Karnataka CM Crisis: ಡಿಕೆಶಿ ಬೆನ್ನಿಗೆ ನಿಂತ ಒಕ್ಕಲಿಗ ಶ್ರೀಗಳು... ಆಕ್ಷೇಪಿಸಿದ ಕಾಗಿನೆಲೆ ಸ್ವಾಮೀಜಿಗಳಿಂದ ಕೌಂಟರ್...
Vokkaliga Vs Kuruba: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯಂತಹ ಮಹತ್ವದ ಬೆಳವಣಿಗೆ ನಡೆಯುತ್ತಿರುವ ಮಧ್ಯ ರಾಜಕೀಯ ವಿಚಾರಕ್ಕೆ ಸ್ವಾಮೀಜಿಗಳ ಪ್ರವೇಶವಾಗಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮುಂದಿನ ಬಾಕಿ ಅವಧಿವರೆಗೆ ಮುಖ್ಯಮಂತ್ರಿ ಆಗಬೇಕು. ಹೈಕಮಾಂಡ್ ನಿರ್ಧಾರ ಪ್ರಕಟಿಸಬೇಕು ಎಂದು ಶ್ರೀ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲನಾಥ ಸ್ವಾಮೀಜಿ ಅವರು ಪ್ರತಿಕ್ರಿಯಿಸಿದ್ದಾರೆ. ಇದರೊಂದಿಗೆ ಒಕ್ಕಲಿಗರ ಸಂಘವು ಡಿಸಿಎಂ ಬೆನ್ನಿಗೆ ನಿಂತಿದೆ. ಈ ಮೂಲಕ ಡಿಕೆಶಿ ಪರ ಒಕ್ಕಲಿಗರ ಶ್ರೀಗಳು ಶಂಖನಾದ ಮೊಳಗಿಸಿದ್ದಾರೆ. ಇವರಿಗೆ ಕಾಗಿನೆಲೆ ಪೀಠದ ಸ್ವಾಮೀಜಿಗಳು ಕೌಂಟರ್ ನೀಡಿದ್ದಾರೆ.
ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ಮಧ್ಯ ಕುರ್ಚಿ ಕಾದಾಟ ನಡೆದಿದೆ. ಕಾಂಗ್ರೆಸ್ ಸರ್ಕಾರದ ಬಾಕಿ ಅವಧಿಕಾರಾವಧಿಯ ಮುಂದಿನ ಸಿಎಂ ಯಾರು? ಎಂಬುದರ ಮೇಲೆ ರಾಜ್ಯದ ಆಡಳಿತ ಯಂತ್ರ ನಿಂತಿದೆ. ಕಳೆದೊಂದು ವಾರದಿಂದ ಇದೇ ಚರ್ಚೆ ಆಗುತ್ತಿದೆ. ಜನರು, ರೈತರಿಗೆ ನೀಡಿದ ಭರವಸೆ ಕಡೆಗಣಿಸಿ ನಾಯಕರು ಅಧಿಕಾರಕ್ಕಾಗಿ ಹಾತೊರೆಯುತ್ತಿದ್ದಾರೆ ಎಂದು ದೂರಲಾಗಿದೆ.

ಡಿಕೆಶಿ ಸಿಎಂ ಆಗಬೇಕು: ಆದಿಚುಂಚನಗಿರಿ ಸ್ವಾಮೀಜಿ
ಡಿಕೆ ಶಿವಕುಮಾರ್ ಬಣ ತಮ್ಮ ನೆಚ್ಚಿನ ನಾಯಕರಿಗೆ ಸಿಎಂ ಸ್ಥಾನ ನೀಡುವಂತೆ ಒತ್ತಡ ಹಾಕುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಬಣದವರು ಹಾಲಿ ಸಿಎಂ ಮುಂದುವರಿಯಬೇಕೆಂದು ಕಸರತ್ತು ನಡೆಸಿದ್ದಾರೆ. ಈ ಮಧ್ಯೆ ಒಕ್ಕಲಿಗ ಸಮುದಾಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ಪ್ರತಿಕ್ರಿಯಿಸಿದ್ದು, ಡಿಕೆ ಶಿವಕುಮಾರ್ ಪರ ಮಾತನಾಡಿದ್ದಾರೆ.
ಪಕ್ಷಕ್ಕಾಗಿ ಡಿಕೆ ಶಿವಕುಮಾರ್ ಅವರು ಶ್ರಮಿಸಿದ್ದಾರೆ. ಜೀವ ಪಣಕ್ಕಿಟ್ಟು ಹೋರಾಡಿದ್ದಾರೆ. ಡಿಕೆ ಶಿವಕುಮಾರ್ ಅವರು ಸಿಎಂ ಆಗದಿದ್ದರೆ ಬೇಸರವಾಗಲಿದೆ. ಪಕ್ಷ ಅಧಿಕಾರಕ್ಕೆ ತಂದ ಹೋರಾಟಗಾರ ಡಿಕೆ ಶಿವಕುಮಾರ್ ಅವರೇ ಮುಂದಿನ 2.5 ವರ್ಷ ಸಿಎಂ ಆಗಲಿದ್ದಾರೆ. ಅವರಿಗೆ ಸಿಎಂ ಸ್ಥಾನ ಅವಕಾಶ ಸಿಗುವ ಭರವಸೆ ಇತ್ತು. ಅವರನ್ನು ಮುಖ್ಯಮಂತ್ರಿ ಆಗಿ ಮಾಡಬೇಕು. ಈ ಮೂಲಕ ಕಾಮಗ್ರೆಸ್ ಹೈಕಮಾಂಡ್ ಎಲ್ಲ ಗೊಂದಲಗಳಿಗೆ ತೆರೆ ಎಳೆಯಬೇಕು ಎಂದು ಹೇಳಿದ್ದಾರೆ.
ಡಿಕೆಶಿ ಬೆನ್ನಿಗೆ ಒಕ್ಕಲಿಗರ ಸಂಘ, ಮಹತ್ವದ ಸುದ್ದಿಗೋಷ್ಠಿ
ಒಕ್ಕಲಿಗ ಶ್ರೀಗಳು ಮಾತ್ರವಲ್ಲ, ಇಡೀ ಒಕ್ಕಲಿಗರ ಸಮುದಾಯ ಡಿಸಿಎಂ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವುದನ್ನು ಎದುರು ನೋಡುತ್ತಿದೆ. ಡಿಕೆಶಿ ಬೆಂಬಲಿಸಿ ಇಂದು ಬೆಂಗಳೂರಿನಲ್ಲಿ ರಾಜ್ಯ ಒಕ್ಕಲಿಗರ ಸಂಘದಿಂದ ಮಹತ್ವದ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಸಮುದಾಯದ ನಿಲುವು, ಆಶಯಗಳನ್ನು ಅವರು ಕಾಂಗ್ರೆಸ್ ವರಿಷ್ಠರಿಗೆ ರವಾನಿಸಲಾಗಿದ್ದಾರೆ ಎನ್ನಲಾಗಿದೆ.
ಆದಿಚುಂಚನಗಿರಿ ಸ್ವಾಮೀಜಿ vs ಕಾಗಿನೆಲೆ ಸ್ವಾಮೀಜಿಗಳು
ನಿರ್ಮಲಾನಂದನಾಥ ಸ್ವಾಮೀಜಿ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿಗಳು, "ಮುಖ್ಯಮಂತ್ರಿಗಳನ್ನು ಆರಿಸುವುದು ಶಾಸಕರು. ಈ ಬಗ್ಗೆ ತಿರ್ಮಾನಿಸುವುದು ಹೈಕಮಾಂಡ್. ಸ್ವಾಮೀಜಿಗಳು ಸಿಎಂ ಯಾರೆಂದು ನಿರ್ಣಯಿಸುವುದು ಶಾಸಕರೇ ಹೊರತು ಸ್ವಾಮೀಜಿಗಳಲ್ಲ' ಎಂದು ಕೌಂಟರ್ ನೀಡಿದ್ದಾರೆ.
ಕಾಗಿನೆಲೆ ಗುರುಪೀಠ ಶಾಖಾಮಠ ತಿಂಥಣಿ ಶ್ರೀ ಸಿದ್ಧರಾಮನಂದಪುರಿ ಶ್ರೀ ಗಳು ಸಹ ಹಾವೇರಿಯಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿಕೆಯನ್ನು ಆಕ್ಷೇಪಿಸಿದ್ದಾರೆ. "ರಾಜಕೀಯದಲ್ಲಿ ಸ್ವಾಮೀಜಿಗಳ ಪ್ರವೇಶ ಸೂಕ್ತ ಅಲ್ಲ. ಸ್ವಾಮೀಜಿಗಳು ಒಂದು ಸಮುದಾಯಕ್ಕೆ ಮಾತ್ರ ಸಿಮೀತವಲ್ಲ. ಸ್ವಾಮೀಜಿಗಳು ಎಲ್ಲ ಸಮುದಾಯಕ್ಕೆ ಸೇರಿದವರು. ರಾಜಕೀಯದಲ್ಲಿ ಮಠಾಧೀಶರ ಮಧ್ಯ ಪ್ರವೇಶ ಸರಿಯಲ್ಲ' ಎಂದು ಹೇಳಿದ್ದಾರೆ.












Click it and Unblock the Notifications