ಕಾಂಗ್ರೆಸ್ ನಲ್ಲಿ ಯಾರಿಗೆಲ್ಲಾ ನಿಗಮ ಮಂಡಳಿ ಸ್ಥಾನ? ಇಲ್ಲಿದೆ ಸಂಭವನೀಯ ಪಟ್ಟಿ!
ಬೆಂಗಳೂರು, ನವೆಂಬರ್ 01: 2024 ರ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ ಕನಿಷ್ಠ 20 ಕ್ಷೇತ್ರಗಳನ್ನ ಗೆಲ್ಲಲು ಟಾರ್ಗೆಟ್ ಹಾಕಿಕೊಂಡಿರುವ ಕಾಂಗ್ರೆಸ್ ನಾಯಕರಿಗೆ ಸದ್ಯ ಕೈ ಪಾಳಯದಲ್ಲಿ ಹೊತ್ತಿಕೊಂಡ ಅಸಮಾಧಾನದ ಬೆಂಕಿಯನ್ನ ಶಮನಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮುಂದಾಗಿದ್ದಾರೆ.
ಹೌದು, ಲೋಕಸಭಾ ಚುನಾವಣೆ ದೃಷ್ಠಿಯಿಂದಾಗಿ ನಿಗಮ ಮಂಡಳಿ ನೇಮಕಕ್ಕೆ ಮುಂದಾಗಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದ ನಾಯಕರಿಗೆ ನಿಗಮ ಮಂಡಳಿ ಸ್ಥಾನಮಾನಗಳನ್ನು ನೀಡುವ ಮೂಲಕ ಶಾಸಕರನ್ನು ಸಮಾಧಾನ ಪಡಿಸುವ ತಂತ್ರಯನ್ನ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೆಣೆಯಲಾಗಿದೆ.

ಸಿದ್ದರಾಮಯ್ಯ ಸರ್ಕಾರದ ಸಂಪುಟ ರಚನೆಯ ವೇಳೆ ಹಿರಿತನಕ್ಕೆ ಬೆಲೆ ಕೊಡದಿರುವುದಕ್ಕೆ ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನ ಭುಗಿಲೆದ್ದು, ಇನ್ನೂ ಶಮನವಾಗಿಲ್ಲ. ಇದೆಲ್ಲಕ್ಕೂ ಬ್ರೇಕ್ ಹಾಕಲೆಂದೇ ಕಾಂಗ್ರೆಸ್ ಪಾಳಯದ ನಾಯಕರು ಕೊನೆಗೂ ನಿಗಮ ಮಂಡಳಿ ನೇಮಕಾತಿಗೆ ಮುಂದಾಗಿದ್ದಾರೆ. ದಿನೇ ದಿನೇ ಪಕ್ಷದಲ್ಲಿ ಹೆಚ್ಚಾಗುತ್ತಿರುವ ಅಸಮಾಧಾನವನ್ನ ಶಮನಗೊಳಿಸಬೇಕು ಇಲ್ಲದಿದ್ದರೇ ವಿಪಕ್ಷಗಳ ಟೀಕೆಯಿಂದ ಪಕ್ಷ ಹಾಗೂ ಸರ್ಕಾರಕ್ಕೆ ಸಾಕಷ್ಟು ಮುಜುಗರವಾಗಲಿದೆ ಎಂಬುದು ಕೈ ನಾಯಕರ ಲೆಕ್ಕಾಚಾರವಾಗಿದೆ.
ಈಗಾಗಲೇ ಸಚಿವರು ಸ್ಪಂದಿಸುತ್ತಿಲ್ಲ ಎಂದು ಶಾಸಕರು ಪತ್ರದ ಮೂಲಕ ಸಿದ್ದರಾಮಯ್ಯ ಅವರ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಶಾಸಕರ ಕೋಪಕ್ಕೆ ಮದ್ದರೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸುದೀರ್ಘ ಸಭೆ ನಡೆಸಿದ್ದು, ಮೊದಲ ಹಂತದಲ್ಲಿ 25 ನಿಗಮ ಮಂಡಳಿ ಭರ್ತಿಗೆ ನಿರ್ಧಾರ ಮಾಡಲಾಗಿದೆ. 3 ಕ್ಕಿಂತ ಹೆಚ್ಚು ಬಾರಿ ಗೆದ್ದ ಶಾಸಕರಿಗೆ ಮಣೆ ಹಾಕಲು ತೀರ್ಮಾನ ಮಾಡಲಾಗಿದೆ. ಹಾಗಾದ್ರೆ ಯಾರ್ಯಾರಿಗೆ ನಿಗಮ ಮಂಡಳಿ ಪಟ್ಟ ಸಿಗಲಿದೆ ಗೊತ್ತಾ? ಇಲ್ಲಿದೆ ನೋಡಿ

