ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಕರ್ನಾಟಕ ಸಮುದಾಯ ಬಾನುಲಿ ಸಮ್ಮೇಳನ

ಪುತ್ತೂರು, ಜನವರಿ 09: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾಲೇಜಿನ ಕ್ಯಾಂಪಸಿನಲ್ಲಿ ಜನವರಿ 11ರಂದು ಅಖಿಲ ಕರ್ನಾಟಕ ಸಮುದಾಯ ಬಾನುಲಿ ಸಮ್ಮೇಳನವನ್ನು ಆಯೋಜಿಸಲಾಗಿದೆ. ಅಂದು ನಮ್ಮ ರೇಡಿಯೋ ಪಾಂಚಜನ್ಯ (90.8 F.M) ಕುರಿತ ಸಾಕ್ಷ್ಯಚಿತ್ರ ಕೂಡಾ ಪ್ರದರ್ಶನವಾಗಲಿದೆ.

ವಿವೇಕಾನಂದ ವಿದ್ಯಾವರ್ಧಕ ಸಂಘದ ಸಮುದಾಯದ ಬಾನುಲಿ 'ನಮ್ಮ ರೇಡಿಯೋ' ಪಾಂಚಜನ್ಯವನ್ನು ಜನವರಿ 12, 2017ರಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಾರ್ಪಣೆ ಮಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯ ಮೂರನೇ ಸಮುದಾಯ ರೇಡಿಯೋ ಕೇಂದ್ರವಾದ ಪಾಂಚಜನ್ಯಕ್ಕೆ 'ಇದು ಜೀವ ಜೀವದ ಸ್ವರ ಸಂಚಾರ' ಎಂಬ ಅಡಿಬರಹವಿದೆ. ಜನಸಾಮಾನ್ಯರಿಗೆ ವೇದಿಕೆ ಒದಗಿಸುವುದು ಈ ಕೇಂದ್ರದ ಮುಖ್ಯ ಉದ್ದೇಶ.

ಪಾಂಚಜನ್ಯದ ಕಂಪನಾಂಕಗಳು ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಮಡಿಕೇರಿ, ಕಾಸರಗೋಡು ತನಕ ತಲುಪಲಿದೆ.ವೆಬ್ ರೇಡಿಯೋ ಸಾಧ್ಯತೆಯನ್ನು ಈ ಬಾನುಲಿ ಕೇಂದ್ರ ಹೊಂದಿದೆ.

ಇಡೀ ದಿನ ನಡೆಯುವ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ ಎಂದು ರೇಡಿಯೋ ಪಾಂಚಜನ್ಯದ (90.8 FM) ಅಧ್ಯಕ್ಷ ಗೋಪಾಲಕೃಷ್ಣ ಕುಂಟಿನಿ ಮತ್ತು ಕಾರ್ಯದರ್ಶಿ ಶ್ರೀಕಾಂತ್ ಕೊಳತ್ತಾಯ ಒನ್ ಇಂಡಿಯ ಕನ್ನಡಕ್ಕೆ ಮಂಗಳವಾರ ತಿಳಿಸಿದರು. ಕಾರ್ಯಕ್ರಮದ ವಿವರಗಳು ಮುಂದಿವೆ...

ಸಮುದಾಯ ಬಾನುಲಿ ಕಾರ್ಯಕ್ರಮ ವಿವರ

ಸಮುದಾಯ ಬಾನುಲಿ ಕಾರ್ಯಕ್ರಮ ವಿವರ

ಕಾರ್ಯಕ್ರಮ ವಿವರ:
ಕಾರ್ಯಕ್ರಮದ ಹೆಸರು: ಅಖಿಲ ಕರ್ನಾಟಕ ಸಮುದಾಯ ಬಾನುಲಿ ಸಮ್ಮೇಳನ
ದಿನಾಂಕ : ಜನವರಿ 01, 2018, ಗುರುವಾರ
ಸಮಯ: ಬೆಳಗ್ಗೆ 10 ಗಂಟೆ
ಸ್ಥಳ: ಪ್ರಧಾನ ಕ್ರೀಡಾಂಗಣ, ವಿವೇಕಾನಂದ ವಿದ್ಯಾಸಂಸ್ಥೆ, ನೆಹರೂನಗರ, ಪುತ್ತೂರು.

ಚಿತ್ರದಲ್ಲಿ:'ನಮ್ಮ ರೇಡಿಯೋ' ಪಾಂಚಜನ್ಯವನ್ನು ಜನವರಿ 12, 2017ರಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಲೋಕಾರ್ಪಣೆ.

