‘ಗೃಹಲಕ್ಷ್ಮಿ ಯೋಜನೆಯಡಿ 86% ಮಹಿಳೆಯರು ನೋಂದಣಿ ಮಾಡಿಸಿ ₹2000...’
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲು ಕಾರಣವಾದ ಅಂಶದಲ್ಲಿ, ಗ್ಯಾರಂಟಿ ವಾಗ್ದಾನ ಪ್ರಮುಖ ಪಾತ್ರ ಬೀರಿದೆ. ಅದರಲ್ಲೂ 'ಗೃಹಲಕ್ಷ್ಮಿ ಯೋಜನೆ' ಅಡಿಯಲ್ಲಿ, ರಾಜ್ಯದ ಪ್ರತಿ ಕುಟುಂಬದ ಯಜಮಾನಿಗೆ, 2000 ರೂಪಾಯಿ ಕೊಡ್ತಿದೆ ಸಿದ್ದರಾಮಯ್ಯ ಅವರ ಸರ್ಕಾರ. ಆದರೆ ಇದೇ ವಿಚಾರ ಇಟ್ಟುಕೊಂಡು ಬಿಜೆಪಿ ಗಂಭೀರ ಆರೋಪ ಮಾಡಿರುವಾಗ ಈ ಬಗ್ಗೆ ಕಾಂಗ್ರೆಸ್ ಕೂಡ ಉತ್ತರ ನೀಡಿದೆ.
ಹೌದು, 'ಗೃಹಲಕ್ಷ್ಮಿ ಯೋಜನೆ' ವಿಚಾರದಲ್ಲಿ ಒಂದಷ್ಟು ತಾಂತ್ರಿಕ ಸಮಸ್ಯೆ ಎದುರಾಗಿದೆ. ಹೀಗಾಗಿ ಕೆಲ ಕಡೆ ಗೊಂದಲವಿದ್ದು ಆ ಗೊಂದಲವನ್ನ ಸರಿಪಡಿಸುತ್ತೇವೆ ಅಂತಾ ಕಾಂಗ್ರೆಸ್ ಹೇಳುತ್ತಿದೆ. ಆದರೂ ಬಿಜೆಪಿ ಇದೇ ವಿಚಾರ ಹಿಡಿದುಕೊಂಡು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದೆ ಎಂಬ ಆರೋಪವನ್ನ ಕಾಂಗ್ರೆಸ್ ಮಾಡುತ್ತಿದೆ. ಹೀಗಿದ್ದಾಗ ಕಮಲ ಪಾಳಯಕ್ಕೆ ತಿರುಗೇಟು ಕೊಟ್ಟಿದೆ ಕರ್ನಾಟಕ ಕಾಂಗ್ರೆಸ್. ಹಾಗೇ ಗೃಹಲಕ್ಷ್ಮಿ ಯೋಜನೆಗಾಗಿ ನೋಂದಣಿ ಮಾಡಿಸಿಕೊಂಡಿರುವವರ ಲೆಕ್ಕ ಕೂಡ ಹೇಳಿದೆ.

'ಗೃಹಲಕ್ಷ್ಮಿ ಯೋಜನೆಯಡಿ 86% ಮಹಿಳೆಯರು...'
ಬಿಜೆಪಿ ಆರೋಪಕ್ಕೆ ಉತ್ತರ ನೀಡಿರುವ ಕಾಂಗ್ರೆಸ್, 'ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ 86% ಮಹಿಳೆಯರು ಈಗಾಗಲೆ ನೋಂದಣಿ ಮಾಡಿಸಿ ₹2000 ಹಣ ಪಡೆಯುತ್ತಿದ್ದಾರೆ. ಇನ್ನುಳಿದವರ ಬ್ಯಾಂಕ್ ಖಾತೆಗಳ ತಾಂತ್ರಿಕ ಸಮಸ್ಯೆಯನ್ನ ನಿವಾರಿಸಲು ಸರ್ಕಾರ ಕ್ರಮ ಕೈಗೊಂಡಿದೆ. ನಮ್ಮ ಸರ್ಕಾರದ ನೆರವಿನಿಂದ ಗೃಹಲಕ್ಷ್ಮಿಯರ ಮನೆಯಲ್ಲಿ ವಿಜಯದಶಮಿ ಸಂಭ್ರಮ ಕಳೆಗಟ್ಟಿದೆ. ಹೀನಾಯ ಸೋಲಿನಿಂದ ಕಾಣೆಯಾಗಿರುವುದು ಬಿಜೆಪಿಯವರ ನಿದ್ರೆ, ಸಂತೋಷವೇ ಹೊರತು ನಮ್ಮ ಸಚಿವರಲ್ಲ, ಅಂದಹಾಗೆ @BJP4Karnataka ಮುಖಂಡರ, ಕಾರ್ಯಕರ್ತರ ಮನೆಗೂ ಗೃಹಲಕ್ಷ್ಮಿ ಹಣ ಯಾವುದೇ ತೊಂದರೆ ಇಲ್ಲದೆ ತಲುಪಿದೆಯಲ್ಲವೇ!' ಎಂದು ತಿರುಗೇಟನ್ನು ನೀಡಿದೆ ಕಾಂಗ್ರೆಸ್.
ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ 86% ಮಹಿಳೆಯರು ಈಗಾಗಲೇ ನೋಂದಣಿ ಮಾಡಿಸಿ ₹2000 ಹಣ ಪಡೆಯುತ್ತಿದ್ದಾರೆ.
— Karnataka Congress (@INCKarnataka) October 23, 2023
ಇನ್ನುಳಿದವರ ಬ್ಯಾಂಕ್ ಖಾತೆಗಳ ತಾಂತ್ರಿಕ ಸಮಸ್ಯೆಯನ್ನು ನಿವಾರಿಸಲು ಸರ್ಕಾರ ಕ್ರಮ ಕೈಗೊಂಡಿದೆ.
ನಮ್ಮ ಸರ್ಕಾರದ ನೆರವಿನಿಂದ ಗೃಹಲಕ್ಷ್ಮಿಯರ ಮನೆಯಲ್ಲಿ ವಿಜಯದಶಮಿ ಸಂಭ್ರಮದಿಂದ ಕಳೆಗಟ್ಟಿದೆ.
ಹೀನಾಯ ಸೋಲಿನಿಂದ ಕಾಣೆಯಾಗಿರುವುದು… pic.twitter.com/StLUlT433o
'ಗೃಹಲಕ್ಷ್ಮಿಯರ ಕಿವಿ ಮೇಲೆ ಹೂವಿಟ್ಟು...'
ಅಂದಹಾಗೆ ಕಾಂಗ್ರೆಸ್ ಈಗ ಉತ್ತರ ನೀಡಿರುವುದು ಬಿಜೆಪಿ ಮಾಡಿದ್ದ ಟ್ವೀಟ್‌ಗೆ. ಹಾಗಾದರೆ ಬಿಜೆಪಿ ಮಾಡಿದ್ದ ಟ್ವೀಟ್‌ನಲ್ಲಿ ಏನ್ ಇತ್ತು? ಯಾವ ಕಾರಣಕ್ಕೆ ಕಾಂಗ್ರೆಸ್ ಈಗ ತಿರುಗೇಟು ಕೊಟ್ಟಿದೆ? ಅಂದ್ರೆ ಬಿಜೆಪಿ ಒಂದು ಟ್ವೀಟ್ ಮಾಡಿ ಕಾಂಗ್ರೆಸ್ ಕಾಲೆಳದಿತ್ತು, 'ಡಿಯರ್ @INCKarnataka, ಗೃಹಲಕ್ಷ್ಮಿಯರ ಕಿವಿ ಮೇಲೆ ಹೂವಿಟ್ಟು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕಾಣೆಯಾಗಿದ್ದಾರೆ. ದಯವಿಟ್ಟು ಅವರನ್ನು ಹುಡುಕಿಕೊಡಿ.' ಎಂದಿತ್ತು.
ಡಿಯರ್ @INCKarnataka,
— BJP Karnataka (@BJP4Karnataka) October 22, 2023
ಗೃಹಲಕ್ಷ್ಮಿಯರ ಕಿವಿ ಮೇಲೆ ಹೂವಿಟ್ಟು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕಾಣೆಯಾಗಿದ್ದಾರೆ.
ದಯವಿಟ್ಟು ಅವರನ್ನು ಹುಡುಕಿಕೊಡಿ. pic.twitter.com/lSdH2MgnPg
ಒಟ್ನಲ್ಲಿ ಗ್ಯಾರಂಟಿ ಯೋಜನೆಗಳ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಭೀಕರ ತಿಕ್ಕಾಟ ನಡೆಯುತ್ತಿದೆ. ಮುಂದೆ ಇದು ಎಲ್ಲಿಗೆ ಹೋಗಿ ಮುಟ್ಟುತ್ತೆ? ಅಸ್ತ್ರ & ಪ್ರತ್ಯಸ್ತ್ರಗಳಿಗೆ ಮತದಾರ ಪ್ರಭು ಯಾವ ರಿಸಲ್ಟ್ ಕೊಡ್ತಾನೆ? ಅನ್ನೋದನ್ನ ಕಾದು ನೋಡಬೇಕಿದೆ. ಆದರೆ ಎರಡೂ ಪಕ್ಷಗಳ ಈ ಸೋಷಿಯಲ್ ಮೀಡಿಯಾ ವಾರ್ ಮಾತ್ರ ಸೋಷಿಯಲ್ ಮೀಡಿಯಾ ಬಳಕೆದಾರರ ಗಮನ ಸೆಳೆಯುತ್ತಿರುವುದು ಸುಳ್ಳಲ್ಲ.












Click it and Unblock the Notifications