ಸಿಎಂ, ಡಿಸಿಎಂ ಸಿದ್ಧಪಡಿಸಿದ ನಿಗಮ ಮಂಡಳಿ ಪಟ್ಟಿ ಲಭ್ಯ?
ಬಸವರಾಜ ರಾಯರೆಡ್ಡಿ
ನರೇಂದ್ರಸ್ವಾಮಿ
ವಿನಯ್ ಕುಲಕರ್ಣಿ
ವಿಜಯಾನಂದ ಕಾಶಪ್ಪನವರ್
ಬಂಗಾರಪೇಟೆ ನಾರಾಯಣಸ್ವಾಮಿ
ಗಣೇಶ್ ಹುಕ್ಕೇರಿ
ಕೋಲಾರ ನಂಜೇಗೌಡ
ಬಿ.ಕೆ.ಸಂಗಮೇಶ್
B.R.ಪಾಟೀಲ್
ಎಂ.ವೈ.ಪಾಟೀಲ್
ಬಿ.ಜಿ.ಗೋವಿಂದಪ್ಪ
ರಾಘವೇಂದ್ರ ಹಿಟ್ನಾಳ್
ಪ್ರಸಾದ್ ಅಬ್ಬಯ್ಯ
ಎ.ಆರ್.ಕೃಷ್ಣಮೂರ್ತಿ
ಶಿವಲಿಂಗೇಗೌಡ
ರೂಪ ಶಶಿಧರ್
ರಾಜೇಗೌಡ
ರಘುಮೂರ್ತಿ ಅನಿಲ್ ಚಿಕ್ಕಮಾದು
ಈಗಾಗಲೇ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಸಿದ್ದಪಡಿಸಿರುವ ಪಟ್ಟಿಯಲ್ಲಿ ಹೈಕಮಾಂಡ್ ಕೆಲವು ಸೂಚನೆಗಳನ್ನ ನೀಡಿದ್ರೆ ಕೆಲ ಬದಲಾವಣೆಗಳಾಗುವ ಸಾಧ್ಯತೆಯಿದೆ. ಇನ್ನೂ ನಿಗಮ ಮಂಡಳಿ ನೇಮಕಕ್ಕೆ ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಕೂಡ ಗ್ನೀನ್ ಸಿಗ್ನಲ್ ನೀಡಿದ್ದು, ಕೆಲ ಷರತ್ತುಗಳನ್ನ ಹಾಕಿದೆ. ಈಗ ನಿಗಮ ಮಂಡಳಿಗೆ ನೇಮಕ ಆಗುವ ಶಾಸಕರು ಮುಂದೆ ಸಚಿವ ಸ್ಥಾನ ಕೇಳುವಂತಿಲ್ಲ. ಅಂತವರನ್ನ ಮುಂದೆ ಸಚಿವ ಸಂಪುಟ ಪುನಾರಚನೆ ಆದಾಗ ಪರಿಗಣಿಸುವಿದಿಲ್ಲ ಎಂದು ಹೈಕಮಾಂಡ್ ಷರತ್ತು ಹಾಕಿದೆ ಎನ್ನಲಾಗಿದೆ. ಅಲ್ಲದೇ ಈಗ ನಿಗಮಮಂಡಳಿಗೆ ಆಯ್ಕೆಯಾಗುವ ಕಾರ್ಯಕರ್ತರನ್ನ ಎಂಎಲ್‌ಸಿ ಆಯ್ಕೆ ವೇಳೆ ಪರಿಗಣಿಸುವುದಿಲ್ಲ ಎಂದು ಷರತ್ತು ಹಾಕಿದೆ ಎಂದು ಹೇಳಲಾಗಿದೆ.












Click it and Unblock the Notifications