Karnataka Cabinet: ಸಚಿವರಿಗೆ ಖಾತೆ ಹಂಚಿಕೆ ಶಾಕಿಂಗ್ ಹೇಳಿಕೆ ಕೊಟ್ಟ ಡಿ.ಕೆ ಶಿವಕುಮಾರ್; ಎಚ್.ಡಿ ಕುಮಾರಸ್ವಾಮಿ ಬಗ್ಗೆ ಕಿಡಿ!

Karnataka Cabinet: ಕರ್ನಾಟಕದಲ್ಲಿ ನೂತನ ಸಚಿವ ಸಂಪುಟ ರಚನೆಯಾದರೂ ಸಹ ಖಾತೆಗಳ ಹಂಚಿಕೆ ಆಗಿಲ್ಲ. ಕರ್ನಾಟಕದಲ್ಲಿ 21ಕ್ಕೂ ಹೆಚ್ಚು ಖಾತೆಗಳು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಬಳಿಯೇ ಇದೆ. ಕರ್ನಾಟಕದಲ್ಲಿ ನೂತನ ಸರ್ಕಾರದ ರಚನೆಯಾಗಿ ಎರಡು ತಿಂಗಳ ಮೇಲಾದರೂ ಪೂರ್ಣ ಪ್ರಮಾಣದ ಸರ್ಕಾರ ಅಸ್ತಿತ್ವಕ್ಕೆ ಬಂದಿಲ್ಲ. ರಾಜ್ಯದಲ್ಲಿ ಇನ್ನೂ ಹಲವು ಸಚಿವರಿಗೆ ಖಾತೆಗಳೇ ಹಂಚಿಕೆಯಾಗಿಲ್ಲ. ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಿದ ಒಂದೂವರೆ ತಿಂಗಳ ನಂತರ ಸಚಿವ ಸಂಪುಟ ವಿಸ್ತರಣೆ ಆಗಿತ್ತು. ಆದರೆ ಇದೀಗ ಸಚಿವ ಸಂಪುಟ ವಿಸ್ತರಣೆಯಾದರೂ ಸಹ ಹೊಸ ಸಚಿವರಿಗೆ ಖಾತೆಗಳ ಹಂಚಿಕೆಯಾಗಿಲ್ಲ. ಹೀಗಾಗಿ ಗೊಂದಲ ಮುಂದುವರಿದಿದೆ.

ಇದೀಗ ಖಾತೆ ಹಂಚಿಕೆಯ ಗೊಂದಲ ಇನ್ನೂ ಮುಂದುವರಿದಿದೆ. ಈ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ನಾಳೆಯೇ ಖಾತೆ ಹಂಚಿಕೆ ಮಾಡಬೇಕು ಎಂದಿಲ್ಲ. ಇನ್ನೂ ಸಮಯವಿದೆ ನೋಡಿಕೊಂಡು ಖಾತೆ ಹಂಚಿಕೆ ಮಾಡಲಾಗುವುದು ಎಂದಿದ್ದಾರೆ.

Karnataka Cabinet

Karnataka Cabinet: ಖಾತೆ ಹಂಚಿಕೆ - ಎಚ್‌.ಡಿ ಕುಮಾರಸ್ವಾಮಿ ಬಗ್ಗೆ ಡಿ.ಕೆ ಶಿವಕುಮಾರ್ ಹೇಳಿದ್ದೇನು

ಇನ್ನು ಕರ್ನಾಟಕದಲ್ಲಿ ಖಾತೆ ಹಂಚಿಕೆ ಹಾಗೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಬಗ್ಗೆಯೂ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮಾತನಾಡಿದ್ದಾರೆ. ದೆಹಲಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಭೇಟಿ ಮಾಡಿದ ನಂತರ ಮಾತನಾಡಿದ ಡಿ.ಕೆ ಶಿವಕುಮಾರ್ ಅವರು, ಸಚಿವ ಸಂಪುಟದಲ್ಲಿ ಮಹಿಳೆಗೆ ಒಂದು ಸ್ಥಾನ ಕೊಡಲೇಬೇಕು, ಕೊಡುತ್ತೇವೆ. ಅಷ್ಟೊಂದು ಅರ್ಜೆಂಟ್ ಇಲ್ಲ. ನಾವು ಸ್ಥಾನಮಾನ ಕೊಡಲಿದ್ದೇವೆ. ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದಾಗ ಎಷ್ಟು ದಿನಗಳಿಗೆ ಸಂಪುಟ ಆಯ್ತು? ಎಷ್ಟು ದಿನ ಅವರು ತಗೊಂಡಿದ್ದರು ಅಂತ ಪ್ರಶ್ನಿಸಿದ್ದಾರೆ.

