ರಾಹುಲ್-ಎಚ್‌ಡಿಕೆ ಭೇಟಿ, ಸಿದ್ದರಾಮಯ್ಯಗೆ ಮೂಗುದಾರ ಹಾಕಲು ಪ್ಲಾನ್?

Recommended Video

      ಸಿದ್ದರಾಮಯ್ಯನವರಿಗೆ ಮೂಗುದಾರ ಹಾಕೋಕೆ ಎಚ್ ಡಿ ಕೆ ಮೀಟ್ಸ್ ರಾಹುಲ್ ಗಾಂಧಿ | Oneindia Kannada

      ನವ ದೆಹಲಿ, ಜೂನ್ 18: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದು ದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಪ್ರಸ್ತುತ ರಾಜ್ಯದ ರಾಜಕೀಯ ಸನ್ನಿವೇಶದಿಂದಾಗಿ ಈ ಭೇಟಿ ಮಹತ್ವದ್ದಾಗಿದೆ.

      ಮೈತ್ರಿ ಸರ್ಕಾರದ ಎರಡೂ ಪಕ್ಷದ ಪ್ರಮುಖ ನಾಯಕರೂ ಭಿನ್ನ-ಭಿನ್ನ ಅಭಿಪ್ರಾಯಗಳನ್ನು ಹೊಂದಿ ತಮ್ಮದೇ ಅಂತಿಮ ಎಂಬ ನಿಲುವು ಪ್ರದರ್ಶಿಸುತ್ತಿದ್ದಾರೆ. ಇದು ಮೈತ್ರಿಯಲ್ಲಿ ಸಣ್ಣ ಬಿರುಕು ಮೂಡಿಸಿರುವ ಸೂಚನೆ ನೀಡುತ್ತಿದೆ ಹಾಗಾಗಿ ಕುಮಾರಸ್ವಾಮಿ ಅವರ ರಾಹುಲ್ ಭೇಟಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

      ದೆಹಲಿಯ ತುಘಲಕ್ ರಸ್ತೆಯಲ್ಲಿನ ನಿವಾಸದಲ್ಲಿ ರಾಹುಲ್ ಗಾಂಧಿ ಹಾಗೂ ಕುಮಾರಸ್ವಾಮಿ ಚರ್ಚೆ ನಡೆಸಿದ್ದು, ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

      Karnataka CM Kumaraswamy met Rahul Gandhi today

      ಸಚಿವ ಸಂಪುಟ, ಬಜೆಟ್ ಮಂಡನೆ ಬಗ್ಗೆ ಕಾಂಗ್ರೆಸ್ ನಾಯಕರು ಯಾವುದೇ ಹೇಳಿಕೆಗಳನ್ನು ನೀಡದಂತೆ ಹಾಗೂ ಸಂಪುಟದಲ್ಲಿರದ ಕಾಂಗ್ರೆಸ್‌ನ ಹಿರಿಯ ನಾಯಕರು ಸರ್ಕಾರದ ನೀತಿಗಳಲ್ಲಿ ತಲೆ ಹಾಕದಂತೆ ಸೂಚಿಸುವಂತೆ ರಾಹುಲ್ ಅವರನ್ನು ಎಚ್‌ಡಿಕೆ ಕೋರುವ ಸಾಧ್ಯತೆ ಇದೆ.

      ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್‌ನಲ್ಲಿ ಎದ್ದಿರುವ ಭಿನ್ನಮತದಿಂದ ಸರ್ಕಾರಕ್ಕೆ ಪೆಟ್ಟಾಗುವ ಸಾದ್ಯತೆ ಇದ್ದು ಆದಷ್ಟು ಭೇಗ ಭಿನ್ನಮತ ಶಮನಗೊಳಿಸುವಂತೆಯೂ ಕುಮಾರಸ್ವಾಮಿ ಅವರು ರಾಹುಲ್ ಅವರನ್ನು ಮನವಿ ಮಾಡಲಿದ್ದಾರೆ.

      ಸಿದ್ದರಾಮಯ್ಯ ಅವರು ಅಡ್ಡಗಾಲು ಹಾಕುತ್ತಿರುವ ಬಜೆಟ್ ಮಂಡನೆ ವಿಷಯವನ್ನೂ ಪ್ರಸ್ತಾಪಿಸಲಿದ್ದು. ಸಿದ್ದರಾಮಯ್ಯ ಅವರಿಗೆ ರಾಹುಲ್ ಗಾಂಧಿ ಅವರಿಂದ ಮೂಗುದಾರ ಹಾಕಿಸುವ ಪ್ರಯತ್ನವನ್ನೂ ಕುಮಾರಸ್ವಾಮಿ ಅವರು ಮಾಡಲಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+