Cabinet Meeting: ಇಂದು ಮಹತ್ವದ ಸಚಿವ ಸಂಪುಟ ಸಭೆ: ಜಾತಿ ಗಣತಿ ವರದಿ ಬಗ್ಗೆ ನಿರ್ಧಾರ!
ಬೆಂಗಳೂರು, ಏಪ್ರಿಲ್ 17: ಕರ್ನಾಟಕದಾದ್ಯಂತ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ (ಜಾತಿ ಜನಗಣತಿ) ವರದಿ ಬಿಡುಗಡೆ ಚರ್ಚೆ, ವಿರೋಧ ಜೋರಾಗಿದೆ. ಇಂದು ಮಹತ್ವದ ನಿರ್ಧಾರ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಜರುಗಲಿದೆ. ಇಲ್ಲಿ ಸಚಿವರು ತಮ್ಮ ಅಭಿಪ್ರಾಯ ತಿಳಿಸಲಿದ್ದಾರೆ. ಅದರ ಆಧಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಜಾತಿ ಗಣತಿ ವರಿ ಜಾರಿ ಬಗ್ಗೆ ಮಹತ್ವದ ತಿರ್ಮಾನ ಪ್ರಕಟಿಸಲಿದ್ದಾರೆ.
ಒಂದು ವಾರದ ಹಿಂದಷ್ಟೇ ಜಾತಿ ಗಣತಿ ವರದಿ ಜಾರಿ ಮಾಡಲಾಗುವುದು. ಈ ಸಂಬಂಧ ವರದಿ ಸಂಪುಟಗಳನ್ನು ಸಚಿವರಿಗೆ ನೀಡಿದ್ದು, ಅವರು ಅದನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ, ಅಭಿಪ್ರಾಯ ಮಂಡಿಸುವಂತೆ ಮುಖ್ಯಮಂತ್ರಿಗಳು ಎಲ್ಲ ಸಚಿವರಿಗೆ ಸೂಚಿಸಿದ್ದರು. ಅದರಂತೆ ಸಚಿವರ ಕೈ ಸೇರಿದ ವರದಿಯಲ್ಲಿನ ಪ್ರಮುಖ ಅಂಶಗಳು, ಅಂಕಿ ಸಂಖ್ಯೆಗಳು ಸಾರ್ವಜನಿಕಗೊಂಡವು. ಇದಾಗುತ್ತಿದ್ದಂತೆ ವರದಿ ತಪ್ಪಿದೆ. ಮರಳಿ ಸಮೀಕ್ಷೆ ಮಾಡಿ ಎಂಬ ಕೂಗು ಜೋರಾಗಿ ಕೇಳಿ ಬರುತ್ತಿದೆ.

ಏಪ್ರಿಲ್ 17ರಂದು ಗುರುವಾರ ಜಾತಿ ಜನಗಣತಿ ವರದಿ ಬಗ್ಗೆ ಮಹತ್ವದ ಚರ್ಚೆಗೆ, ತಿರ್ಮಾನ ಕೈಗೊಳ್ಳಲು ಸಚಿವ ಸಂಪುಟ ಸಭೆ ನಡೆಸುವುದಾಗಿ ಅಂದೇ ಸಿಎಂ ತಿಳಿಸಿದ್ದರು. ಲಿಂಗಾಯತರು, ಒಕ್ಕಲಿಗರ ಬೆನ್ನಲ್ಲೆ, ಬ್ರಾಹ್ಮಣ, ಗಾಣಿಗ, ಕ್ರೈಸ್ತರು ಸೇರಿದಂತೆ ವಿವಿಧ ಸಮುದಾಯಗಳು ಗಣತಿ ಜಾರಿಯಾಗದಂತೆ ವಿರೋಧಿಸಿವೆ. ಈ ಹಳೆಯ ವರದಿ ತಪ್ಪಾಗಿದೆ. ಮರು ಪರಿಶೀಲಿಸಿ, ಹೊಸ ಸಮೀಕ್ಷೆ ಮಾಡುವಂತೆ ಆಗ್ರಹಿಸಿದ್ದಾರೆ. ಒಕ್ಕಲಿಗರು ನಮ್ಮ ಜನರ ಸಮೀಕ್ಷೆ ಮಾಡಿ ಸರ್ಕಾರ ನೀಡಲಾಗುವುದು. ನಮ್ಮ ಜನಸಂಖ್ಯೆ ಎಷ್ಟಿದೆ ಎಂದು ನಮಗೆ ಗೊತ್ತಿದೆ ಎಂದಿದ್ದಾರೆ.
