪ್ರಮುಖ ಸಾಕ್ಷಿ.
ರಾಜ್ಯವನ್ನು ಹಾಡುಹಗಲೇ ಈ ಪರಿ ಲೂಟಿ ಮಾಡುತ್ತಿರುವ ಈ ನಾಡದ್ರೋಹಿಗಳು, ಕರ್ನಾಟಕವನ್ನು ದಿವಾಳಿಯತ್ತ ಕೊಂಡೊಯ್ಯುವುದು ಗ್ಯಾರಂಟಿ ಎಂದು ಕುಟುಕಿದೆ.
ಇಂದು ಕರ್ನಾಟಕ ಕಾಂಗ್ರೆಸ್ ಕೃಪಾಪೋಷಿತ ಗುತ್ತಿಗೆದಾರರ ಮನೆ ಮೇಲೆ ನಡೆದ ಐಟಿ ದಾಳಿ ವೇಳೆ ಸಿಕ್ಕ ಕೋಟಿ ಕೋಟಿ ಹಣ ತೃಣವಷ್ಟೇ..! ಎಟಿಎಂ ಸರ್ಕಾರ ಗುತ್ತಿಗೆದಾರರ ಮೂಲಕ ಕಲೆಕ್ಷನ್ ಮಾಡಿಸಿ ಪಂಚ ರಾಜ್ಯಗಳ ಚುನಾವಣೆಗೆ ಫಂಡಿಂಗ್ ಮಾಡಲು ಹೋಗಿ ಸಿಕ್ಕಿ ಬಿದ್ದಿದೆ. ಇನ್ನು ಕಾಂಗ್ರೆಸ್ ಕೃಪಾಕಟಾಕ್ಷದಲ್ಲಿರುವ ಕೋಟಿಯ ಕುಳಗಳು ಶೀಘ್ರದಲ್ಲೇ ಹೊರ ಬರಲಿರುವುದು ನಿಶ್ಚಿತ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.











Click it and Unblock the Notifications