ಅಧಿವೇಶನದಲ್ಲಿ ಯಾರು ಏನೇ ಪ್ರಶ್ನೆ ಕೇಳಿದರೂ ನಾನೊಬ್ಬನೇ ಉತ್ತರ ಕೊಡುತ್ತೇನೆ. ಇಲ್ಲ ಎಂದಾದರೆ ಅವರಿಗೆ ಒಂದು ಇವರಿಗೆ ಒಂದು ಅಂತ ಕೊಟ್ಟು ಉತ್ತರ ಅಂತೂ ಕೊಡಲಿದ್ದೇನೆ ಎಂದರು. ಇನ್ನು ಸಚಿವ ಬಿ.ನಾಗೇಂದ್ರ ಇ.ಡಿ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಈ ದೇಶದಲ್ಲಿ ಯಾರ ಮೇಲೆ ಕೇಸ್ ಇಲ್ಲ ಹೇಳಿ, ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಅವರ ಮೇಲೆ ಕೇಸ್ ಇಲ್ವಾ, ಅವರು ಬೇಲ್ ತಗೊಂದುಕೊಂಡು ಹೊರಗಿಲ್ವಾ, ಡಿಕೆಶಿ ಜಾಮೀನು ತಂಗೊಡಿಲ್ವಾ ಅಂತ ಪ್ರಶ್ನೆ ಮಾಡಿದ್ದಾರೆ.

ಸಂಭಾವ್ಯ ಖಾತೆಗಳ ಪಟ್ಟಿ

ಎನ್. ಚಲುವರಾಯಸ್ವಾಮಿ - ಕೃಷಿ ಇಲಾಖೆ

ಕೆ.ಎಂ. ಶಿವಲಿಂಗೇಗೌಡ - ವಸತಿ ಇಲಾಖೆ

ವಿಜಯಾನಂದ ಕಾಶಪ್ಪನವರ್ - ಕೈಮಗ್ಗ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಇಲಾಖೆ

ಅಜಯ್ ಸಿಂಗ್ - ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ವಲಯ ಉದ್ದಿಮೆಗಳು

ರುದ್ರಪ್ಪ ಲಮಾಣಿ - ಅಬಕಾರಿ ಇಲಾಖೆ

ಎಚ್.ಸಿ. ಬಾಲಕೃಷ್ಣ - ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ

ಪಿ.ಎಂ. ನರೇಂದ್ರಸ್ವಾಮಿ - ಸಮಾಜ ಕಲ್ಯಾಣ ಇಲಾಖೆ

ಬಸವರಾಜ ರಾಯರೆಡ್ಡಿ - ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ, ಪ್ರವಾಸೋದ್ಯಮ

ಎಸ್.ಎಸ್. ಮಲ್ಲಿಕಾರ್ಜುನ - ತೋಟಗಾರಿಕೆ ಹಾಗೂ ಗಣಿ ಮತ್ತು ಭೂವಿಜ್ಞಾನ

ಜಮೀರ್ ಅಹಮದ್ ಖಾನ್ - ವಕ್ಫ್, ಹಜ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ

ಲಕ್ಷ್ಮಣ ಸವದಿ - ಸಹಕಾರ ಮತ್ತು ಸಕ್ಕರೆ ಇಲಾಖೆ

ಮಧು ಬಂಗಾರಪ್ಪ - ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

ಬಿ. ನಾಗೇಂದ್ರ - ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ

ಸಂತೋಷ್ ಎಸ್. ಲಾಡ್ - ಕಾರ್ಮಿಕ ಇಲಾಖೆ

ಶಿವರಾಜ ತಂಗಡಗಿ - ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಟಿ. ರಘುಮೂರ್ತಿ - ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ

ಪುಟ್ಟರಂಗಶೆಟ್ಟಿ - ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ

ಕೆ.ಎನ್. ಬಸವಂತಪ್ಪ - ಪೌರಾಡಳಿತ ಇಲಾಖೆ

ರಿಜ್ವಾನ್ ಅರ್ಷದ್ - ಉನ್ನತ ಶಿಕ್ಷಣ ಇಲಾಖೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+