ವಿವೇಕಾನಂದ ವಿದ್ಯಾವರ್ಧಕ ಸಂಘ

ವಿವೇಕಾನಂದ ವಿದ್ಯಾವರ್ಧಕ ಸಂಘ

ಅಧ್ಯಕ್ಷತೆ: ಡಾ. ಪ್ರಭಾಕರ ಭಟ್ ಕಲ್ಲಡ್ಕ, ಅಧ್ಯಕ್ಷರು, ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು.
ಉದ್ಘಾಟನೆ: ಡಾ. ಪಿ.ಎಸ್ ಹರ್ಷ, ಐಪಿಎಸ್
-ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಸರ್ಕಾರ.
ಸಾಕ್ಷ್ಯ ಚಿತ್ರ ಅನಾವರಣ: ನಳೀನ್ ಕುಮಾರ್ ಕಟೀಲ್, ಸಂಸದರು, ಮಂಗಳೂರು ಲೋಕಸಭಾ ಕ್ಷೇತ್ರ
ವಿಶೇಷ ಅಭ್ಯಾಗತರು: ಟಿ.ಎನ್ ಸೀತಾರಾಮ್, ಸಿನಿಮಾ ನಿರ್ದೇಶಕರು
ರವಿ ಹೆಗಡೆ, ಪ್ರಧಾನ ಸಂಪಾದಕರು, ಕನ್ನಡ ಪ್ರಭ

ಸಮುದಾಯ ಬಾನುಲಿ- ಗೋಷ್ಠಿ-1

ಸಮುದಾಯ ಬಾನುಲಿ- ಗೋಷ್ಠಿ-1

ಸಮುದಾಯ ಬಾನುಲಿ, ನೆಲೆ -ಬೆಲೆ
ಸಮಯ: 12 ಗಂಟೆ
ಸಂಯೋಜನೆ : ಶ್ಯಾಮ ಭಟ್, ರೇಡಿಯೋ ಮಣಿಪಾಲ
ಭಾಗವಹಿಸುವವರು:
* ಡಾ. ಮೆಲ್ವಿನ್ ಪಿಂಟೋ, ರೇಡಿಯೋ ಸಾರಂಗ್, ಸಂತ ಅಲೋಶಿಯಸ್ ಕಾಲೇಜು, ಮಂಗಳೂರು
* ಶಿವಕುಮಾರ್, ರೇಡಿಯೋ ಜನಧ್ವನಿ, ಮೈಸೂರು.
ಚಿತ್ರದಲ್ಲಿ : ರೇಡಿಯೋ ಪಾಂಚಜನ್ಯ ಸ್ಟುಡಿಯೋದಲ್ಲಿ ಪತ್ರಕರ್ತ ಜೋಗಿ ಹಾಗೂ ಸಿಬ್ಬಂದಿಗಳು

ಗೋಷ್ಠಿ -2 ಮಾಧ್ಯಮ ಮಂಥನ

ಗೋಷ್ಠಿ -2 ಮಾಧ್ಯಮ ಮಂಥನ

ಸಮಯ: 2 ಗಂಟೆ
ಸಮನ್ವಯಕಾರರು: ಜೋಗಿ, ಪತ್ರಕರ್ತ, ಸಾಹಿತಿ
ಸಂವಾದಕರು:
* ರವಿ ಹೆಗಡೆ ಪತ್ರಕರ್ತರು (ಮುದ್ರಣ ಮಾಧ್ಯಮ)
* ಟಿ.ಎನ್ ಸೀತಾರಾಮ್, ನಿರ್ದೇಶಕರು (ಧಾರಾವಾಹಿ ಮಾಧ್ಯಮ)
* ಬಿ.ಎಸ್ ಲಿಂಗದೇವರು, ಸಿನಿಮಾ ನಿರ್ದೇಶಕರು ( ಸಿನಿಮಾ ಮಾಧ್ಯಮ)
* ಗೌರೀಶ್ ಅಕ್ಕಿ, ನಿರೂಪಕರು, ನಿರ್ದೇಶಕರು (ಟಿವಿ ಮಾಧ್ಯಮ)
* ಎಸ್. ಕೆ ಶಾಮಸುಂದರ, ಸಂಪಾದಕರು, ಒನ್ಇಂಡಿಯಾ ಕನ್ನಡ(ಸಾಮಾಜಿಕ ಜಾಲ ತಾಣಗಳು)
* ಪ್ರೊ. ಬೋನಂತಾಯ ಹರಿಶ್ಚಂದ್ರ ಭಟ್, ಹಿರಿಯ ಪತ್ರಕರ್ತರು (ಅಂದಿನ ಮಾಧ್ಯಮ)
* ಪಿ.ಬಿ, ಹರೀಶ್ ರೈ, ಪತ್ರಕರ್ತರು (ಇಂದಿನ ಮಾಧ್ಯಮ)
* ಎಸ್ ಉಷಾಲತಾ, ಸಹಾಯಕ ನಿರ್ದೇಶಕರು, ಆಕಾಶವಾಣಿ, ಮಂಗಳೂರು (ಆಕಾಶವಾಣಿ)
* ಪ್ರಸನ್ನ, ಆರ್ ಜೆ, ರೆಡ್ ಎಫ್ ಎಂ ಮಂಗಳೂರು (ಖಾಸಗಿ ರೇಡಿಯೋ)
* ವಾದಿರಾಜ್, ಚಿಂತಕರು, ಬೆಂಗಳೂರು
* ಪ್ರಿಯಾ ಎನ್, ಸಾರ್ವಜನಿಕ ಸಂಪರ್ಕಾಧಿಕಾರಿ, ಮಂಗಳೂರು ವಿಶ್ವವಿದ್ಯಾಲಯ (ಮಾಧ್ಯಮ ಮತ್ತು ಸಮಾಜ)

ಚಿತ್ರದಲ್ಲಿ : ರಾಮಕೃಷ್ಣ ಆಶ್ರಮದ ಗೌತಮಾನಂದ ಸ್ವಾಮೀಜಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+