ಜಾತಿ ಗಣತಿ ವರದಿ ಜಾರಿ ಸುಳಿವು ಕೊಟ್ಟ ಸಿಎಂ ?
ಇತ್ತಿ ಸಿದ್ದರಾಮಯ್ಯ ಅವರು ಯಾರಿಗೂ ಅನ್ಯಾಯ ಮಾಡಲು ಬಿಡುವುದಿಲ್ಲ. ಇದು ಜಾತಿ ಗಣತಿ ಅಲ್ಲ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವರದಿ ಜಾರಿಯಿಂದ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ಈ ಮೂಲಕ ಇಂದು ಸಂಜೆ ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ ಪ್ರಕಟವಾಗುವ ನಿರೀಕ್ಷೆಗಳು ಇವೆ. ವರದಿ ಜಾರಿ ಘೋಷಣೆ ಮಾಡಬಹುದು. ಇಲ್ಲವೇ ವರದಿ ಕುರಿತು ಮತ್ತಷ್ಟು ಆಳ ವಿಸ್ತೃತ ಪರಿಶೀಲನೆಗಾಗಿ ಸಂಪುಟ ಉಪ ಸಮಿತಿ ರಚಿಸುವ ನಿರೀಕ್ಷೆ ಇವೆ. ಒಟ್ಟಾರೆ ಜಾತಿ ಗಣತಿ ವರದಿ ಬಿಡುಗಡೆ, ಜಾರಿ ಕುರಿತು ಸರ್ಕಾರದ ಮುಂದಿನ ನಡೆ ರಾಜ್ಯವ್ಯಾಪ್ತಿ ಎಲ್ಲ ಧರ್ಮಗಳು, ಧರ್ಮದ ಜಾತಿಗಳು, ಉಪಜಾತಿ, ವಿವಿಧ ಸಮುದಾಯದ ಜನರಲ್ಲಿ ಕುತೂಹಲ ಹುಟ್ಟುವಂತೆ ಮಾಡಿದೆ.
ಹಿಂದಿನಿಂದಲೂ ರಾಜ್ಯದಲ್ಲಿ ಲಿಂಗಾಯತರ ಜನಸಂಖ್ಯೆ ಹೆಚ್ಚಿಸಿದ್ದು, ಅವರ ನಂತರ ಒಕ್ಕಲಿಗರು ಎಂಬುದು ತಿಳಿದಿದೆ. ಇದೀಗ ಮುಸ್ಲಿಮರು, ಪರಿಶಿಷ್ಟ ಜಾತಿ ಸಮುದಾಯ ಜನರು ಹೆಚ್ಚಿಸಿದ್ದಾರೆ ಎಂದು ಸರ್ಕಾರ ನೀಡಿರುವ ಅಂಕಿ ಸಂಖ್ಯೆಗೆ ವಿರೋಧ ಕೇಳಿ ಬಂದಿದೆ. ಹೀಗಾಗಿ ವರದಿ ಬಿಡುಗಡೆ, ಜಾರಿ ಸರಿಯಲ್ಲ ಎಂದು ಹಲವರ ವಾದವಾಗಿದೆ.
ಇತ್ತ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟವು ಸರ್ಕಾರದ ಪರವಾಗಿ ಧ್ವನಿ ಎತ್ತಿದೆ. ರಾಜ್ಯವು ಕೇವಲ ಲಿಂಗಾಯತರು, ಒಕ್ಕಲಿಗರ ಸ್ವತ್ತಲ್ಲ. ವರದಿ ಜಾರಿ ಮಾಡಲೇಬೇಕು ಎಂದು ಸರ್ಕಾರದ ಮೇಲೆ ಒತ್ತಡ ತರಲು ಮುಂದಾಗಿದೆ. ಜಾತಿ ಗಣತಿ ವರದಿಗೆ ಆಕ್ಷೇಪವೆತ್ತಿರುವ ಸಚಿವರು, ಶಾಸಕರು, ನಾಯಕರ ಮನೆಗೆ ಮುತ್ತಿಗೆ ಹಾಕಿ, ಘೇರಾವ್ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications