Rain Alert: ಮುಂದಿನ ಮೂರು ಗಂಟೆಗಳ ಕಾಲ ಭರ್ಜರಿ ಮಳೆ! ಬೆಂಗಳೂರು ಸೇರಿದಂತೆ ಈ ಜಿಲ್ಲೆಗಳಿಗೆ ಅಲರ್ಟ್!

ಮಳೆ.. ಮಳೆ.. ಬೆಂಗಳೂರು ಸೇರಿದಂತೆ ತುಮಕೂರು, ಚಿಕ್ಕಮಗಳೂರು, ಶಿವಮೊಗ್ಗ ಹಾಗೇ ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಮೈಸೂರು ಸುತ್ತಮುತ್ತಲ ಪ್ರದೇಶಗಳ ಜನರಿಗೆ ಇಂದು ಬೆಳಗ್ಗೆಯಿಂದಲೇ ಆಘಾತ ಎದುರಾಗಿದೆ. ಯಾಕಂದ್ರೆ ಬೆಳ್ಳಂಬೆಳಗ್ಗೆ ಭರ್ಜರಿ ರಣ ಮಳೆ ಶುರುವಾಗಿದೆ. ಹಾಗಾದ್ರೆ ಮಳೆ ಇಷ್ಟಕ್ಕೇ ಇವತ್ತು ನಿಂತು ಹೋಗುತ್ತಾ? ಮಳೆಯ ಅಬ್ಬರ ಮುಂದುವರಿಯುತ್ತಾ? ಬನ್ನಿ ತಿಳಿಯೋಣ.

ಹೌದು, ಕರ್ನಾಟಕದಲ್ಲಿ ಮುಂಗಾರು ಮಳೆ ಅಬ್ಬರ ಕಡಿಮೆ ಆಗುವ ಬದಲು ಜೋರಾಗುತ್ತಿದೆ. ಅದರಲ್ಲೂ ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಇದೀಗ ಮಳೆಯ ಅಬ್ಬರ ಬಲು ಜೋರಾಗಿದೆ. ಹೀಗಾಗಿ ಜನರು ಕೂಡ ಇವತ್ತು ಆಫಿಸ್ & ಶಾಲೆಗಳಿಗೆ ಮಕ್ಕಳನ್ನ ಕಳುಹಿಸಲು ಚಿಂತೆ ಮಾಡುವಂತಾಗಿದೆ. ಇವತ್ತು ನಸುಕಿನಿಂದಲೇ ಮಳೆ ಅಬ್ಬರ ಶುರುವಾಗಿದ್ದು, ಮುಂದಿನ 3 ಗಂಟೆಗಳಲ್ಲಿ ಮತ್ತಷ್ಟು ಭರ್ಜರಿ ಮಳೆ ಬೀಳುವ ಕುರಿತು ಈಗ ವಾರ್ನಿಂಗ್ ನೀಡಲಾಗಿದೆ. ಹಾಗಾದ್ರೆ ಬೆಂಗಳೂರಿನ ಪರಿಸ್ಥಿತಿ ಏನು? ಮುಂದೆ ಓದಿ.

Karnataka Capital Bengaluru And Nearby Cities Will Witness Heavy Rain In 3 Hours

ಬೆಂಗಳೂರಿನಲ್ಲಿ ಭಾರಿ ಕಟ್ಟೆಚ್ಚರ!

ಮುಂಗಾರು ಮಳೆ ಮೋಡಗಳು ಇದೀಗ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ & ಮಂಡ್ಯ ಭಾಗದಲ್ಲಿ ಹೆಚ್ಚಾಗಿ ಆವರಿಸಿಕೊಂಡಿವೆ. ಇದೇ ಕಾರಣಕ್ಕೆ ಇದೀಗ ಭಾರಿ ಕಟ್ಟೆಚ್ಚರ ವಹಿಸಲಾಗಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ಮಳೆಯ ಅಬ್ಬರ ಮತ್ತಷ್ಟು ಜೋರಾಗುವ ಸಾಧ್ಯತೆ ದಟ್ಟವಾಗಿದೆ.

ಈಗಾಗಲೇ ಭರ್ಜರಿ ಮಳೆ ಪರಿಣಾಮ ತತ್ತರಿಸಿ ಹೋಗಿರುವ ಜನರಿಗೆ ಇದು ಆಘಾತದ ಮೇಲೆ ಆಘಾತ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ, ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ರಾತ್ರಿ ಸುರಿದ ಮಳೆಗೆ ಈಗಾಗಲೇ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಅವಾಂತರ ಸೃಷ್ಟಿಯಾಗಿದ್ದು, ಬಿಬಿಎಂಪಿ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿದ್ದಾರೆ.

ಮಳೆ ಸಾಕು ಅಂತಿದ್ದಾರೆ ಜನ!

ಕರ್ನಾಟಕದಲ್ಲಿ ಈಗಾಗಲೇ ಸಾಕು ಸಾಕು ಎನಿಸುವಷ್ಟು ಮಳೆ ಬಿದ್ದಿದೆ. ಹೀಗಾಗಿಯೇ ಜನ ಕೂಡ ಮಳೆ ನಿಂತರೆ ಸಾಕಪ್ಪ ಅಂತಿದ್ದಾರೆ. ಒಂದ್ಕಡೆ ಭಾರಿ ಮಳೆ ಪರಿಣಾಮ ಪ್ರಳಯ ಸೃಷ್ಟಿ ಆಗಿದ್ದರೆ ಮತ್ತೊಂದ್ಕಡೆ ಉತ್ತರ ಕರ್ನಾಟಕ ಭಾಗದಲ್ಲಿ ಮಹಾರಾಷ್ಟ್ರ ಮೂಲಕ ಹರಿದು ಬರುತ್ತಿರುವ ನದಿ ನೀರು ಪ್ರವಾಹ ಸೃಷ್ಟಿ ಮಾಡಿತ್ತು. ಕರ್ನಾಟಕದ ಮಲೆನಾಡು & ಕರಾವಳಿ ಪ್ರದೇಶಗಳ ಪರಿಸ್ಥಿತಿ ಬಿಡಿಸಿ ಹೇಳಬೇಕಿಲ್ಲ. ಇಂತಹ ಸ್ಥಿತಿ ಇದ್ದಾಗ ಕೂಡ, ಮಳೆರಾಯ ಸೈಲೆಂಟ್ ಆಗದೆ ಮತ್ತಷ್ಟು ವೈಲೆಂಟ್ ಆಗುತ್ತಿದ್ದಾನೆ. ಅದರಲ್ಲೂ ಕರ್ನಾಟಕದ ರಾಜಧಾನಿ ಬೆಂಗಳೂರಿನ ಪರಿಸ್ಥಿತಿ ಈಗ ಮಾತ್ರವಲ್ಲ ಮುಂದಿನ ದಿನಗಳಲ್ಲಿ ಕೂಡ ಮತ್ತಷ್ಟು ಸೂಕ್ಷ್ಮವಾಗುವ ಭಯ ಕಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+