‘ಅಧಿಕಾರವೆಂದರೆ ಲೂಟಿಗೆ ಸಿಗುವ ಅವಕಾಶ ಎಂದು ತಿಳಿದಿರುವ ಬಿಜೆಪಿಗೆ..’

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 6 ಕಳೆದಿರಬಹುದು ಅಷ್ಟೇ, ಇದೇ 6 ತಿಂಗಳಲ್ಲಿ ಕಾಂಗ್ರೆಸ್ & ಬಿಜೆಪಿ ನಾಯಕರು ಲಕ್ಷಾಂತರ ಆರೋಪಗಳನ್ನು ಒಬ್ಬರ ಮೇಲೆ ಮತ್ತೊಬ್ಬರಿ ಹೊರಿಸಿದ್ದಾರೆ. ಅದ್ರಲ್ಲೂ ನಿನ್ನೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ 'ಜನತಾ ದರ್ಶನ' ಕಾರ್ಯಕ್ರಮದ ಬಗ್ಗೆ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದರು. ಹೀಗೆ ಬಿಜೆಪಿ ನಾಯಕರು ಮಾಡಿದ್ದ ಆರೋಪಕ್ಕೆ ಕಾಂಗ್ರೆಸ್ ವಿಡಿಯೋ ಹಾಕಿ ಉತ್ತರ ಕೊಟ್ಟಿದೆ!

ಹೌದು, ಕರ್ನಾಟಕದಲ್ಲಿ ಬಿಜೆಪಿ & ಕಾಂಗ್ರೆಸ್ ನಡುವೆ ಯಾವ ವಿಚಾರಕ್ಕೆ ಕಿತ್ತಾಟವು ಶುರು ಆಗಿಲ್ಲ ಹೇಳಿ? ಸಣ್ಣಪುಟ್ಟ ವಿಚಾರಕ್ಕೂ ಇಬ್ಬರ ಮಧ್ಯೆ ಕಿಚ್ಚು ಹೊತ್ತಿಕೊಳ್ಳುತ್ತೆ. ಅದ್ರಲ್ಲೂ ನಿನ್ನೆ ನಡೆದಿದ್ದ 'ಜನತಾ ದರ್ಶನ' ಕಾರ್ಯಕ್ರಮದ ಕುರಿತು ಕಿತ್ತಾಟ ಇನ್ನು ಜೋರಾಗಿತ್ತು. ಒಂದ್ಕಡೆ ಕಾಂಗ್ರೆಸ್ ನಾಯಕರು ತಮ್ಮ ಸರ್ಕಾರದ ಈ ಕಾರ್ಯಕ್ರಮವನ್ನ ಮೆಚ್ಚಿಕೊಂಡರೆ, ಬಿಜೆಪಿ ನಾಯಕರು ನಿನ್ನೆಯ 'ಜನತಾ ದರ್ಶನ' ಕಾರ್ಯಕ್ರಮವನ್ನು ನಾಟಕ ಅಂತ ಕರೆದು ಆರೋಪಿಸಿದ್ದರು. ಈ ಆರೋಪಗಳಿಗೆ ಇದೀಗ ಕರ್ನಾಟಕ ಕಾಂಗ್ರೆಸ್ 'ವಿಡಿಯೋ' ಮೂಲಕ ಉತ್ತರ ನೀಡಿದೆ.

Karnataka Congress Gives Answer To BJP Leaders Allegations Over Janata Darshan

'ಅಧಿಕಾರವೆಂದರೆ ಲೂಟಿಗೆ ಸಿಗುವ ಅವಕಾಶ..'

ಹೌದು, ಬಿಜೆಪಿ ನಾಯಕರು 'ಜನತಾ ದರ್ಶನ'ದ ಬಗ್ಗೆ ನಿನ್ನೆ ಮಾಡಿದ್ದ ಆರೋಪಕ್ಕೆ ಈಗ ಕಾಂಗ್ರೆಸ್ ಟ್ವೀಟ್ ಮೂಲಕ ಉತ್ತರ ನೀಡಿದೆ. ಇದರ ಜೊತೆಗೆ ವಿಡಿಯೋ ಒಂದನ್ನ ಕೂಡ ಪೋಸ್ಟ್ ಮಾಡಿದೆ. 'ಅಧಿಕಾರವೆಂದರೆ ಲೂಟಿಗೆ ಸಿಗುವ ಅವಕಾಶ ಎಂದು ತಿಳಿದಿರುವ @BJP4Karnataka ಗೆ ಅಧಿಕಾರವೆಂದರೆ ಜನರ ನೋವಿಗೆ ಹೆಗಲಾಗುವ ಹೊಣೆಗಾರಿಕೆ ಎನ್ನುವುದು ತಿಳಿದಿಲ್ಲ. @RAshokaBJP ಅವರೇ, ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಿ ಆಪರೇಷನ್ ಕಮಲದ ಮೂಲಕ ಅಧಿಕಾರ ಪಡೆದ ತಮ್ಮ ಮಾಜಿ ಸಿಎಂ ಹೇಗೆ ವರ್ತಿಸಿದ್ದರು ಎಂಬುದನ್ನು ಕಣ್ತುಂಬಿಕೊಳ್ಳಿ.' ಎಂದು ಕರ್ನಾಟಕ ಕಾಂಗ್ರೆಸ್ ಈಗ ಬಿಜೆಪಿ ನಾಯಕರಿಗೆ ಸವಾಲು ಹಾಕಿದೆ.

ಹಾಗೇ ತನ್ನ ಪ್ರತಿಕ್ರಿಯೆಯನ್ನು ಇದೇ ಟ್ವೀಟ್‌ನಲ್ಲಿ ಮುಂದುವರಿಸಿ, 'ನಾವು ಜನರಿಂದ ಅಧಿಕಾರಕ್ಕೆ ಬಂದಿದ್ದೇವೆ, ಜನರೇ ನಮ್ಮ ಮಾಲೀಕರು, ಜನಸೇವೆಯೇ ನಮ್ಮ ಕರ್ತವ್ಯ. ಬೇಕಿದ್ದರೆ ಆರ್ ಅಶೋಕ್ ಅವರೂ ಜನತಾ ದರ್ಶನಕ್ಕೆ ಬಂದು ತಮ್ಮ ಪಕ್ಷದೊಳಗಿನ ಕಿರುಕುಳದ ನೋವನ್ನು ಹೇಳಿಕೊಳ್ಳಬಹುದು! ನಮ್ಮ ಸರ್ಕಾರ ಸರ್ವರ ಹಿತ ಬಯಸುತ್ತದೆ!' ಎಂದಿದೆ. ಈ ಮೂಲಕ 'ಜನತಾ ದರ್ಶನ' ಕಾರ್ಯಕ್ರಮದ ಬಗ್ಗೆ ಬಿಜೆಪಿ ನಾಯಕರು ಮಾಡಿದ್ದ ಆರೋಪಕ್ಕೆ ಕಾಂಗ್ರೆಸ್ ಇಂದು ಟ್ವೀಟ್ ಮೂಲಕ ಉತ್ತರಿಸಿದೆ.

ಎಷ್ಟು ಅರ್ಜಿ ಬಂದಿದ್ದವು ಗೊತ್ತಾ?

ಜನಸ್ಪಂದನ ಕಾರ್ಯಕ್ರಮಕ್ಕೆ 4-5 ಸಾವಿರ ಜನ ಅಹವಾಲುಗಳ ಜೊತೆಗೆ ಆಗಮಿಸಿದ್ದರು. ಜನ ಸರ್ಕಾರದ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸುವ ಪ್ರಯತ್ನ ಮಾಡಲಾಗುತ್ತೆ, ಎಂದು ನಿನ್ನೆ ಖುದ್ದು ಸಿಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ಮಾಹಿತಿ ನೀಡಿದ್ದರು. ಹಾಗೆ ಬರೋಬ್ಬರಿ 3,500 ಮನವಿ ಸ್ವೀಕೃತವಾಗಿದ್ದು ಸ್ವೀಕೃತವಾದ ಅರ್ಜಿಗಳ ಬಗ್ಗೆ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆಂದು ಸಿದ್ದರಾಮಯ್ಯ ಮಾಹಿತಿಯನ್ನ ನೀಡಿದ್ರು. ಇದೀಗ ಬಿಜೆಪಿ ನಾಯಕರ ಆರೋಪಕ್ಕೆ ಕಾಂಗ್ರೆಸ್ ಪ್ರತ್ಯಾರೋಪ ಮಾಡಿದೆ. ಈ ಬಗ್ಗೆ ಬಿಜೆಪಿ ಹೇಗೆ ಪ್ರತಿಕ್ರಿಯೆ ನೀಡುತ್ತೆ ಅಂತಾ ಕಾದು ನೋಡಬೇಕು. ಈ ಮೂಲಕ ಈಗ ಬಿಜೆಪಿ & ಕಾಂಗ್ರೆಸ್ ನಡುವೆ ಕಿತ್ತಾಟಕ್ಕೆ ಹೊಸ ವೇದಿಕೆ ಸಿಕ್ಕಿದೆ, ಅಂತಿದ್ದಾರೆ ಸೋಷಿಯಲ್ ಮೀಡಿಯಾ ಬಳಕೆದಾರರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+