ಹುಟ್ಟುಹಬ್ಬ ಆಚರಣೆ ಬೇಡ: ಸಿದ್ದರಾಮಯ್ಯ ಮನವಿ

ಬೆಂಗಳೂರು, ಆಗಸ್ಟ್, 12: ಪುತ್ರ ರಾಕೇಶ್ ಸಾವಿನ ನೋವಿನಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹುಟ್ಟುಹಬ್ಬವನ್ನು(ಶುಕ್ರವಾರ, ಆಗಸ್ಟ್ 12) ಆಚರಣೆ ಮಾಡಬೇಡಿ ಎಂದು ಅಭಿಮಾನಿಗಳು ಮತ್ತು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

'ರಾಕೇಶ್ ಸಾವಿನಿಂದ ನಾವಿನ್ನೂ ಹೊರಗೆ ಬಂದಿಲ್ಲ. ಇಂಥ ಸಂದರ್ಭದಲ್ಲಿ ಸಡಗರ ಸಂಭ್ರಮ ಕಾಣಿಸಿಕೊಳ್ಳಲು ಹೇಗೆ ಸಾಧ್ಯ? ಎಂದು ಮುಖ್ಯಮಂತ್ರಿ ಪ್ರಶ್ನೆ ಮಾಡಿದ್ದಾರೆ.[ಕಂಬನಿ ಮಿಡಿಯುತ್ತಲೇ ಜನತೆಗೆ ಧನ್ಯವಾದ ಅರ್ಪಿಸಿದ ಸಿದ್ದರಾಮಯ್ಯ]

karnataka

ಹುಟ್ಟುಹಬ್ಬ ಎಂಬ ಕಾರಣಕ್ಕೆ ಬ್ಯಾನರ್, ಫ್ಲೆಕ್ಸ್ ಹಾಕುವುದು, ಹಾರಗಳನ್ನು ಸಮರ್ಪಣೆ ಮಾಡುವುದು ಬೇಡ. ರಾಜ್ಯದ ಜನತೆಯ ಅಭಿಮಾನಕ್ಕೆ ನಾನು ಎಂದಿಗೂ ಚಿರರುಣಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.[ರಾಕೇಶ್‌ನನ್ನು ರಾಜಕೀಯಕ್ಕೆ ಕರೆತರುವುದು ಸಿದ್ದರಾಮಯ್ಯ ಕನಸಾಗಿತ್ತು]

ಸಿದ್ದರಾಮಯ್ಯ ಅವರ ಹಿರಿಯ ಮಗ ರಾಕೇಶ್ (39) ಅವರು ಕರಳುಬೇನೆ ಕಾಯಿಲೆಗೆ ತುತ್ತಾಗಿ ಚೇತರಿಕೆ ಕಾಣದೆ ಜುಲೈ 30 ರಂದು ವಿಧಿವಶರಾಗಿದ್ಗದರು. ಬೆಲ್ಜಿಯಂನ ಯೂನಿವರ್ಸಿಟಿ ಆಸ್ಪತ್ರೆಯ ಐಸಿಯುನಲ್ಲಿ ಒಂದು ವಾರದಿಂದ ಚಿಕಿತ್ಸೆ ನೀಡುತ್ತಿದ್ದರೂ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಗೃಹ ಸಚಿವ ಡಾ. ಜಿ ಪರಮೇಶ್ವರ ಸಹ ಈ ಬಾರಿ ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+